Site icon Vistara News

ind vs pak : ಅವರೊಬ್ಬ ವಿಚಿತ್ರ ಮನುಷ್ಯ; ಗಂಭೀರ್ ಬಗ್ಗೆ ಶಾಹಿದ್​ ಅಫ್ರಿದಿ ವಿಭಿನ್ನ ಹೇಳಿಕೆ

Gambhir

ನವ ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ವೈರತ್ವವು ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತ್ಯಂತ ಆಕ್ರಮಣಕಾರಿ ಮನೋಭಾವ ತೋರುತ್ತದೆ. ಏಕೆಂದರೆ ಏಷ್ಯಾದ ಇಬ್ಬರು ದೊಡ್ಡ ತಂಡಗಳು ವರ್ಷಗಳಿಂದ ಹಲವಾರು ಜಿದ್ದಾಜಿದ್ದಿನ ಪ್ರದರ್ಶನಗಳನ್ನು ನೀಡುತ್ತಿವೆ. ಅದೇ ರೀತಿ ಆಟಗಾರರು ಮೈದಾನದ ಹೊರಗಡೆ ಮತ್ತು ಒಳಗೆ ತೀವ್ರ ಮಾತಿನ ಸಮರವನ್ನು ಮಾಡುತ್ತಾರೆ. ಕೆಲವೊಂದು ಬಾರಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದೂ ಇದೆ. ಅಂತೆಯೇ 2007ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಪಂದ್ಯದ ವೇಳೆ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ನಡುವೆ ವಾಗ್ವಾದ ನಡೆದಿತ್ತು. ಅದು ಸಾರ್ವಕಾಲಿಕ ಕ್ರಿಕೆಟ್​ ಜಗಳದ ಪಟ್ಟಿಗೆ ಸೇರಿದೆ.

ಆ ಜಳಗದ ಬಳಿಕ ಅವರಿಬ್ಬರು ಪರಸ್ಪರ ಜಗಳ ಮುಂದುವರಿಸಿದ್ದಾರೆ. ಕ್ರಿಕೆಟ್ ಮತ್ತು ರಾಜಕೀಯ ವಿಷಯಗಳಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅಫ್ರಿದಿಗೆ ಇದೇ ಕುರಿತು ಪ್ರಶ್ನೆ ಕೇಳಲಾಗಿತ್ತು. ಆಟದ ದಿನಗಳಲ್ಲಿ ಗಂಭೀರ್​ ಅವರನ್ನು ಪ್ರಚೋದಿಸಿದ್ದೀರಾ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಅವರು ಸ್ಲೆಡ್ಜಿಂಗ್ ಆಟದ ಅವಿಭಾಜ್ಯ ಅಂಗ. ಆದರೆ ಗಂಭೀರ್ ಅವರು ಇತರರಿಗಿಂತ ‘ವಿಭಿನ್ನ ಮನುಷ್ಯ ‘ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಗಂಭೀರ್ ಉತ್ತಮ ಆಟಗಾರ ಎಂಬುದನ್ನು ಹೇಳಿದ್ದಾರೆ.

ಇದನ್ನೂ ಓದಿ : Yashasvi Jaiswal: 14 ವರ್ಷಗಳಿಂದ ರೋಹಿತ್​ ಶರ್ಮ ಹೆಸರಿನಲ್ಲಿದ್ದ ದಾಖಲೆ ಮುರಿದ ಜೈಸ್ವಾಲ್​

ಮೈದಾನದ ಜಗಳಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದಿದೆ ಎಂದು ನಾನು ಭಾವಿಸುತ್ತೇನೆ. ವೋ ವಿಭಿನ್ನ ಕಿಸಾಮ್ ಕಾ ಪಾತ್ರ, ಆಮ್ ಪ್ಲೇಯರ್ಸ್ ಸೆ ಥೋಡಾ ಅಲಗ್ ಹೈ (ಅವರು ಸಾಮಾನ್ಯ ಆಟಗಾರರಿಗಿಂತ ವಿಭಿನ್ನ ಆಟಗಾರ ಹೊಂದಿದ್ದಾರೆ. ಟೀಮ್ ಇಂಡಿಯಾದಲ್ಲೂ ಅವರ ಖ್ಯಾತಿ ಪಡೆದವರು ಎಂದು ಹೇಳಿದ್ದಾರೆ.

ಇದನ್ನೂ ಓದಿ :

ಗಂಭೀರ್ ಅವರನ್ನು ಶ್ಲಾಘಿಸಿದ ಅಫ್ರಿದಿ, ಅವರು ಚೆಂಡಿನ ಮೇಲೆ ಉತ್ತಮ ಹಿಡಿತ ಹೊಂದಿದ್ದರು. ಭಾರತೀಯ ಬ್ಯಾಟರ್​ಗಲು ಆ ಕೌಶಲವನ್ನು ಹೊಂದಿದ್ದಾರೆ ಎಂದು ಹೇಳಿದರು. “ಬ್ಯಾಟಿಂಗ್​​ನಲ್ಲಿ ಉತ್ತಮ ಟೈಮಿಂಗ್ ಹೊಂದಿರುವ ಕೆಲವೇ ಕೆಲವು ಭಾರತೀಯ ಬ್ಯಾಟರ್​ಗಳಲ್ಲಿ ಗಂಭೀರ್ ಒಬ್ಬರು. ಅವರು ಅತ್ಯುತ್ತಮ ಆಟಗಾರ, “ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದ್ದಾರೆ.

ಕೈ ಕುಲುಕಿದ್ದ ಆಟಗಾರರು

ಈ ವರ್ಷದ ಆರಂಭದಲ್ಲಿ ದೋಹಾದಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್​ ನಡೆದ ಪಂದ್ಯದ ಸಮಯದಲ್ಲಿ ಅವರಿಬ್ಬರು ಪರಸ್ಪರ ಕೈಕುಲುಕಿದ್ದರು ಪಂದ್ಯದ ನಂತರ, ಅಫ್ರಿದಿ ಬ್ಯಾಟಿಂಗ್ ಮಾಡುವಾಗ ಗಂಭೀರ್ ಅವರಿಗೆ ಹೊಡೆತ ಬಿದ್ದ ನಂತರ ಅವರನ್ನು ವಿಚಾರಿಸಿದ್ದರು. ಈ ಎರಡು ಕ್ಷಣಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಭಿನ್ನಾಭಿಪ್ರಾಯಗಳ ಹೊರತಾಗಿಯೂ ಇವರಿಬ್ಬರು ತಮ್ಮ ಕ್ರೀಡಾ ಮನೋಭಾವಕ್ಕಾಗಿ ಪ್ರಶಂಸೆಗಳು ವ್ಯಕ್ತಗೊಂಡಿದ್ದವು.

Exit mobile version