ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಹಿರಿಯ ಆಲ್ರೌಂಡರ್ ಶಕಿಬ್ ಅಲ್ ಹಸನ್(Shakib Al Hasan) ತಾಳ್ಮೆ ಕಳೆದುಕೊಂಡು, ಅಂಪೈರ್ಗಳ ಜತೆ ಮತ್ತು ಅಭಿಮಾನಿಗಳ ನಡುವೆ ಈಗಾಗಲೇ ಹಲವು ಬಾರಿ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಸೂಪರ್ ಓವರ್(Shakib Al Hasan super over) ಆಡಲು ನಿರಾಕರಿಸಿ ಸುದ್ದಿಯಾಗಿದ್ದಾರೆ. ಇವರ ಈ ಕೆಟ್ಟ ನಿರ್ಧಾರದಿಂದ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.
ಎಲಿಮಿನೇಟರ್ ಪಂದ್ಯವಾದ ಬಾಂಗ್ಲಾ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ತಂಡದ ನಾಯಕ ಶಕಿಬ್ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕನಿಷ್ಟ 5 ಓವರ್ ಆಡಿಸಬೇಕು ಎಂದು ಹಠ ಹಿಡಿದರು. ಇದಕ್ಕೆ ಒಪ್ಪದ ಆಯೋಜಕರು ಪಂದ್ಯವನ್ನೇ ರದ್ದುಗೊಳಿಸಿದರು. ಈ ಪರಿಣಾಮ ಬಾಂಗ್ಲಾ ಟಗರ್ಸ್ ತಂಡ ಟೂನಿಯಿಂದಲೇ ಹೊರಬಿದ್ದಿರು. ಟೊರೊಂಟೊ ನ್ಯಾಷನಲ್ಸ್ ತಂಡ ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿತು. ಶಕೀಬ್ ಅಲ್ ಹಸನ್ ಅವರ ಈ ಕೆಟ್ಟ ನಿರ್ಧಾರ ಅನಗತ್ಯವಾಗಿ ತಂಡದ ಹಿನ್ನಡೆಗೆ ಕಾರಣವಾಯಿತು.
ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಆಡಲಿಳಿದು ವಿಶ್ವಕಪ್ ಆಡಿದ್ದರು.
ಇದನ್ನೂ ಓದಿ Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್
ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್ ಅವರೊಂದಿಗೆ ಶಕಿಬ್ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಅಂಪೈರ್ ಅವರು ಔಟ್ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್ ವಿಕೆಟ್ಗೆ ಕಾಲಿನಿಂದ ಒದ್ದು, ಅಭಿಮಾನಿಗೆ ಕ್ಯಾಪ್‌ನಿಂದ ಹಲ್ಲೆ ಮಾಡಿದ ವಿಡಿಯೊಗಳು ವೈರಲ್ ಆಗಿತ್ತು.
ಹಿಂದೊಮ್ಮೆ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಶಕಿಬ್ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಗುಂಪಿನ ಮಧ್ಯೆಯಿಂದ ಫೋಟೊ ತೆಗೆಯಲು ಮುಂದಾಗಿದ್ದ ಇದರಿಂದ ಸಿಟ್ಟಿಗೆದ್ದ ಶಕೀಬ್ತಲೆಯಿಂದ ಕ್ಯಾಪ್ ಎಳೆದು ಇದೇ ಕ್ಯಾಪ್‌ನಿಂದ ಒಂದೆರಡು ಬಾರಿ ಥಳಿಸಿದ್ದರು.