ಢಾಕಾ: ಬಾಂಗ್ಲಾದೇಶದ ಹಿರಿಯ ಕ್ರಿಕೆಟ್ ಆಟಗಾರ ಶಕಿಬ್ ಅಲ್ ಹಸನ್(Shakib Al Hasan) ಮೈದಾನದಲ್ಲಿ ಹಲವು ಬಾರಿ ಅತಿರೇಕದ ವರ್ತನೆ ತೋರುವು ಮೂಲಕ ಸುದ್ದಿಯಾಗಿದ್ದರು. ಇದೀಗ ಮತ್ತೆ ಅವರು ತಾಳ್ಮೆ ಕಳೆದುಕೊಂಡು ಅಂಪೈರ್ ಮೇಲೆ ರೇಗಾಡಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಅಂಪೈರ್ ವೈಡ್ ನೀಡದಕ್ಕೆ ಶಾಕಿಬ್ ಲೆಗ್-ಅಂಪೈರ್ ಮೇಲೆ ರೇಗಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಕಿಬ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಎದುರಾಳಿ ತಂಡದ ಬೌಲರ್ ಬೌನ್ಸರ್ ಎಸೆತವನ್ನು ಎಸೆದರು. ಚೆಂಡು ಶಕಿಬ್ ಅವರ ತಲೆಯ ಮೇಲಿನಿಂದ ಸಾಗಿ ಕೀಪರ್ ಕೈ ಸೇರಿತು. ಈ ಎಸೆತವನ್ನು ಶಕಿಬ್ ವೈಡ್ ಎಂದು ಭಾವಿಸಿದ್ದರು. ಆದರೆ ಅಂಪೈರ್ ಇದನ್ನು ಓವರ್ನ ಮೊದಲ ಬೌನ್ಸರ್ ಎಂದು ನಿರ್ಧರಿಸಿದರು. ಈ ವೇಳೆ ಕೋಪಗೊಂಡ ಶಕಿಬ್ ಲೆಗ್ ಅಂಪೈರ್ ಬಳಿ ತರೆಳಿ ವಾಗ್ವಾದ ನಡೆಸಿದರು.
ಪಂದ್ಯದ ಬಳಿಕ ಮಾತನಾಡಿದ ಶಕಿಬ್, ಬಾಂಗ್ಲಾ ಪ್ರೀಮಿಯರ್ ಲೀಗ್ ಹೇಗೆ ನಡೆಸಬೇಕು ಎಂಬುವುದನ್ನು ನಾನು ಹೇಳಿಕೊಡುವೆ. ತನ್ನನ್ನು ಉಸ್ತುವಾರಿಯನ್ನಾಗಿಸಿದರೆ ತಪ್ಪುಗಳನ್ನು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | IND VS SL | ರಾಜ್ಕೋಟ್ನಲ್ಲಿ ಟೀಮ್ ಇಂಡಿಯಾ ಸರಣಿ ಗೆಲುವಿನ ದರ್ಬಾರ್!