Site icon Vistara News

Shakib Al Hasan | ಭಾರತ ಕಪ್​ ಗೆಲ್ಲಲು ಬಂದಿದೆ, ನಾವು ಸುಮ್ಮನೆ ಬಂದಿದ್ದೇವೆ; ಶಕಿಬ್​ ಹೀಗೆ ಹೇಳಿದ್ದು ಯಾಕೆ?

t20

ಅಡಿಲೇಡ್​: ಟಿ20 ವಿಶ್ವ ಕಪ್​ನ ಸೆಮಿಫೈನಲ್ ಕಡೆಗಿನ ರೇಸ್​ ಸಾಕಷ್ಟು ರೋಚಕವಾಗಿ ಸಾಗುತ್ತಿದೆ. ಎಲ್ಲ ತಂಡಗಳು ಒಂದೆರಡು ಪಂದ್ಯಗಳನ್ನು ಗೆದ್ದು ಸೆಮಿ ಬಾಗಿಲಿನಲ್ಲಿ ಬಂದು ನಿಂತಿವೆ. ಇದುವರೆಗೆ ಯಾವುದೇ ತಂಡವೂ ಅಧಿಕೃತವಾಗಿ ಉಪಾಂತ್ಯಕ್ಕೆ ಪ್ರವೇಶ ಪಡೆದಿಲ್ಲ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಗೆಲುವಿಗಾಗಿ ಶಕ್ತಿ ಮೀರಿ ಪ್ರದರ್ಶನ ತೋರುತ್ತಿವೆ. ಆದರೆ ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ಬಾಂಗ್ಲಾದೇಶದ ನಾಯಕ ಶಕಿಬ್ ಅಲ್ ಹಸನ್(Shakib Al Hasan) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಕಿಬ್​ “ನಾವು ಟಿ20 ವಿಶ್ವ ಕಪ್‌ ಗೆಲ್ಲಲು ಇಲ್ಲಿಗೆ ಬಂದಿಲ್ಲ, ಆದರೆ ಟೀಮ್​ ಇಂಡಿಯಾ ವಿಶ್ವ ಕಪ್ ಗೆಲ್ಲಲು ಬಂದಿದೆ. ನಾವು ಭಾರತ ತಂಡವನ್ನು ಸೋಲಿಸಿದರೆ ನಿಜಕ್ಕೂ ಒಂದು ಸಾಧನೆ. ಪ್ರತಿಯೊಂದು ಪಂದ್ಯವೂ ನಮಗೆ ಮುಖ್ಯವಾಗಿದೆ. ಅದರಂತೆ ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿ ಆಡಲು ಬಯಸುತ್ತೇವೆ. ಭಾರತದ ವಿರುದ್ಧದ ಪಂದ್ಯದಲ್ಲೂ ಅದನ್ನೇ ಮಾಡಲಿದ್ದೇವೆ” ಎಂದು ಶಕಿಬ್ ಹೇಳಿದ್ದಾರೆ.

ಭಾರತವೇ ಪೇವರಿಟ್​

ಈ ಬಾರಿಯ ವಿಶ್ವ ಕಪ್​ ಗೆಲ್ಲವ ತಂಡಗಳಲ್ಲಿ ಭಾರತ ತಂಡ ಮುಂಚೂಣಿಯಲ್ಲಿದೆ. ಅದರಂತೆ ಟೀಮ್ ಇಂಡಿಯಾ ವಿಶ್ವ ಕಪ್ ಗೆಲ್ಲಲು ಇಲ್ಲಿಗೆ ಬಂದಿದೆ. ನಾವು ವಿಶ್ವ ಕಪ್ ಗೆಲ್ಲಲು ಬಂದಿಲ್ಲ. ನಾವು ಭಾರತದ ವಿರುದ್ಧ ಗೆದ್ದರೆ ಅದು ಅವರಿಗೆ ದೊಡ್ಡ ಆಘಾತ ನೀಡಿದಂತಾಗುತ್ತದೆ. ಭಾರತವನ್ನು ಸೋಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಶಕಿಬ್​ ತಿಳಿಸಿದರು.

ಇದನ್ನೂ ಓದಿ | KL Rahul | ಕೆ.ಎಲ್​. ರಾಹುಲ್​ ಅದ್ಭುತ ಆಟಗಾರ; ಕೋಚ್​ ರಾಹುಲ್‌ ದ್ರಾವಿಡ್​ ವಿಶ್ವಾಸ

Exit mobile version