Site icon Vistara News

Asia Cup 2023 : ಏಷ್ಯಾ ಕಪ್​, ವಿಶ್ವ ಕಪ್​ನಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ ಸ್ಟಾರ್ ಆಲ್​ರೌಂಡರ್​

Shakib Al hasan

ನವ ದೆಹಲಿ: ಮುಂಬರುವ ಏಷ್ಯಾ ಕಪ್ (Asia Cup 2023) ಮತ್ತು 2023ರ ಏಕದಿನ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶ ಕ್ರಿಕೆಟ್​ ತಂಡ ಶನಿವಾರ (ಆಗಸ್ಟ್​8ರಂದು) ಪ್ರಕಟಗೊಂಡಿದೆ. ಅನುಭವಿ ಆಲ್​ರೌಂಡರ್​ ಶಕೀಬ್ ಅಲ್ ಹಸನ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ದೃಢಪಡಿಸಿದೆ. ಆಯ್ಕೆ ಸಮಿತಿಯು ಆಗಸ್ಟ್ 12ರ ಶನಿವಾರ 50 ಓವರ್​ಗಳ ಎರಡೂ ಸ್ಪರ್ಧೆಗಳಿಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲಿದೆ.

ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರು ಎರಡೂ ಟೂರ್ನಿಗಳಿಗೆ ಶಕೀಬ್ ನಾಯಕತ್ವ ವಹಿಸುವ ಸುದ್ದಿಯನ್ನು ದೃಢಪಡಿಸಿದರು. ಆಗಸ್ಟ್ 12 ರಂದು ತಂಡಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ನಾವು ಶಕೀಬ್ ಅವರನ್ನು ಏಷ್ಯಾ ಕಪ್ ಮತ್ತು ವಿಶ್ವಕಪ್​ ಟೂರ್ನಿಗೆ ನಾಯಕನನ್ನಾಗಿ ನೇಮಿಸಿದ್ದೇವೆ. ವಿಶ್ವಕಪ್ ಮತ್ತು ಏಷ್ಯಾಕಪ್ ತಂಡವನ್ನು ನಾಳೆ ಪ್ರಕಟಿಸಲಾಗುವುದು. ಆಯ್ಕೆದಾರರು 17 ಸದಸ್ಯರ ತಂಡವನ್ನು ಆಯ್ಕೆ ಮಾಡಲಿದ್ದಾರೆ, ಎಂದು ನಜ್ಮುಲ್ ಆಗಸ್ಟ್ 11 ರಂದು ತಮ್ಮ ಮನೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ICC Awards: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶಕಿಬ್​ ಅಲ್​ ಹಸನ್​

ಇದಕ್ಕೂ ಮೊದಲು, ಲಿಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಾಜ್ ಇತರ ಇಬ್ಬರು ಅಭ್ಯರ್ಥಿಗಳಾಗಿರುವುದರಿಂದ ಎರಡೂ ಏಕದಿನ ಪಂದ್ಯಗಳಿಗೆ ಹೆಸರನ್ನು ಅಂತಿಮಗೊಳಿಸಲು ಅಪೆಕ್ಸ್ ಮಂಡಳಿ ತುರ್ತು ಸಭೆ ನಡೆಸಿತು. ಬೆನ್ನುನೋವಿನಿಂದಾಗಿ ಎಸಿಸಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದ ತಮೀಮ್ ಇಕ್ಬಾಲ್ ಆಗಸ್ಟ್ 3 ರಂದು ರಾಜೀನಾಮೆ ನೀಡಿದ್ದರು. ಹೀಗಾಗಿ ಏಕದಿನ ತಂಡದ ನಾಯಕತ್ವದ ಸ್ಥಾನ ಖಾಲಿ ಉಳಿದಿತ್ತು.

ತಮಿಮ್ ಅಚ್ಚರಿಯ ನಿವೃತ್ತಿ

ಕಳೆದ ತಿಂಗಳು ಆಶ್ಚರ್ಯಕರ ರೀತಿಯಲ್ಲಿ ನಿವೃತ್ತಿ ಘೋಷಿಸಿದ ತಮೀಮ್ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗಿನ ಸಭೆಯ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದರು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ತಮೀಮ್ ಅಕ್ಟೋಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗೆ ಫಿಟ್ ಆಗುವ ಭರವಸೆ ಹೊಂದಿದ್ದಾರೆ.

ಪ್ರಸ್ತುತ ಟೆಸ್ಟ್ ಮತ್ತು ಟಿ 20 ಐ ತಂಡದ ನಾಯಕರಾಗಿರುವ ಶಕೀಬ್ 2011 ರ ಏಕದಿನ ವಿಶ್ವಕಪ್ ಸೇರಿದಂತೆ ಏಕದಿನ ಸ್ವರೂಪದಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಿದ್ದಾರೆ. ಏಷ್ಯಾಕಪ್ ಅಭಿಯಾನದ ಬಗ್ಗೆ ಮಾತನಾಡುವುದಾದರೆ, ಬಾಂಗ್ಲಾದೇಶವು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಶಕೀಬ್ ನೇತೃತ್ವದ ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 31 ರಂದು ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಹ ಶ್ರೀಲಂಕಾ ವಿರುದ್ಧ ಆಡಲಿದೆ. ಅಕ್ಟೋಬರ್ 7 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್ಪಿಸಿಎ) ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಬಾಂಗ್ಲಾದೇಶ ಪರ 50 ಏಕದಿನ ಪಂದ್ಯಗಳಿಗೆ ನಾಯಕತ್ವ ವಹಿಸಿಕೊಂಡಿದ್ದ ಶಕಿಬ್​ 23 ಪಂದ್ಯಗಳನ್ನು ಗೆದ್ದು, 29ರಲ್ಲಿ ಸೋಲು ಕಂಡಿದ್ದಾರೆ. ಶಕೀಬ್ ಇದುವರೆಗೆ 19 ಟೆಸ್ಟ್ ಮತ್ತು 39 ಟಿ 20 ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿದ್ದಾರೆ ಮತ್ತು ನಾಯಕನಾಗಿ ಅವರ ಕೊನೆಯ ಏಕದಿನ ಪಂದ್ಯ 2017 ರಲ್ಲಿ ಆಗಿತ್ತು.

Exit mobile version