ಮುಂಬಯಿ: ಜಸ್‌ಪ್ರಿತ್ ಬುಮ್ರಾ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದು ವಿಶ್ವ ಕಪ್‌ಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೆ (Team India) ಹಿನ್ನಡೆಯುಂಟು ಮಾಡಿದೆ. ಟೂರ್ನಿಗೆ ಆಯ್ಕೆಯಾಗಿರುವ ಪ್ರಮುಖ ಬೌಲರ್ ಎನಿಸಿಕೊಂಡಿರುವ ಬುಮ್ರಾ ಅವರ ಅನುಪಸ್ಥಿತಿಯಿಂದ ತಂಡದ ಸಂಯೋಜನೆಗೆ ಸಮಸ್ಯೆಯಾಗಿದೆ. ಟೀಮ್ ಇಂಡಿಯಾದ ಫಿಸಿಯೊಗಳು ಅವರು ವಿಶ್ವ ಕಪ್‌ಗೆ ಅಲಭ್ಯರಾಗುತ್ತಾ ಎಂದು ಘೋಷಿಸಿದ ತಕ್ಷಣ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಪರ್ಯಾಯ ಆಯ್ಕೆ ಬಗ್ಗೆ ಯೋಜನೆ ರೂಪಿಸಿದೆ. ಸದ್ಯದ ಮಾಹಿತಿ ಪ್ರಕಾರ ಮೊಹಮ್ಮದ್ ಶಮಿ ಅವರು ಬುಮ್ರಾ ಅವರ ಸ್ಥಾನ ತುಂಬಲಿದ್ದಾರೆ ಎಂಬುದಾಗಿ ವರದಿಯಾಗಿದೆ.
ಈ ಹಿಂದೆ ಮೊಹಮ್ಮದ್ ಶಮಿ ವಿಶ್ವ ಕಪ್ ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದರು. ಇದೀಗ ಅವರು ಆಡುವ ೧೫ ಬಳಗ ಸೇರಿಕೊಳ್ಳಲಿದ್ದಾರೆ. ಇದರೊಂದಿಗೆ ಮೊಹಮ್ಮದ್ ಶಮಿ ಒಂದು ವರ್ಷದ ಬಳಿಕ ಟಿ೨೦ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊಹಮ್ಮದ್ ಶಮಿ ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡಿರುವ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ಆ ವೇಳೆ ಅವರಿಗೆ ಕೊರೊನಾ ಸೋಂಕು ಬಾಧಿಸಿತ್ತು. ಜತೆಗೆ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಸರಣಿಗೂ ಆಯ್ಕೆಯಾಗಿದ್ದರು. ಕೊರೊನಾ ಬಾಧೆಯಿಂದಾಗಿ ಎರಡೂ ಸರಣಿಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.
ಭಾರತ ತಂಡದ ಇನ್ನೊಬ್ಬ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಇನ್ನುಳಿದ ಪಂದ್ಯಗಳಿಗೆ ಅಯ್ಕೆ ಮಾಡಲು ತಂಡದ ಮ್ಯಾನೇಜ್ಮೆಂಟ್ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ | Jasprit Bumrah | ಮೂಳೆ ಮುರಿತ, ಟಿ-20 ವಿಶ್ವಕಪ್‌ನಿಂದಲೇ ಜಸ್‌ಪ್ರಿತ್ ಬುಮ್ರಾ ಔಟ್