Site icon Vistara News

Team India | ಮೊಹಮ್ಮದ್‌ ಶಮಿ ಒಂದೇ ಓವರ್‌ನಲ್ಲಿ 3 ವಿಕೆಟ್‌ ಕಬಳಿಸಲು ಪಾಕ್ ವೇಗಿ ಅಫ್ರಿದಿ ಕಾರಣವಂತೆ!

t20 world cup

ಬ್ರಿಸ್ಬೇನ್‌ : ಭಾರತ ತಂಡದ (Team India Team India ) ವೇಗದ ಬೌಲರ್‌ ಮೊಹಮ್ಮದ್‌ ಶಮಿ ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್‌ ಮಾಡಿರುವುದು ಒಂದೇ ಓವರ್‌. ಅದೂ ಇನಿಂಗ್ಸ್‌ನ ಕೊನೇ ಓವರ್‌. ಅದರಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಜತೆಗೊಂದು ರನ್‌ಔಟ್‌ ಕೂಡ. ಅವರ ಮಾರಕ ಬೌಲಿಂಗ್‌ನಿಂದಾಗಿ ಭಾರತ ತಂಡ ಅಭ್ಯಾಸ ಪಂದ್ಯದಲ್ಲಿ ೬ ರನ್‌ಗಳಿಂದ ಜಯ ಸಾಧಿಸಿತ್ತು. ಆದರೆ, ಅವರ ಈ ಸಾಧನೆಗೆ ಪಾಕಿಸ್ತಾನದ ವೇಗದ ಬೌಲರ್‌ ಶಹೀನ್‌ ಶಾ ಅಫ್ರಿದಿ ಕಾರಣ ಎಂಬುದಾಗಿ ಕ್ರಿಕೆಟ್‌ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಈ ಮಾತಿಗೆ ಕಾರಣವಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಟ್ವೀಟ್‌ ಖಾತೆಯಲ್ಲಿ ಒಂದು ವಿಡಿಯೊ ಹಾಕಲಾಗಿದೆ. ಅದರಲ್ಲಿ ಪಾಕಿಸ್ತಾನದ ವೇಗದ ಬೌಲರ್‌ ಶಹೀನ್‌ ಶಾ ಅಫ್ರಿದಿ ಹಾಗೂ ಮೊಹಮ್ಮದ್ ಶಮಿ ಎದುರು ಸಿಕ್ಕಾಗ ಪರಸ್ಪರ ಕೈ ಕುಲುಕಿ ಮಾತನಾಡುತ್ತಾರೆ. ಜತೆಗೆ ಸ್ವಲ್ಪ ಹೊತ್ತು ಮಾತುಕತೆಯೂ ನಡೆಸುತ್ತಾರೆ. ಈ ವೇಳೆ ವಿಕೆಟ್‌ ಪಡೆಯುವುದು ಹೇಗೆ ಎಂಬುದನ್ನು ಮೊಹಮ್ಮದ್ ಶಮಿ ಅವರಿಗೆ ಅಫ್ರಿದಿ ಹೇಳಿ ಕೊಟ್ಟಿದ್ದಾರೆ. ಆ ಟಿಪ್ಸ್‌ ಪ್ರಕಾರ ಬೌಲಿಂಗ್‌ ಮಾಡಿ ವಿಕೆಟ್ ಪಡೆದಿದ್ದಾರೆ ಎಂದು ಕ್ರಿಕೆಟ್‌ ಪ್ರೇಮಿಗಳು ಬರೆದುಕೊಂಡಿದ್ದಾರೆ.

ಶಮಿಯ ಸಾಧನೆಯನ್ನು ನಾಯಕ ರೋಹಿತ್ ಶರ್ಮ ಕೂಡ ಮೆಚ್ಚಿ ಮಾತನಾಡಿದ್ದಾರೆ. “ಶಮಿ ಹಲವು ಸಮಯಗಳ ಬಳಿಕ ಟಿ೨೦ ಮಾದರಿಗೆ ಮರಳಿದ್ದಾರೆ. ಹೀಗಾಗಿ ಅವರಿಗೆ ಕೊನೇ ಓವರ್‌ ಮಾತ್ರ ನೀಡಲಾಯಿತು. ಆದಾಗ್ಯೂ ಅವರ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರು ಯಾವ ರೀತಿ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ,” ಎಂಬುದಾಗಿ ರೋಹಿತ್‌ ಶರ್ಮ ಹೇಳಿದ್ದಾರೆ.

ಇದನ್ನೂ ಓದಿ | T20 World Cup | ಡೈರೆಕ್ಟ್‌ ಹಿಟ್ ರನ್‌ಔಟ್‌, ಒಂದು ಕೈಯಲ್ಲಿ ಕ್ಯಾಚ್‌; ಅಭ್ಯಾಸ ಪಂದ್ಯದಲ್ಲಿ ಕೊಹ್ಲಿಯ ಭರ್ಜರಿ ಫೀಲ್ಡಿಂಗ್‌

Exit mobile version