Site icon Vistara News

INDvsAUS : ಶಮಿಯ ವೇಗ ಎಸೆತಕ್ಕೆ ಮಾರು ದೂರ ಎಗರಿದ ವಿಕೆಟ್​; ವಿಡಿಯೊ ವೈರಲ್​

mohammes shami

#image_title

ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿಯ (INDvsAUS) ಮೊದಲ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ದಿನದ ಆಟದಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟರ್​​ಗಳಿಗೆ ಭಾರತದ ಬ್ಯಾಟರ್​ಗಳು ಸಂಪೂರ್ಣವಾಗಿ ಕಡಿವಾಣ ಹಾಕಿ 177 ರನ್​ಗಳಿಗೆ ಕಡಿವಾಣ ಹಾಕಿದ್ದಾರೆ. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ರೋಹಿತ್​ ಶರ್ಮಾ (56) ಅವರ ಅರ್ಧ ಶತಕದ ನೆರವಿನಿಂದ 1 ವಿಕೆಟ್​ ನಷ್ಟಕ್ಕೆ 77 ರನ್​ ಬಾರಿಸಿದೆ. ಈ ಮೂಲಕ ಮುನ್ನಡೆಯ ಸೂಚನೆ ನೀಡಿದೆ. ಏತನ್ಮಧ್ಯೆ, ಮೊದಲ ದಿನದಾಟದಲ್ಲಿ ಭಾರತ ತಂಡದ ಬೌಲರ್​ಗಳ ಸಾಧನೆಯನ್ನು ಕ್ರಿಕೆಟ್​ ಪ್ರೇಮಿಗಳು ಕೊಂಡಾಡಿದ್ದಾರೆ. ಅದರಲ್ಲೊಂದು ಡೇವಿಡ್​ ವಾರ್ನರ್​ ವಿಕೆಟ್​.

ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್​ ಅಪಾಯಕಾರಿ ಬ್ಯಾಟರ್​. ಅವರು ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಂತರೆ ರನ್​ ಹೊಳೆ ಖಾತರಿ. ಆದರೆ, ವೇಗದ ಬೌಲರ್​ ಮೊಹಮ್ಮದ್​ ಶಮಿ ವಾರ್ನರ್ ಅವರನ್ನು ಪೆವಿಲಿಯನ್​ಗೆ ಕಳುಹಿಸುವ ಮೂಲಕ ಭಾರತ ತಂಡ ಮೇಲುಗೈ ಸಾಧಿಸಲು ನೆರವಾದರು. ಅದಕ್ಕಿಂತ ಹೆಚ್ಚಾಗಿ ಮೊಹಮ್ಮದ್ ಶಮಿಯ ಆ ಎಸೆತಕ್ಕೆ ಡೇವಿಡ್​ ವಾರ್ನರ್​ ಬೌಲ್ಡ್​ ಆದ ರೀತಿಯೇ ಕಣ್ಮನ ಸೆಳೆಯಿತು.

ಮೊಹಮ್ಮದ್​ ಶಮಿಯ ಎಸೆತ ಸ್ಟಂಪ್​ಗೆ ಜೋರಾಗಿ ಬಡಿಯಿತು. ಅದರ ವೇಗಕ್ಕೆ ವಿಕೆಟ್​ ಸುಮಾರು ದೂರದ ತನಕ ಎಗರಿ ಬಿತ್ತು. ಇದು ದಿನದ ವಿಕೆಟ್​ಗಳ ಪಾಲಿನ ಹೈಲೈಟ್​​ ಎನಿಸಿಕೊಂಡಿತು. ವೇಗದ ಬೌಲರ್​ ಒಬ್ಬ ಜೀವನದಲ್ಲಿ ಇಂಥದ್ದೊಂದು ವಿಕೆಟ್​ನ ನಿರೀಕ್ಷೆಯಲ್ಲಿ ಇದ್ದೇ ಇರುತ್ತಾರೆ ಎಂಬುದಾಗಿ ನೆಟ್ಟಿಗರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: INDvsAUS : ಐದು ತಿಂಗಳ ಹಿಂದೆ ಗಾಯಾಳು, ಈಗ ಐದು ವಿಕೆಟ್​ಗಳ ಸರದಾರ; ಜಡೇಜಾ ಸಾಧನೆಗೆ ಅಭಿಮಾನಿಗಳ ಮೆಚ್ಚುಗೆ

ಭಾರತ ತಂಡದ ಪಾಲಿಗೆ ಇದೇ ಮಾದರಿಯ ವಿಕೆಟ್​ ಸ್ಟೀವ್​ ಸ್ಮಿತ್​ ಅವರದ್ದು. ಜಡೇಜಾ ಅವರ ಎಸೆತ ಸ್ಮಿತ್ ಬ್ಯಾಟ್​ ಬೀಸುವ ನಡುವೆಯೇ ಕೆಳಗಿನಿಂದ ನುಗ್ಗಿ ವಿಕೆಟ್​ಗೆ ಬಿತ್ತು. ಈ ಮೂಲಕ ಸ್ಟಾರ್ ಬ್ಯಾಟರ್​ ವಿಕೆಟ್​ ಪತನಗೊಂಡಿತ್ತು.

Exit mobile version