ಮುಂಬಯಿ: ಟೀಮ್ ಇಂಡಿಯಾದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಕಳೆದ ವರ್ಷ ಮಿಥಾಲಿ ಪಾರೂಲ್ಕರ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಾರ್ದೂಲ್ ಅವರ ಮದುವೆ ದಿನಾಂಕ ಇದೀಗ ಹೊರಬಿದ್ದಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಶಾರ್ದೂಲ್ ಅವರ ಭಾವಿ ಪತ್ನಿ ಮಿಥಾಲಿ ಪಾರೂಲ್ಕರ್ ಮದುವೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಅದರಂತೆ ಫೆಬ್ರವರಿ 27 ರಂದು ಮದುವೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
“ಸದ್ಯ ಶಾರ್ದೂಲ್ ಅವರ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದ್ದು, ಅವರು ಫೆಬ್ರವರಿ 24 ರವರೆಗೆ ಕ್ರಿಕೆಟ್ ಆಡಲಿದ್ದಾರೆ. ನಂತರ ಫೆಬ್ರವರಿ 25 ರಿಂದ ಅವರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಫೆಬ್ರವರಿ 27ಕ್ಕೆ ತಾನು ಮತ್ತು ಶಾರ್ದೂಲ್ ಪರಸ್ಪರರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ” ಎಂದು ಮಿಥಾಲಿ ಪಾರೂಲ್ಕರ್ ಹೇಳಿದ್ದಾರೆ.
ಮುಂಬೈನಲ್ಲಿ ಮದುವೆ ಸಮಾರಂಭ ನಡೆಯಲ್ಲಿದ್ದು, ಸುಮಾರು 200 ರಿಂದ 250 ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಮಿಥಾಲಿ ಪಾರೂಲ್ಕರ್ ಹೇಳಿದ್ದಾರೆ.
ಇದನ್ನೂ ಓದಿ | Blind Cricket World Cup | ಅಂಧರ ವಿಶ್ವ ಕಪ್ನಲ್ಲಿ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ದಾಖಲೆ ಬರೆದ ಭಾರತ