Site icon Vistara News

Shashi Tharoor: ಜಿಂಬಾಬ್ವೆ ಎದುರು ಭಾರತಕ್ಕೆ ಸೋಲು: ಲೇವಡಿ ಮಾಡಿದ ಶಶಿ ತರೂರ್

Shashi Tharoor

Shashi Tharoor: 'Just What BCCI Deserved'; Shashi Tharoor's Tweet On Zimbabwe Shocker Fumes BJP

ನವದೆಹಲಿ: ಜಿಂಬಾಬ್ವೆ(Zimbabwe vs India) ವಿರುದ್ಧ ಶನಿವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಬಿಸಿಸಿಐ(BCCI) ಕಾರ್ಯದರ್ಶಿ ಜಯ್‌ ಶಾ(Jay Shah) ವಿರುದ್ಧ ಕಿಡಿಕಾರಿದ್ದಾರೆ. ಎದುರಾಳಿ ತಂಡಗಳನ್ನು ಲಘುವಾಗಿ ಪರಿಗಣಿಸಿದ್ದು ಈ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

’17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಆಟಗಾರರನ್ನು ಮುಂಬೈಯಲ್ಲಿ ಭರ್ಜರಿ ಕಾರ್ಯಕ್ರಮದ ಮೂಲಕ ಅಭಿನಂದಿಸಲಾಗಿತ್ತು. ಈ ಸಂಭ್ರಮ ಮುಗಿಯುವ ಮುನ್ನವೇ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಸೋಲು ಕಂಡಿದ್ದೇವೆ. ಇದನ್ನು ಗಮನಿಸಿದರೆ ಬಿಸಿಸಿಐ ಎದುರಾಳಿ ತಂಡಗಳನ್ನು ಲಘುವಾಗಿ ಪರಿಗಣಿಸಿದೆ ಎಂಬುದು ಸ್ಪಷ್ಟ. ಜೂನ್ 4ರಂದು (ಲೋಕಸಭೆ ಚುನಾವಣಾ ಫಲಿತಾಂಶ) ಒಂದು ಹಂತದ ದುರಹಂಕಾರವನ್ನು ಇಳಿಸಲಾಗಿದೆ. ಜಿಂಬಾಬ್ವೆ ಉತ್ತಮ ಆಟವಾಡಿದೆ’ ಎಂದು ತರೂರ್ ‘ಎಕ್ಸ್‌’ನಲ್ಲಿ ಬಿಜೆಪಿ ಮತ್ತು ಬಿಸಿಸಿಐಯನ್ನು ಲೇವಡಿ ಮಾಡಿದ್ದಾರೆ.

ತರೂರ್ ಹೇಳಿಕೆಗೆ ತಕ್ಕ ತಿರುಗೇಟು ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲ, ‘ನಮ್ಮ ತಂಡ ಸರಿಯಾಗಿ ಆಡಲಿಲ್ಲ. ಹಾಗಾಗಿ ಸೋಲು ಅನುಭವಿಸಿದೆ. ಆದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ಮೇಲಿನ ದ್ವೇಷದಿಂದಾಗಿ ಕಾಂಗ್ರೆಸ್‌ ಭಾರತ ತಂಡದ ಸೋಲನ್ನು ಸಂಭ್ರಮಿಸುವುದನ್ನು ನೋಡುವುದು ಅಸಹ್ಯಕರವಾಗಿದೆ’ ಎಂದು ಹೇಳಿದ್ದಾರೆ.

ಶೆಹಜಾದ್‌ ಪೂನಾವಾಲ ಟ್ವೀಟ್​ಗೆ ಮರು ಪ್ರತಿಕ್ರಿಯೆ ನೀಡಿದ ತರೂರ್​, ‘ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಪಂತ್, ಹಾರ್ದಿಕ್, ಕುಲದೀಪ್, ಸಿರಾಜ್, ಬುಮ್ರಾ ಮತ್ತು ಅರ್ಷದೀಪ್, ಸಂಜು, ಜೈಸ್ವಾಲ್, ಚಾಹಲ್, ದುಬೆ ಆಡುತ್ತಿಲ್ಲ. ಉತ್ತಮ ತಂಡವನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ಎಡವಿದೆ. ಜತೆಗೆ, ನಮ್ಮ ಆಟಗಾರರು ಸ್ವಾಭಿಮಾನವನ್ನು ತೋರಿಸದೆ ಸೋತಿರುವುದಕ್ಕೆ ಬೇಸರವಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Shashi Tharoor Controversy: ಉತ್ತರಪ್ರದೇಶದ ಬಗ್ಗೆ ಶಶಿ ತರೂರ್‌ ಹೇಳಿದ್ದೇನು ಗೊತ್ತಾ?; ಭಾರೀ ವಿವಾದಕ್ಕೀಡಾಗ್ತಿದೆ ಈ ಪೋಸ್ಟ್‌

ಮೋದಿ ಪದಗ್ರಹಣ ನೋಡಲ್ಲ ಎಂದಿದ್ದ ತರೂರ್

ಜೂನ್‌ 9 ರಂದು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ತಾನು ಮೋದಿ ಅವರ​ ಪದಗ್ರಹಣ ಸಮಾರಂಭದ ಬದಲು ಭಾರತ-ಪಾಕಿಸ್ತಾನ ಕ್ರಿಕೆಟ್​ ಪಂದ್ಯ ನೋಡಲು ಕಾತರಗೊಂಡಿದ್ದೇನೆ ಎಂದು ತರೂರ್ ಲೇವಡಿ ಮಾಡಿದ್ದರು.

“ನನ್ನನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಹೀಗಾಗಿ ನಾನು ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್​ ಪಂದ್ಯವನ್ನು ವೀಕ್ಷಿಸುತ್ತೇನೆ. ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಬೇರೆ ರಾಷ್ಟ್ರದ ಅದರಲ್ಲೂ ಭಾರತ ವಿರೋಧಿ ಮನಸ್ಥಿತಿಯ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರನ್ನು ಆಹ್ವಾನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳುವ ಮೂಲಕ ಮೋದಿಗೆ ಟಾಂಗ್​ ಕೊಟ್ಟಿದ್ದರು.

ಸೋಲು ಕಂಡ ಭಾರತ

ಶನಿವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಭರ್ಜರಿ ಬೌಲಿಂಗ್‌ ಮಾಡಿ ಜಿಂಬಾಬ್ವೆ ಆಟಗಾರರನ್ನು 115 ರನ್​ಗೆ ಕಟ್ಟಿ ಹಾಕಿತು. ಈ ಮೊತ್ತವನ್ನು ಭಾರತ ಕೇವಲ 10 ಓವರ್​ನಲ್ಲಿ ಹೊಡೆದು ಮುಗಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಚೇಸಿಂಗ್ ಆರಂಭಿಸಿದಾಗ ನಡೆದಿದ್ದೇ ಬೇರೆ. ಭಾರತೀಯ ಬ್ಯಾಟರ್​ಗಳ ವಿಕೆಟ್​ಗಳು ತರಗೆಲೆಯಂತೆ ಉದುರಿಹೋಯಿತು. 19,5 ಓವರ್​ಗಳಲ್ಲಿ 102 ರನ್​ಗೆ ಸರ್ವ ಪತನ ಕಂಡು ಸೋಲೊಪ್ಪಿಕೊಂಡಿತು.

Exit mobile version