Site icon Vistara News

David Warner: ವಾರ್ನರ್​ರನ್ನು ಸೈತಾನ್ ಎಂದು ಕರೆಯುತ್ತಿದ್ದ ಖ್ವಾಜಾ ತಾಯಿ

David Warner

ಸಿಡ್ನಿ: ಪಾಕಿಸ್ತಾನ ವಿರುದ್ಧ ಟೆಸ್ಟ್​ ಪಂದ್ಯವನ್ನಾಡುವ ಮೂಲಕ ಆಸೀಸ್​ ಬ್ಯಾಟರ್​ ಡೇವಿಡ್​ ವಾರ್ನರ್​ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ವಾರ್ನರ್​ ಜತೆಗಿನ ಭಾವನಾತ್ಮಕ ಕ್ಷಣದ ಕುರಿತು ಮಾತನಾಡಿದ ಉಸ್ಮಾನ್​ ಖ್ವಾಜಾ, ತನ್ನ ತಾಯಿ ವಾರ್ನರ್​ ಅವರನ್ನು ಸೈತಾನ್(ದೆವ್ವ)ಎಂಬ ಅಡ್ಡ ಹೆಸರಿನಿಂದ ತಮಾಷೆಯಾಗಿ ಕರೆಯುತ್ತಿದ್ದರು ಎಂದು ಹೇಳಿದ್ದಾರೆ.

ವಾರ್ನರ್ ಮತ್ತು ನನ್ನ ತಾಯಿ ಭಾವನಾತ್ಮಕ ನಂಟು ಹೊಂದಿದ್ದಾರೆ. ನನ್ನ ತಾಯಿ ಆತನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಅವರನ್ನು ತಮಾಷೆಯಾಗಿ ಸೈತಾನ್ ಎಂದು ಕರೆಯುತ್ತಿದ್ದರು. ಇದಕ್ಕೆ ವಾರ್ನರ್​ ಕೂಡ ತಲೆಯಾಡಿಸುತ್ತಿದ್ದರು ಎಂದು ಖ್ವಾಜಾ ಅವರು ವಾರ್ನರ್​ ವಿದಾಯದ ವೇಳೆ ಹೇಳಿದರು. ವಾರ್ನರ್​ ವಿದಾಯ ಪಂದ್ಯಕ್ಕೂ ಕೂಡ ಖ್ವಾಜಾ ಅವರ ತಾಯಿ ಆಗಮಿಸಿದ್ದರು. ಪಂದ್ಯದ ಬಳಿಕ ವಾರ್ನರ್​ ಅವರನ್ನು ಬಿಗಿದಪ್ಪಿ ಹಾರೈಸಿದ್ದರು.

Usman Khawaja’s mother


“ನಾನು ವಾರ್ನರ್ರೊಂದಿಗೆ ಜತೆಯಾಟ ನಡೆಸಿದ್ದು ಮರೆಯಲು ಅಸಾಧ್ಯ. ಅವರು ಚೆಂಡಿನ ಮೇಲೆ ಹೇಗೆ ದಾಳಿ ಮಾಡಬೇಕು ಎನ್ನುವುದನ್ನು ನನಗೆ ಸರಿಯಾಗಿ ತಿಳಿಸಿಕೊಡುತ್ತಿದ್ದರು. ಇದೇ ಕಾರಣಕ್ಕೆ ನಾವು ಹಲವು ದಾಖಲೆಯ ಜತೆಯಾಟ ನಡೆಸಲು ಸಾಧ್ಯವಾಯಿತು. ನನ್ನ ಕ್ರಿಕೆಟ್​ ವೃತ್ತಿಜೀವನವನ್ನು ಕೊನೆಗೊಳಿಸಿದ ಬಳಿಕ ವಾರ್ನರ್​ ಜತೆ ಗಾಲ್ಫ್ ಆಡಿ ಕಾಲ ಕಳೆಯುವ” ಎಂದು ಖ್ವಾಜಾ ಹೇಳಿದ್ದಾರೆ.

2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ David Warner: ವಿದಾಯ ಪಂದ್ಯ ಆಡಿದ ವಾರ್ನರ್​ಗೆ ವಿಶೇಷ ಉಡುಗೊರೆ ನೀಡಿದ ಪಾಕ್​ ತಂಡ

Usman Khawaja’s mother


ವಿದಾಯದ ಪಂದ್ಯ ಆಡಿದ ಬಳಿಕ ತಮ್ಮ ಟೆಸ್ಟ್​ ಅನುಭವ ಹಂಚಿಕೊಂಡ ವಾರ್ನರ್​, “ನಾನು ಕಂಡ ಕನಸು ಸ್ಮರಣೀಯವಾಗಿ ಮುಕ್ತಾಯಕಂಡಿದೆ. ಅದರಲ್ಲೂ ಗೆಲುವಿನ ವಿದಾಯ ಸಿಕ್ಕಿರುವುದು ಮರೆಯಲು ಅಸಾಧ್ಯ. ಕಳೆದ 18 ತಿಂಗಳುಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ಮಾಡಿದೆ. ಏಕದಿನ ಮತ್ತು ಟೆಸ್ಟ್​ ವಿಶ್ವಕಪ್​ ಗೆದ್ದ ಸಾಧನೆ ನಮ್ಮ ತಂಡದ್ದು. ಇಷ್ಟು ವರ್ಷಗಳ ಕಾಲ ಆಸೀಸ್​ ತಂಡದ ಪರ ಆಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಎಲ್ಲ ಕಷ್ಟದ ಕಾಲದಲ್ಲಿ ಜತೆಗಿದ್ದ ತಂಡದ ಸಿಬ್ಬಂದಿ, ಆಟಗಾರರು ಹಾಗೂ ಕುಟುಂಬ ಸದಸ್ಯರಿಗೆ ವಿಶೇಷ ಧನ್ಯವಾದಗಳು” ಎಂದು ವಾರ್ನರ್​ ಹೇಳಿದ್ದರು.

Exit mobile version