Site icon Vistara News

Shikhar Dhawan: ಪ್ರೀತಿ ಮಾಯೆ ಹುಷಾರು; ಶಿಖರ್​ ಧವನ್​ ಕಿವಿಮಾತು

Shikhar Dhawan: Be careful before falling in love; Shikhar Dhawan's ear

Shikhar Dhawan: Be careful before falling in love; Shikhar Dhawan's ear

ಮೊಹಾಲಿ: ಟೀಮ್​ ಇಂಡಿಯಾ ಕ್ರಿಕೆಟಿಗ ಶಿಖರ್‌ ಧವನ್(Shikhar Dhawan) ಅವರು ತಮ್ಮ ಮಾಜಿ ಪತ್ನಿ ಆಸ್ಟ್ರೇಲಿಯಾ ಪ್ರಜೆ ಆಯೆಷಾ ಮುಖರ್ಜಿ ಜತೆಗಿನ ವಿಚ್ಛೇದನ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ್ದಾರೆ. ಜತೆಗೆ ಇನ್ನೊಂದು ಮದುವೆಯಾಗುವ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಶಿಖರ್​​​ ಧವನ್‌ ಮತ್ತು ಆಯೆಷಾ ಮುಖರ್ಜಿ (Shikhar Dhawan and Ayesha Mukherjee) ಅವರು 2021ರ ಸೆಪ್ಟೆಂಬರ್​ನಲ್ಲಿ ವಿಚ್ಛೇದನ ಪಡೆದಿದ್ದರು. ತಮ್ಮ ವಿಚ್ಛೇದನದ ವಿಷಯವನ್ನು ಆಯೆಷಾ ಅವರು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಆ ಮೂಲಕ ಈ ಜೋಡಿಯ 8 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದಿತ್ತು. ಈ ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಪತ್ನಿಯಿಂದ ಬೇರ್ಪಟ್ಟ ಕುರಿತು ಶಿಖರ್​ ಧವನ್ ಮುಕ್ತವಾಗಿ ಮಾತನಾಡಿದ್ದಾರೆ.

ಐಪಿಎಲ್​ ಪೂರ್ವ ತಯಾರಿ ನಡೆಸುತ್ತಿರುವ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಧವನ್​, ಮದುವೆ ವಿಚಾರದಲ್ಲಿ ನಾನು ಎಡವಿದ್ದೇನೆ. ನಾನೇ ಈ ನಿರ್ಧಾರ ತೆಗೆದುಕೊಂಡ ಕಾರಣ, ಬೇರೆಯವರತ್ತ ಬೆರಳು ತೋರಿಸಲು ಬಯಸುವುದಿಲ್ಲ. ಮದುವೆ ವಿಚಾರದಲ್ಲಿ ಸರಿಯಾದ ಸಲಹೆಯನ್ನು ಪಡೆದ ಬಳಿಕವೇ ಮುಂದುವರಿದೆ ಒಳಿತು. ಇಲ್ಲವಾದಲ್ಲಿ ಆ ಬಳಿಕ ಹಲವು ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿದ್ದಾರೆ.

“ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಪ್ರಕರಣ ನಡೆಯುತ್ತಲೇ ಇದೆ ಎಂದು ಬಹಿರಂಪಡಿಸಿದ್ದಾರೆ. ಜತೆಗೆ ಮರು ಮದುವೆಯಾಗುವ ವಿಚಾರವನ್ನೂ ತಳ್ಳಿ ಹಾಕಿದ್ದು, ಸದ್ಯಕ್ಕೆ ಯಾವುದೇ ಯೋಚನೆ ಮಾಡುತ್ತಿಲ್ಲ. ಒಂದೊಮ್ಮೆ ಮುಂದಿನ ದಿನಗಳಲ್ಲಿ ನಾನು ಮತ್ತೆ ಮದುವೆಯಾಗಲು ಬಯಿಸಿದರೆ, ಈ ವಿಚಾರದಲ್ಲಿ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಜೀವನವನ್ನು ನಾನು ಯಾರೊಂದಿಗೆ ಕಳೆಯಬಹುದು. ಹೇಗೆ ಇರಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡ ಬಳಿಕ ಅಂತಿಮ ನೀರ್ಧಾರ ಕೈಗೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಮದುವೆಗೂ ಮುನ್ನ ಯಾವುದೇ ನಿರ್ಬಂಧ ಇರಲಿಲ್ಲ

ಮದುವೆಗೂ ಮುನ್ನ ನಾನು ಯಾರ ಜತೆಯಲ್ಲೂ ರಿಲೇಷನ್​​ಶಿಪ್​​​​ನಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದೆ. ಮೋಜು ಮಾಡುತ್ತಿದ್ದೆ. ತುಂಬಾ ಖುಷಿಯ ದಿನಗಳನ್ನು ಕಳೆದೆ. ಪ್ರೀತಿಯಲ್ಲಿ ಬೀಳುವುದಕ್ಕೂ ಮುನ್ನ ನನಗೆ ಯಾವುದೇ ರೆಡ್​ ಸಿಗ್ನಲ್​ ಬಿದ್ದಿರಲಿಲ್ಲ. ಆದರೆ ಪ್ರೀತಿಯಲ್ಲಿ ಬಿದ್ದ ನಂತರ ಪ್ರತಿ ಕ್ಷಣವೂ ರೆಡ್​ ಸಿಗ್ನಲ್​ ಬೀಳುತ್ತಿತ್ತು. ಆದ್ದರಿಂದ ಆರಂಭದಲ್ಲೇ ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕೊನೆಗೆ ಪಶ್ಚಾತ್ತಾಪ ಪಡುವುದು ನಾವೇ ಎಂದು ಧವನ್​ ಹೇಳಿದರು.

Exit mobile version