Site icon Vistara News

IPL 2023 | ಶಿಖರ್‌ ಧವನ್‌ಗೆ ಪಂಜಾಬ್‌ ಕಿಂಗ್ಸ್‌ ನಾಯಕತ್ವ, ಮಯಾಂಕ್‌ ಔಟ್‌

ಮುಂಬಯಿ : ಐಪಿಎಲ್‌ ೧೬ನೇ ಆವೃತ್ತಿಗೆ ಪಂಜಾಬ್‌ ಕಿಂಗ್ಸ್ ಫ್ರಾಂಚೈಸಿಯಲ್ಲಿ ಭರ್ಜರಿ ಬದಲಾವಣೆಗಳಾಗಿವೆ. ಈ ಹಿಂದೆ ಹೆಡ್ ಕೋಚ್‌ ಅನಿಲ್‌ ಕುಂಬ್ಳೆ ಅವರ ಗುತ್ತಿಗೆ ನವೀಕರಣ ಮಾಡದ ತಂಡದ ಮ್ಯಾನೇಜ್ಮೆಂಟ್‌ ಇದೀಗ ನಾಯಕ ಮಯಾಂಕ್‌ ಅಗರ್ವಾಲ್‌ ಅವರನ್ನೂ ಸ್ಥಾನದಿಂದ ಕೆಳಕ್ಕಿಳಿಸಿದ್ದಾರೆ. ಅವರ ಬದಲಿಗೆ ದಿಲ್ಲಿಯ ಎಡಗೈ ಬ್ಯಾಟರ್‌ ಶಿಖರ್ ಧವನ್‌ಗೆ ಪಟ್ಟ ಕಟ್ಟಲಾಗಿದೆ. ಬುಧವಾರ ನಡೆದ ಫ್ರಾಂಚೈಸಿಯ ಸಭೆಯ ಬಳಿಕ ಈ ನಿರ್ಧಾರ ಪ್ರಕಟಗೊಂಡಿದೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮಯಾಂಕ್‌ ಅಗರ್ವಾಲ್‌ ತಂಡದ ನಾಯಕತ್ವ ವಹಿಸಿದ್ದ ಮಯಾಂಕ್‌ ಅವರು ತಮ್ಮ ಸಾಮರ್ಥ್ಯ ಸಾಬೀತುಮಾಡಲು ವಿಫಲಗೊಂಡಿದ್ದರು. ಅದಕ್ಕಿಂತ ಮೊದಲು ಕೆ. ಎಲ್‌ ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಕಳೆದ ಆವೃತ್ತಿಯಲ್ಲೇ ಶಿಖರ್‌ ಧವನ್‌ಗೆ ನಾಯಕತ್ವ ನೀಡುವ ಬಗ್ಗೆ ಫ್ರಾಂಚೈಸಿ ಸೂಚನೆ ಕೊಟ್ಟಿತ್ತು. ಆದರೆ ಕೊನೇ ಹಂತದಲ್ಲಿ ಮಯಾಂಕ್‌ ಅವರಿಗೆ ನೀಡಲಾಗಿತ್ತು.

“ಶಿಖರ್‌ ಧವನ್‌ ಅವರನ್ನು ಪಂಜಾಬ್‌ ಕಿಂಗ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಹಾಗೂ ಭಾರತ ತಂಡದ ಪರ ನಾಯಕರಾಗಿ ಉತ್ತಮ ಸಾಧನೆ ಮಾಡಿದ್ದರು.

ಪಂಜಾಬ್‌ ಕಿಂಗ್ಸ್ ತಂಡ ಕಳೆದ ಐಪಿಎಲ್‌ ಹರಾಜಿನಲ್ಲಿ ೮.೨೫ ಕೋಟಿ ರೂಪಾಯಿ ಮೊತ್ತಕ್ಕೆ ಧವನ್‌ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ೩೬ ವರ್ಷದ ಅವರು ೧೪ ಪಂದ್ಯಗಳಲ್ಲಿ ೪೬೦ ರನ್‌ ಬಾರಿಸಿದ್ದರು.

ಇದನ್ನೂ ಓದಿ | IPL 2023| ಇಸ್ತಾಂಬುಲ್‌ಗೆ ಹೋದರೆ ಐಪಿಎಲ್‌ ಬಾಯ್ಕಾಟ್​​; ಬಿಸಿಸಿಐಗೆ ಅಭಿಮಾನಿಗಳ ಬೆದರಿಕೆ

Exit mobile version