ಬೆಂಗಳೂರು : ಶಿಖರ್ ಧವನ್ ಟೀಮ್ ಇಂಡಿಯಾದಲ್ಲಿ ಅತಿ ಹೆಚ್ಚು ಹಾಸ್ಯ ಪ್ರಜ್ಞೆ ಹೊಂದಿರುವ ಆಟಗಾರ. ಅವರಿದ್ದಲ್ಲಿ ನಗು, ಡಾನ್ಸ್ ಕಾಯಂ. ಇತ್ತೀಚಿನ ದಿನಗಳಲ್ಲಿ ಅವರು ಭಾರತ ಚುಟುಕು ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಕೇವಲ ಏಕ ದಿನ ಪಂದ್ಯಗಳಿಗೆ ಸೀಮಿತಗೊಂಡಿದ್ದಾರೆ. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಹಣಾಹಣಿಯಲ್ಲಿ ಅವರು ಆಡುತ್ತಿಲ್ಲ. ಆದರೆ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕ ದಿನ ಪಂದ್ಯಗಳ ಸರಣಿಯಲ್ಲಿ ಅವಕಾಶ ಕಣಕ್ಕಿಳಿಯಲಿದ್ದಾರೆ. ಈ ನಡುವಿನ ಸಮಯವನ್ನು ಅವರು ಸಂತಸದಿಂದ ಕಳೆಯುತ್ತಿದ್ದಾರೆ ಎಂಬುದನ್ನು ಕಾಲು ನೋವಿನಲ್ಲಿ ಮಲಗಿರುವ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮುಂದೆ ಕುಣಿಯುವ ಮೂಲಕ ತೋರಿಸಿದ್ದಾರೆ.
ರವೀಂದ್ರ ಜಡೇಜಾ ಅವರು ಸದ್ಯ ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಶಿಖರ್ ಧವನ್ ಕೂಡ ಬೆಂಗಳೂರಿನಲ್ಲಿದ್ದಾರೆ. ಅಂತೆಯೇ ಅವರು ಜಡೇಜಾ ಅವರು ವಿಶ್ರಾಂತಿಯಲ್ಲಿರುವ ಕೊಠಡಿಗೆ ತೆರಳಿ ಡಾನ್ಸ್ ಮಾಡಿದ್ದಾರೆ.
ಇವನಿಗೆ ಮದುವೆ ಮಾಡಿ, ಜವಾಬ್ದಾರಿ ಬಂದ ಬಳಿಕ ಎಲ್ಲವೂ ಸರಿಯಾಗಬಹುದು ಎಂಬುದಾಗಿ ವಿಡಿಯೊದಲ್ಲಿ ಹಾಡು ಬರುತ್ತಿರುತ್ತದೆ. ಶಿಖರ್ ಧವನ್ ಅದಕ್ಕೆ ಲಿಪ್ ಸಿಂಕ್ ಮಾಡಿ ಕುಣಿಯುತ್ತಿದ್ದಾರೆ. ಈ ವಿಡಿಯೊಗೆ ಕ್ರಿಕೆಟ್ ಅಭಿಮಾನಿಗಳು ಬಗೆಬಗೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇದನ್ನೂ ಓದಿ | Team India | ರವೀಂದ್ರ ಜಡೇಜಾಗೆ ಮಂಡಿ ಆಪರೇಷನ್ ಸಕ್ಸೆಸ್