Site icon Vistara News

Shikhar Dhawan: ನಾನು ಆಯ್ಕೆಗಾರನಾಗಿದ್ದರೆ ಶುಭಮನ್​ ಗಿಲ್​ಗೆ ಮೊದಲ ಆದ್ಯತೆ ನೀಡುತ್ತಿದ್ದೆ: ಶಿಖರ್​ ಧವನ್

Shikhar Dhawan: If I was a selector I would have given Shubman Gill first priority: Shikhar Dhawan

Shikhar Dhawan: If I was a selector I would have given Shubman Gill first priority: Shikhar Dhawan

ಮೊಹಾಲಿ: ಒಂದೊಮ್ಮೆ ನಾನು ಆಯ್ಕೆಗಾರ ಅಥವಾ ನಾಯಕನಾಗಿರುತ್ತಿದ್ದರೆ ಶುಭಮನ್​ ಗಿಲ್​ಗೆ(Shubman Gill) ಹೆಚ್ಚಿನ ಅವಕಾಶ ನೀಡುತ್ತೇನೆ ಎಂದು ಟೀಮ್​ ಇಂಡಿಯಾದ ಹಿರಿಯ ಆಟಗಾರ ಶಿಖರ್​ ಧವನ್(Shikhar Dhawan)​ ಹೇಳಿದ್ದಾರೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2023) ಟೂರ್ನಿಯಲ್ಲಿ ಪಾಲ್ಗೊಳ್ಳಲು ಶಿಖರ್​ ಧವನ್​ ಅವರು ಈಗಾಗಲೇ ಮೊಹಾಲಿಯಲ್ಲಿ ಬೀಡುಬಿಟ್ಟಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಜತೆಗೆ ಈ ಬಾರಿ ಅವರು ಪಂಜಾಬ್ ಕಿಂಗ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ ನಡೆಸಿದ ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಧವನ್​ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ವೇಳೆ ತಂಡದ ಸೆಲೆಕ್ಟರ್ ಅಥವಾ ನಾಯಕನಾಗಿರುತ್ತಿದ್ದರೆ, ಯಾರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡುತ್ತೀರ ಎಂದು ಸಂದರ್ಶಕರೊಬ್ಬರು ಧವನ್​ ಬಳಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಧವನ್. “ಶುಭಮನ್ ಗಿಲ್ ಅವರು ಈಗಾಗಲೇ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಅನುಭವವಿದ್ದರೂ, ಒಂದು ವೇಳೆ ನಾನು ಸೆಲೆಕ್ಟರ್ ಆಗಿದ್ದರೆ, ಶುಭಮನ್​ ಗಿಲ್‌ಗೆ ಹೆಚ್ಚಿನ ಅವಕಾಶ ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಭಾರತ ಕ್ರಿಕೆಟ್‌ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ತಂಡಕ್ಕೆ ಮರಳುವು ನಿಟ್ಟಿನಲ್ಲಿ ತಾವು ಸದಾ ಪ್ರಯತ್ನ ಪಡುತ್ತಿರುತ್ತೇನೆ. ಒಂದು ವೇಳೆ ಅವಕಾಶ ಸಿಕ್ಕರೆ ನಾನು ಆಡಲು ರೆಡಿ ಇರಲಿದ್ದೇನೆ. ಅಂತಹ ಅವಕಾಶ ಬರದಿದ್ದರೂ ನಾನೇನು ಬೇಸರ ಪಡುವುದಿಲ್ಲ. ನನ್ನ ಕೈಯಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಇದನ್ನೂ ಓದಿ IPL 2023: ಬೆಂಗಳೂರಿನ ವಿವಿಧ ನಗರಗಳಲ್ಲಿ ಕಂಗೊಳಿಸಿದ ಐಪಿಎಲ್​ ಟ್ರೋಫಿ

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವಾಡಿದ್ದ ಶಿಖರ್​ ಧವನ್, ಬಳಿಕ ಲಯದ ಸಮಸ್ಯೆಯಿಂದಾಗಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್​ ತಂಡದಿಂದ ಸತತವಾಗಿ ಹೊರಗುಳಿದಿದ್ದಾರೆ. ಸದ್ಯ ಐಪಿಎಲ್​ನಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿ ಗಮನ ಸೆಳೆದರೆ ಅವರು ಮತ್ತೆ ಟೀಮ್​ ಇಂಡಿಯಾಕ್ಕೆ ಮರಳುವ ಸಾಧ್ಯತೆ ಇದೆ.

Exit mobile version