Site icon Vistara News

Kichcha Sudeep : ಶಿಖರ್​ ಧವನ್​, ಕಿಚ್ಚ ಸುದೀಪ್​ ಸೌಹಾರ್ದ ಭೇಟಿ; ಅಭಿಮಾನಿಗಳ ಸಂಭ್ರಮ

sudeep

#image_title

ಬೆಂಗಳೂರು: ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ (Kichcha Sudeep) ಹಾಗೂ ಕ್ರಿಕೆಟ್​ಗೆ ಅವಿನಾಭಾವ ನಂಟು. ಕ್ರಿಕೆಟ್​ ಇದ್ದಲ್ಲಿ ಅವರು ಇರುತ್ತಾರೆ, ಸುದೀಪ್​ ಇದ್ದಲ್ಲಿ ಕ್ರಿಕೆಟ್​ ಚರ್ಚೆಯೂ ಜೋರು. ಕಳೆದ ಟಿ20 ವಿಶ್ವ ಕಪ್​ ವೇಳೆ ಅವರು ಆಸ್ಟ್ರೇಲಿಯಾಗೆ ಹೋಗಿ ಪಂದ್ಯ ವೀಕ್ಷಣೆ ಮಾಡಿಕೊಂಡು ಬಂದಿದ್ದರು ಅವರ ಆಸಕ್ತಿಗೆ ಉದಾಹರಣೆ. ಅದೇ ರೀತಿ ಉತ್ತಮ ಕ್ರಿಕೆಟ್​ ಆಟಗಾರನಾಗಿರುವ ಅವರು ಹಲವು ಸೆಲೆಬ್ರಿಟಿ ಕ್ರಿಕೆಟಿಗರ ಜತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಅಂತೆಯೇ ಸುದೀಪ್ ಅವರು ಸೋಮವಾರ (ಫೆಬ್ರವರಿ 6ರಂದು) ತಾವು ಭಾರತ ತಂಡದ ಆರಂಭಿಕ ಬ್ಯಾಟರ್​ ಶಿಖರ್​ ಧವನ್​ ಅವರನ್ನು ಭೇಟಿಯಾಗಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಶಿಖರ್​ ಧವನ್​ ಅವರು ಭಾರತ ತಂಡದ ಸ್ಟೈಲಿಸ್ಟ್​ ಆಟಗಾರ. ಅವರಿಗೆ ಗಬ್ಬರ್​ ಸಿಂಗ್​ ಎಂಬ ಉಪನಾಮವೂ ಇದೆ. ವಿಭಿನ್ನ ಲುಕ್​ ಹೊಂದಿರುವ ಅವರಿಗೆ ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ತಮಾಷೆ ಹಾಗೂ ವಿನೋದಗಳಲ್ಲಿ ಹೆಚ್ಚು ಮುಳುಗಿರುವ ಅವರು ಬೇರೆ ಬೇರೆ ಕ್ಷೇತ್ರದವರ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಂತೆಯೇ ಕಿಚ್ಚ ಸುದೀಪ್​ ಅವರಿಗೂ ಉತ್ತಮ ಗೆಳೆಯ. ಇದೀಗ ಅವರಿಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : Kiccha sudeep : ಕಿಚ್ಚ ಸುದೀಪ್‌ ಮನೆಗೆ ತೆರಳಿದ ಡಿ.ಕೆ. ಶಿವಕುಮಾರ್‌, ರಾಜಕೀಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ ಭೇಟಿ

ಇದೊಂದು ಸುಂದರವಾದ ಭೇಟಿ. ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಪರವಾಗಿ ಆಡುತ್ತಿರುವ ಶಿಖರ್​ ಧವನ್​ಗೆ ಶುಭಾಶಯಗಳು ಎಂದು ಕಿಚ್ಚ ಸುದೀಪ್​ ಅವರು ಟ್ವೀಟ್​ ಮಾಡಿದ್ದಾರೆ.

ಈ ಇಬ್ಬರು ಸ್ಟಾರ್​ ಸೆಲೆಬ್ರಿಟಿಗಳು ಯಾಕೆ ಭೇಟಿಯಾಗಿದ್ದಾರೆ ಎಂಬ ಕುರಿತು ಮಾಹಿತಿ ಇಲ್ಲ. ಆದರೆ ಅದೊಂದು ಆತ್ಮೀಯ ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರು ಜನಪ್ರಿಯ ತಾರೆಗಳ ಭೇಟಿ ಅಭಿಮಾನಿಗಳ ಪಾಲಿಗೆ ಅತ್ಯಂತ ಕೌತುಕದ ವಿಷಯವಾಗಿ ಮಾರ್ಪಟ್ಟಿದೆ.

Exit mobile version