Site icon Vistara News

Shikhar Dhawan Retirement: ಟ್ಯಾಟೂ ಹಾಕಿಸಿ ಎಚ್​ಐವಿ ಪರೀಕ್ಷೆ ಮಾಡಿಸಿಕೊಂಡಿದ್ದ ಧವನ್​

Shikhar Dhawan Retirement

Shikhar Dhawan Retirement: Shikhar Dhawan shares hilarious episode of when he got his first tattoo

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಎಡಗೈ ಬ್ಯಾಟರ್​ ಶಿಖರ್ ಧವನ್(Shikhar Dhawan Retirement) ಅವರು ಇಂದು(ಶನಿವಾರ) ಬೆಳಗ್ಗೆ ದಿಢೀರ್​ ಎನ್ನುವಂತೆ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್​ಗೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. 38 ವರ್ಷದ ಧವನ್(Shikhar Dhawan) ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಸದ್ಯ ಐಪಿಎಲ್​ನಲ್ಲಿ ಅವರು ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಟ್ಯಾಟೂ ಪ್ರಿಯ(shikhar dhawan tattoo) ಧವನ್​ ಎಚ್​ಐವಿ ಪರೀಕ್ಷೆ(HIV Test) ಮಾಡಿಸಿಕೊಂಡಿದ್ದರು. ಈ ವಿಚಾರವನ್ನು ಅವರು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಸಾರಸ್ಯಕರ ಸಂಗತಿ ಇಲ್ಲಿದೆ.

ಬೋಳು ತಲೆ, ಮೈಮೇಲೆಲ್ಲ ಟ್ಯಾಟೂ, ಹುರಿ ಮೀಸೆಯಿಂದ ಅವರು ಅತ್ಯಾಕರ್ಷಕವಾಗಿ ಕಾಣುವ ಕಾರಣ ಅವರನ್ನು ಗಬ್ಬರ್​ ಸಿಂಗ್​ ಹೆಸರಿನಿಂದ ಕರೆಯಲಾಗುತ್ತದೆ. ಮೈದಾನದಲ್ಲಿ ಮತ್ತು ಡ್ರೆಸಿಂಗ್​ ರೂಮ್​ನಲ್ಲಿಯೂ ಅವರು ತಮ್ಮ ಹಾವಭಾವಗಳಿಂದ ಎಲ್ಲರ ಗಮನ ಸೆಳೆಯುವ ಧವನ್​ ಹಿಂದೊಮ್ಮೆ ಆಜ್​ತಕ್ ಚಾನೆಲ್​ ನಡೆಸುವ ಸೀದಿ ಬಾತ್​ ಕಾರ್ಯಕ್ರಮದಲ್ಲಿ ತಮ್ಮ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಹೇಳಿಕೊಂಡಿದ್ದರು. 


ಸ್ಟೈಲ್​ಗಾಗಿ ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಂಡಿರುವ ಧವನ್​ ಯೌವನದಲ್ಲೇ ಹೋದಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಅಂತೆಯೇ ಅವರು ಗೆಳೆಯರ ಜತೆ ಪ್ರವಾಸಕ್ಕೆ ಹೋಗಿದ್ದ ವೇಳೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ ಹಚ್ಚೆ ಹಾಕಿಸಿಕೊಳ್ಳುವ ಮೊದಲು ತನ್ನ ತಂದೆಯ ಬಳಿ ಅನುಮತಿ ಕೇಳಿರಲಿಲ್ಲವಂತೆ. ಹೀಗಾಗಿ ತಂದೆಯ ಕೈಯಿಂದ ಏಟು ಬೀಳುತ್ತದೆ ಎನ್ನುವ ಭಯದಿಂದ ಧವನ್​ ಪ್ರವಾಸದಿಂದ ತಿರುಗಿ ಮನೆಗೂ ಬಂದರೂ ಬಳಿಕ ಸಾಕಷ್ಟು ದಿನ ತನ್ನ ಟ್ಯಾಟು ಮನೆಯಲ್ಲಿ ಯಾರಿಗೂ ಗೊತ್ತಾಗದೇ ಹಾಗೆ ಗುಟ್ಟಾಗಿ ಕಾಪಾಡಿಕೊಂಡಿದ್ದರಂತೆ. ಆದರೆ, ಒಂದು ದಿನ ಈ ವಿಷಯ ಬಹಿರಂಗವಾಗಿ ಕೋಪಗೊಂಡ ತಂದೆ ಬೆನ್ನ ಮೇಲೆ ಎರಡೇಟು ಬಾರಿಸಿದ್ದರು ಎಂಬ ವಿಚಾರವನ್ನು ಧವನ್​ ನಗುತ್ತಲೇ ಹೇಳಿಕೊಂಡಿದ್ದರು.


ತಂದೆಯಿಂದ ಏಟು ತಿಂದಾದ ಬಳಿಕ ಎಚ್​​ಐವಿ ಪರೀಕ್ಷೆಗೆ ಒಳಗಾಗಿದ್ದೆ, ರಿಪೋರ್ಟ್​ ನೆಗೆಟಿವ್ ಬಂದ ಬಳಿಕ ನಿಟ್ಟುಸಿರು ಬಿಟ್ಟೆ​ ಈಗಲೂ ಕೂಡ ನನ್ನ ಬಳಿ ಈ ನೆಗೆಟಿವ್​ ರಿಪೋರ್ಟ್​ ಇದೆ ಎಂಬುದಾಗಿ ಧವನ್​ ಸೀದಿ ಬಾತ್​ ಕಾರ್ಯಕ್ರಮದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದರು. ಟ್ಯಾಟು ಹಾಕುವ ಸೂಜಿಗಳ ಬಳಕೆಯ ಭಯದಿಂದ ಅವರು ಈ ಪರೀಕ್ಷೆ ನಡೆಸಿದ್ದರಂತೆ.

ಇದನ್ನೂ ಓದಿ Shikhar Dhawan: ವಿಚ್ಛೇದಿತ ಪತ್ನಿಯಿಂದ ಮಾನಸಿಕ ಕ್ರೌರ್ಯಕ್ಕೆ ಒಳಗಾಗಿದ್ದ ಶಿಖರ್​ ಧವನ್

ವಿಡಿಯೊ ಮೂಲಕ ನಿವೃತ್ತಿ ಘೋಷಿಸಿದ 38 ವರ್ಷದ ಧವನ್, “ಭಾರತಕ್ಕಾಗಿ ಆಡುವ ಗುರಿಯನ್ನು ನಾನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ ಮತ್ತು ಬಹಳಷ್ಟು ಜನರಿಗೆ ಧನ್ಯವಾದಗಳು ನಾನು ಅದನ್ನು ಸಾಧಿಸಿದೆ. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡವು ಮತ್ತೊಂದು ಕುಟುಂಬ, ಖ್ಯಾತಿ ಮತ್ತು ಎಲ್ಲರ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಂಡಿತು. ಕಥೆಯಲ್ಲಿ ಮುಂದುವರಿಯಲು ನೀವು ಪುಟಗಳನ್ನು ತಿರುಗಿಸಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ನಾನು ಅದನ್ನು ಸಹ ಮಾಡುತ್ತಿದ್ದೇನೆ, ನಾನು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ವೃತ್ತಿಜೀವನದುದ್ದಕ್ಕೂ ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಧವನ್​ ವಿಡಿಯೊದಲ್ಲಿ ಹೇಳಿದ್ದಾರೆ.

Exit mobile version