ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ಶಿಖರ್ ಧವನ್(Shikhar Dhawan) ಇಂದು(ಶನಿವಾರ) ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ಗೆ ವಿದಾಯ(shikhar dhawan retirement) ಘೋಷಿಸಿದ್ದಾರೆ. ಧವನ್ ಅವರ ಕ್ರಿಕೆಟ್ ಹಿನ್ನಡೆಗೆ ಪ್ರಮುಖ ಕಾರಣ ಅವರ ವಿಚ್ಛೇದಿತ ಪತ್ನಿ ಆಯೆಷಾ ಮುಖರ್ಜಿ(Ayesha Mukherjee). ಧವನ್ ಬಾಳಲ್ಲಿ ಆಯೆಷಾ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದರು.
ಯಾರಿಗೂ ಕೇಡು ಬಯಸದ, ಕ್ರಿಕೆಟ್ನ ಅಜಾತ ಶತ್ರು ಎಂದು ಗುರುತಿಸಿಕೊಂಡಿರುವ ಧವನ್ ಅವರ ಬಾಳಲ್ಲಿ ಇಷ್ಟೊಂದು ನೋವು ಉಂಟು ಮಾಡಲು ಅವರ ವಿಚ್ಛೇದಿತ ಪತ್ನಿ ಆಯೇಶಾ ಮುಖರ್ಜಿ ಕಾರಣ. ಹಲವು ಬಾರಿ ಧವನ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಾನಹಾನಿ ಮಾಡಿದ್ದರು. ಶಿಖರ್ ಧವನ್ ಮತ್ತು ಆಯೆಷಾ ಮುಖರ್ಜಿ (Shikhar Dhawan and Ayesha Mukherjee) 2021ರ ಸೆಪ್ಟೆಂಬರ್ನಲ್ಲಿ ವಿಚ್ಛೇದನ ಪಡೆದಿದ್ದರು ಕೂಡ ಕೋರ್ಟ್ ಇದನ್ನು ಅಧಿಕೃತಪಡಿಸಿದ್ದು, ಕಳೆದ ವರ್ಷ ಅಕ್ಟೋಬರ್ 4 ರಂದು. ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು. ಆಯೇಷಾ ಶಿಖರ್ ಅವರನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸಿದ್ದರು. ಅಲ್ಲದೆ ಪುತ್ರನನ್ನು ಭೇಟಿಯಾಗದಂತೆ ಕೂಡ ಮಾಡಿದ್ದರು. ಆದರೆ ಕೋರ್ಟ್ ಧವನ್‌ಗೆ ನ್ಯಾಯ ಒದಗಿಸಿತ್ತು.
ಆಯೇಷಾ ಅವರಿಂದಾಗಿ ಧವನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಹಲವು ಬಾರಿ ತಮ್ಮ ಪತ್ನಿಯ ಕಿರುಕುಳದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಈಗಲೂ ಕೂಡ ಧವನ್ ತಮ್ಮ ಮಗನ ಭೇಟಿಗಾಗಿ ಸದಾ ಕಾಯುತ್ತಲೇ ಇದ್ದಾರೆ. ಆದರೆ ಆಯೇಷಾ ಇದಕ್ಕೆ ಅನುಮತಿ ನೀಡುತ್ತಿಲ್ಲ. ಕೇವಲ ವಿಡಿಯೊ ಕಾಲ್ ಮೂಲಕ ಧವನ್ ಮಗನ ಜತೆ ಮಾತನಾಡುತ್ತಿರುತ್ತಾರೆ. ಹಲವು ಬಾರಿ ಮಗನ ಜತೆ ವಿಡಿಯೊ ಕಾಲ್ನಲ್ಲಿ ಮಾತನಾಡಿದ ಸ್ಟ್ರೀನ್ಶಾಟ್ ತೆಗೆದು ಭಾವನಾತ್ಮ ಪತ್ರವನ್ನು ಬರೆಯುತ್ತಿರುತ್ತಾರೆ.
ಇದನ್ನೂ ಓದಿ Shikhar Dhawan: ನಿವೃತ್ತಿ ಹೇಳಿದ ಧವನ್‌ಗೆ ಶುಭ ಹಾರೈಸಿದ ಸಚಿನ್, ಕೊಹ್ಲಿ
“ಮದುವೆ ವಿಚಾರದಲ್ಲಿ ನಾನು ಎಡವಿದ್ದೇನೆ. ನಾನೇ ಈ ನಿರ್ಧಾರ ತೆಗೆದುಕೊಂಡ ಕಾರಣ, ಬೇರೆಯವರತ್ತ ಬೆರಳು ತೋರಿಸಲು ಬಯಸುವುದಿಲ್ಲ. ಮದುವೆ ವಿಚಾರದಲ್ಲಿ ಸರಿಯಾದ ಸಲಹೆಯನ್ನು ಪಡೆದ ಬಳಿಕವೇ ಮುಂದುವರಿದರೆ ಒಳಿತು. ಇಲ್ಲವಾದಲ್ಲಿ ಆ ಬಳಿಕ ಹಲವು ಸಮಸ್ಯೆಗಳು ಎದುರಾಗಬಹುದು” ಎಂದು ಧವನ್ ಅತ್ಯಂತ ದುಖಃದ ಮಾತುಗಳನ್ನಾಡಿದ್ದರು.
ಶಿಖರ್ ಧವನ್ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.