Site icon Vistara News

Dhawan And Iyer: ಇಂಗ್ಲೀಷ್​ ಹಾಡಿಗೆ ಹೆಜ್ಜೆ ಹಾಕಿದ ಶಿಖರ್ ಧವನ್​, ಶ್ರೇಯಸ್​ ಅಯ್ಯರ್; ವಿಡಿಯೊ ವೈರಲ್​​

Dhawan And Iyer

#image_title

ಬೆಂಗಳೂರು: ಟೀಮ್​ ಇಂಡಿಯಾದ ಆಟಗಾರರಾದ ಶಿಖರ್​ ಧವನ್​ ಮತ್ತು ಶ್ರೇಯಸ್​ ಅಯ್ಯರ್(Dhawan And Iyer) ಅವರು ಇಂಗ್ಲೀಷ್​ ಹಾಡಿಗೆ ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್​ಸಿಎ)ಯಲ್ಲಿ ತರಬೇತಿ ಪಡೆಯುತ್ತಿರುವ ಧವನ್​ ಮತ್ತು ಅಯ್ಯರ್​ ಬಿಡುವಿನ ವೇಳೆ ನೃತ್ಯ ಮಾಡಿದ್ದಾರೆ. ಧವನ್​ ಅವರ ಕೈಯಿಂದ ಅಯ್ಯರ್​ ಮೊಬೈಲ್​ ಫೋನ್ ಕಸಿದು ಒಡೆದು ಹಾಕುವ ಸನ್ನೆ ಮಾಡುವ ಮೂಲಕ ಇಬ್ಬರು ಕಾಮ್​ ಡೌನ್​…ಕಾಮ್​ ಡೌನ್ ಬೇಬಿ(Rema’s ‘Calm Down Baby) ಎನ್ನುವ ಇಂಗ್ಲೀಷ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊವನ್ನು ಧವನ್​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ Shubman Gill: ನ್ಯೂ ಬ್ಯಾಟಿಂಗ್​ ಸೆನ್ಷೇಷನಲ್ ಗಿಲ್​ ಇನ್​ಸ್ಟಾಗ್ರಾಮ್​ ಪೋಸ್ಟ್​ ವೈರಲ್​

ಧವನ್​ ಮತ್ತು ಅಯ್ಯರ್​ ನೃತ್ಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಐಪಿಎಲ್​ ವೇಳೆ ಇಬ್ಬರು ಜತೆಯಾಗಿ ಡ್ಯಾನ್ಸ್​ ಮಾಡಿದ್ದರು. ಕ್ರಿಕೆಟ್​ ಜತೆಗೆ ನೃತ್ಯದಲ್ಲಿಯೂ ಉಭಯ ಆಟಗಾರರು ತುಂಬಾ ಆಸಕ್ತಿ ಹೊಂದಿದ್ದಾರೆ. ಬೆನ್ನು ನೋವಿನಿಂದ ಸಂಫೂರ್ಣ ಚೇತರಿಕೆ ಕಾಣದ ಹಿನ್ನೆಲೆ ಅಯ್ಯರ್​ ಅವರು ಆಸೀಸ್​ ವಿರುದ್ಧದ ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಫಿಟ್​ನೆಸ್​ ವರದಿಯಲ್ಲಿ ಪಾಸ್​ ಆದರೆ ಆಸೀಸ್​ ವಿರುದ್ಧದ ದ್ವಿತೀಯ ಪಂದ್ಯಕ್ಕೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

Exit mobile version