Site icon Vistara News

Shikhar Dhawan: ಮಗನ ಜನ್ಮದಿನಕ್ಕೆ ಭಾವುಕ ಪೋಸ್ಟ್‌ ಹಂಚಿಕೊಂಡ ಶಿಖರ್‌ ಧವನ್‌

Shikhar Dhawan

ನವದೆಹಲಿ: ಟೀಮ್​ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿರುವ ಶಿಖರ್​ ಧವನ್(Shikhar Dhawan)​ ಅವರು ತಮ್ಮ ಪುತ್ರನ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಾವನಾತ್ಮ ಪೋಸ್ಟ್(Emotional Post)​ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ ಕಂಡು ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.

ಯಾರಿಗೂ ಕೇಡು ಬಯಸದ, ಕ್ರಿಕೆಟ್​ನ ಅಜಾತ ಶತ್ರು ಎಂದು ಗುರುತಿಸಿಕೊಂಡಿರುವ ಧವನ್​ ಅವರ ಬಾಳಲ್ಲಿ ಇಷ್ಟೊಂದು ನೋವು ಉಂಟು ಮಾಡಲು ಅವರ ವಿಚ್ಛೇದಿತ ಪತ್ನಿ ಆಯೇಶಾ ಮುಖರ್ಜಿ ಕಾರಣ. ಈ ವರ್ಷ ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ವಿಚ್ಛೇದನವನ್ನು ನೀಡಿತ್ತು. ಆಯೇಷಾ ಶಿಖರ್ ಅವರನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸಿದ್ದರು. ಅಲ್ಲದೆ ಪುತ್ರನನ್ನು ಭೇಟಿಯಾಗದಂತೆ ಕೂಡ ಮಾಡಿದ್ದರು. ಆದರೆ ಕೋರ್ಟ್​ ಧವನ್​ಗೆ ನ್ಯಾಯ ಒದಗಿಸಿತ್ತು. ಆಯೇಷಾ ಅವರಿಂದಾಗಿ ಧವನ್​ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಹಲವು ಬಾರಿ ತಮ್ಮ ಪತ್ನಿಯ ಕಿರುಕುಳದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು.

ಮಗನ ಪಾಲನೆ ಕುರಿತು ನ್ಯಾಯಾಲಯ ಯಾವುದೇ ನಿರ್ಧಾರವನ್ನು ನೀಡಿಲ್ಲ. ಧವನ್​ ಅವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನೊಂದಿಗೆ ಅಗತ್ಯ ಸಮಯವನ್ನು ಕಳೆಯಬಹುದು ಎಂದು ನ್ಯಾಯಾಲಯ ಹೇಳಿತ್ತು. ಜತೆಗೆ ವಿಡಿಯೊ ಕರೆಯಲ್ಲಿ ಮಾತನಾಡಬಹುದು ಎಂದು ತಿಳಿಸಿತ್ತು. ಭೇಟಿಯಾಗಲು ಸಾಧ್ಯವಾಗದ ಕಾರಣ ಧವನ್​ ತಮ್ಮ ಪುತ್ರ ಜೋರಾವರ್​ಗೆ ವಿಡಿಯೊ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜತೆಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಗನೊಂದಿಗೆ ಮಾತನಾಡುವ ಸ್ಟ್ರೀನ್​ಶಾಟ್​ ತೆಗೆದು ಭಾವನಾತ್ಮ ಪತ್ರವೊಂದನ್ನು ಕೂಡ ಬರೆದಿದ್ದಾರೆ.

ಧವನ್​ ಭಾವನಾತ್ಮ ಪೋಸ್ಟ್​

‘ನಾನು ನಿನ್ನನ್ನು ನೋಡಿ ಒಂದು ವರ್ಷವಾಗಿದೆ. ಕಳೆದ ಸುಮಾರು 3 ತಿಂಗಳುಗಳಿಂದ ನನ್ನು ಬಂಧಿಯಾಗಿದ್ದೇನೆ. ಹೀಗಾಗಿ ನಾನು ನಿನಗೆ ಜನ್ಮದಿನದ ಶುಭಾಶಯಗಳನ್ನು ಕೋರಲು ನಿನ್ನೊಂದಿಗಿರುವ ಹಳೆಯ ಹಳೇ ಫೋಟೋವನ್ನೇ ಬಳಸುತ್ತಿದ್ದೇನೆ. ಜನ್ಮದಿನದ ಶುಭಾಶಯಗಳು ಕಂದ’ ಎಂದು ಶಿಖರ್‌ ಧವನ್‌ ಬರೆದಿದ್ದಾರೆ.

ಇದನ್ನೂ ಓದಿ Viral Video: ಕಾಲರ್‌ ಪಟ್ಟಿ ಹಿಡಿದು ಶಿಖರ್​ ಧವನ್​ಗೆ​ ವಾರ್ನಿಂಗ್​ ನೀಡಿದ ತಂದೆ

“ನಾನು ನಿನ್ನನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದಿದ್ದರೂ, ಪತ್ರಿ ದಿನ ವಿಡಿಯೊ ಕಾಲ್​ ಅಥವಾ, ಮೊಬೈಲ್​ ಸಂದೇಶದ ಮೂಲಕ ನಿನ್ನೊಂದಿಗೆ ಸಂಪರ್ಕದಲ್ಲಿರುತ್ತೇನೆ. ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನೀನು ಉತ್ತಮವಾಗಿ ಮತ್ತು ಚೆನ್ನಾಗಿ ಬೆಳೆಯುತ್ತಿದ್ದೀಯ ಎಂದು ನನಗೆ ತಿಳಿದಿದೆ” ಧವನ್​ ಬರೆದುಕೊಂಡಿದ್ದಾರೆ.

ತಾತ ಸದಾ ನೆನಪಿಸಿಕೊಳ್ಳುತ್ತಾರೆ

‘ಪಾಪಾ ಯಾವಾಗಲೂ ನಿನ್ನನ್ನು ನೆನಪಿಸಿಕೊಳ್ಳುತ್ತಾರೆ. ಜತೆಗೆ ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ದೇವರ ದಯೆಯಿಂದ ನಾವು ಮತ್ತೆ ಭೇಟಿಯಾಗುವ ಸಮಯಕ್ಕಾಗಿ ನಗುತ್ತಲೇ ಕಾಯುತ್ತಿರುತ್ತೇನೆ. ಹಠಮಾರಿಯಾಗಬೇಡ, ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಮಾಡು, ಶಾಂತ, ತಾಳ್ಮೆ ಮತ್ತು ಬಲಶಾಲಿಯಾಗಿರು. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ’ ಎಂದು ಭಾವನಾತ್ಮಕವಾಗಿ ತಮ್ಮ ಮನಸ್ಸಿನ ನೋವನ್ನು ಇಲ್ಲಿ ಬರೆದುಕೊಂಡಿದ್ದಾರೆ.

Exit mobile version