Site icon Vistara News

INDvsSL | ಶಿವಂ ಮಾವಿ, ಶುಬ್ಮನ್​ ಗಿಲ್​ ಟಿ20 ಮಾದರಿಗೆ ಎಂಟ್ರಿ, ಅರ್ಶ್​ದೀಪ್​ ಸಿಂಗ್​ ಅಲಭ್ಯ

shubman gill

ಮುಂಬಯಿ : ಶ್ರೀಲಂಕಾ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಯುವ ಬ್ಯಾಟರ್​ ಶುಬ್ಮನ್​ ಗಿಲ್​ ಹಾಗೂ ಬೌಲರ್​ ಶಿವಂ ಮಾವಿ ಭಾರತ ಚುಟಕು ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಭವಿಷ್ಯದ ತಂಡ ರಚಿಸುವ ಉದ್ದೇಶದಿಂದ ಶುಬ್ಮನ್​ ಗಿಲ್​ಗೆ ಬಿಸಿಸಿಐ ಅವಕಾಶ ನೀಡಿತ್ತು. ಇದೀಗ ಅವರನ್ನು ಕಣಕ್ಕಿಳಿಸುವ ಮೂಲಕ ಪದಾರ್ಪಣೆಗೂ ಅವಕಾಶ ನೀಡಲಾಗಿದೆ.

ಶುಬ್ಮನ್​ ಗಿಲ್ ಅವಕಾಶ ಪಡೆಯುವ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಒಂದು ಓವರ್​ನಲ್ಲಿ ಸತತ ಆರು ಸಿಕ್ಸರ್ ಬಾರಿಸುವ ಮೂಲಕ ದಾಖಲೆ ಬರೆದಿದ್ದ ಋತುರಾಜ್​ ಗಾಯಕ್ವಾಡ್ ಬೆಂಚು ಕಾಯುವಂತಾಗಿದೆ. ಇದೇ ವೇಳೆ ಕಳೆದ ತಿಂಗಳು ನಡೆದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ 6 ಕೋಟಿ ರೂಪಾಯಿ ಗಳಿಸಿಕೊಂಡಿದ್ದ ಯುವ ಬೌಲರ್​ ಶಿವಂ ಮಾವಿಗೂ ಅವಕಾಶ ನೀಡಲಾಗಿದೆ.

ತಂಡಗಳು

ಭಾರತ: 1 ಇಶಾನ್ ಕಿಶನ್, 2 ಶುಬ್ಮನ್​ ಗಿಲ್​, 3 ಸೂರ್ಯಕುಮಾರ್ ಯಾದವ್, 4 ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), 5 ಹಾರ್ದಿಕ್ ಪಾಂಡ್ಯ (ನಾಯಕ), 6 ದೀಪಕ್ ಹೂಡಾ, 7 ಅಕ್ಷರ್​​ ಪಟೇಲ್, 8 ಹರ್ಷಲ್ ಪಟೇಲ್, 9 ಶಿವಂ ಮಾವಿ, 10 ಉಮ್ರಾನ್ ಮಲಿಕ್, 11 ಯಜ್ವೇಂದ್ರ ಚಾಹಲ್

ಶ್ರೀಲಂಕಾ: 1 ಪಾತುಮ್ ನಿಸ್ಸಾಂಕ, 2 ಕುಸಾಲ್ ಮೆಂಡಿಸ್ (ವಿಕೆಟ್​ ಕೀಪರ್​), 3 ಧನಂಜಯ ಡಿ ಸಿಲ್ವಾ, 4 ಚರಿತ್ ಅಸಲಂಕಾ, 5 ಭಾನುಕಾ ರಾಜಪಕ್ಷ, 6 ದಸುನ್ ಶನಕ (ನಾಯಕ), 7 ವನಿಂದು ಹಸರಂಗ, 8 ಚಾಮಿಕಾ ಕರುಣಾರತ್ನೆ, 9 ಮಹೇಶ್ ತೀಕ್ಷಣ, 10. ದಿಲ್ಶನ್​ ಮದುಶನಕ, 10 11 ಕಸುನ್ ರಜಿತಾ.

ಇದನ್ನೂ ಓದಿ | INDvsSL | ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಸೋತ ಭಾರತ ತಂಡಕ್ಕೆ ಬ್ಯಾಟಿಂಗ್​ಗೆ ಆಹ್ವಾನ

Exit mobile version