Site icon Vistara News

Shoaib Akhtar: ಬಾಲಿವುಡ್​ನಿಂದ ಆಫರ್​ ಬಂದಿತ್ತು; ಶೋಯೆಬ್ ಅಖ್ತರ್

shoaib-akhtar-an-offer-came-from-bollywood-shoaib-akhtar

shoaib-akhtar-an-offer-came-from-bollywood-shoaib-akhtar

ಕರಾಚಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್(Shoaib Akhtar) ಅವರು ತಮಗೆ ಬಾಲಿವುಡ್‌ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಆಫರ್‌ ಬಂದಿತ್ತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ 2005ರ ‘ಗ್ಯಾಂಗ್‌ಸ್ಟರ್'(Gangster) ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸುವಂತೆ ತನ್ನನ್ನು ಸಂಪರ್ಕಿಸಲಾಗಿತ್ತೆಂದು ಹೇಳಿದ್ದಾರೆ. ಈ ಈ ಬಗ್ಗೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್(The Express Tribune) ಮಾಡಿರುವ ವರದಿಯನ್ನು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಪಾಕ್​ ವೇಗಿಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರದೇಶದ ರಾವಲ್ಪಿಂಡಿಯಲ್ಲಿ ಜನಿಸಿದ ಅಖ್ತರ್‌ “ರಾವಲ್ಪಿಂಡಿ ಎಕ್ಸ್‌ಪ್ರೆಸ್” ಎಂದೇ ಕ್ರಿಕೆಟ್​ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕಳೆದ ವರ್ಷವಷ್ಟೇ ಅಖ್ತರ್ ಅವರು ‘ರಾವಲ್ಪಿಂಡಿ ಎಕ್ಸ್‌ಪ್ರೆಸ್; ರೇಸಿಂಗ್ ಎಗೇನ್ಸ್ಟ್ ದಿ ಆಡ್ಸ್’ ಎಂದ ಶೀರ್ಷಿಕೆಯ ತಮ್ಮ ಜೀವನಚರಿತ್ರೆಯ ಚಿತ್ರವನ್ನು ಘೋಷಣೆ ಮಾಡಿದ್ದರು. ಆದರೆ ಈ ಚಿತ್ರದ ನಿರ್ಮಾಣ ಆರಂಭವಾಗಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ T20 World Cup | ಪಾಕ್​ಗೆ​ ಎದುರಾದ ಸ್ಥಿತಿ ಭಾರತ ತಂಡಕ್ಕೂ ಎದುರಾಗಲಿದೆ ಅಖ್ತರ್​ ಹೀಗೆ ಹೇಳಿದ್ದು ಯಾಕೆ?

ಶೋಯೆಬ್ ಅಖ್ತರ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಪಾಕ್​ ಪರ 163 ಏಕ ದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಏಕ ದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

Exit mobile version