ಕರಾಚಿ: ಪಾಕಿಸ್ತಾನ ತಂಡದ ಮಾಜಿ ಆಟಗಾರ ಶೋಯಿಬ್ ಅಖ್ತರ್(Shoaib Akhtar) ಭಾರತವನ್ನು ಕಡೆಗಣಿಸಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ಬಿದ್ದು ಟ್ರೋಲ್ ಆಗಿದ್ದಾರೆ. ಇಂದು ನಡೆಯುವ ಭಾರತ ಮತ್ತು ಪಾಕ್(IND vs PAK) ವಿರುದ್ಧದ ವಿಶ್ವಕಪ್ ಪಂದ್ಯದ ಹಿನ್ನಲೆ ಶೋಯಿಬ್ ಅಖ್ತರ್ ಅವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಇತಿಹಾಸ ಮರುಕಳಿಸಲಿದೆ” ಎಂದು ಬರೆದು ತಮ್ಮ ಹಳೇಯ ಫೋಟೊವನ್ನು ಹಾಕಿದ್ದರು. ಆದರೆ ಈ ಪೊಸ್ಟ್ ಕಂಡ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ಶೋಯಿಬ್ ಅಖ್ತರ್ ಅವರು ಪಾಕಿಸ್ತಾನ ತಂಡಕ್ಕೆ ಬೆಂಬಲ ಸೂಚಿಸಿ ಇತಿಹಾಸ ಪತನಗೊಳ್ಳಲಿದೆ ಎಂದು ಬರೆಯಬೇಕಿತ್ತು. ಆದರೆ ಅವರು ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ಬರೆದದ್ದು ಇಲ್ಲಿ ಟ್ರೋಲ್ಗೆ ಪ್ರಮುಖ ಕಾರಣ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಇದುವರೆಗೆ ವಿಶ್ವಕಪ್ನಲ್ಲಿ 7 ಬಾರಿ ಮುಖಾಮುಖಿಯಾಗಿವೆ. ಏಳೂ ಪಂದ್ಯಗಳಲ್ಲಿಯೂ ಭಾರತವೇ ಗೆದ್ದು ಸೋಲಿಲ್ಲದ ಸರದಾರನಾಗಿ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ IND vs PAK: ಪಂದ್ಯಕ್ಕೂ ಮುನ್ನವೇ ಧಿಮಾಕು ತೋರಿದ ಪಾಕ್ ವೇಗಿ ಶಾಹೀನ್ ಅಫ್ರಿದಿ
ನೀವು ಹೇಳಿರುವುದು 100ಕ್ಕೆ ನೂರು ಸತ್ಯ. ಇತಿಹಾಸ ಮರುಳಿಸುವದರಲ್ಲಿ ಯಾವುದೇ ಅನುಮಾನ ಬೇಡ. ಪಂದ್ಯಕ್ಕೂ ಮುನ್ನ ನೀವು ಈ ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಮತ್ತು ಭಾರತ ತಂಡಕ್ಕೆ ಬೆಂಬಲಿಸಿದ್ದಕ್ಕೆ ಧನ್ಯವಾಗಳು ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲ ನೆಟ್ಟಿಗರು, ಅವಸರವೇ ಅಪಘಾತಕ್ಕೆ ಕಾರಣ. ಭಾರತವನ್ನು ಕೆಣಕುವ ಮುನ್ನ ಕೊಂಚ ಯೋಚಿಸಿ ಎಂದು ಕಮೆಂಟ್ ಮಾಡಿದ್ದಾರೆ. ಟ್ರೋಲ್ ಆಗುತ್ತಿದ್ದಂತೆ ಶೋಯಿಬ್ ಅಖ್ತರ್ ಅವರು ತಮ್ಮ ಈ ಪೋಸ್ಟನ್ನು ಡಿಲೀಟ್ ಮಾಡಿ ಟೆಸ್ಟ್ ಕ್ರಿಕೆಟ್ ಒಂದರಲ್ಲಿ ಸಚಿನ್ ಅವರ ವಿಕೆಟ್ ಪಡೆದ ಬಳಿಕ ಸಂಭ್ರಮಾಚಾರಣೆ ಮಾಡಿದ ಫೋಟೊವನ್ನು ಶೇರ್ ಮಾಡಿದ್ದಾರೆ. ಆದರೆ ಹಲವು ನೆಟ್ಟುಗರು ಶೋಯಿಬ್ ಅಖ್ತರ್ ಅವರ ಪೋಸ್ಟನ್ನು ಸೇವ್ ಮಾಡಿದ ಕಾರಣ ಎಲ್ಲ ಕಡೆ ವೈರಲ್ ಆಗುತ್ತಿದೆ.
ಶೋಯಿಬ್ ಅಖ್ತರ್ ಪೋಸ್ಟ್
ಭಾರತವನ್ನು ಬೆಂಬಲಿಸಿದ್ದ ಅಖ್ತರ್
ಏಷ್ಯಾ ಕಪ್ನಲ್ಲಿ ಭಾರತ ತಂಡದ ಬಗ್ಗೆ ಕೆಲ ನೆಟ್ಟಿಗರು ಕೇಳಿದ ಪ್ರಶ್ನೆಗೆ ಅಖ್ತರ್ ಅವರು ಖಾರವಾಗಿಯೇ ಉತ್ತರಿಸಿ ಭಾರತಕ್ಕೆ ಬೆಂಬಲ ಸೂಚಿಸಿದ್ದರು. ಭಾರತ ತಂಡ ಒಂದು ರೀತಿಯ ಫಿಕ್ಸಿಂಗ್ ನಡೆಸುತ್ತಿದೆ ಎಂದು ನೆಟ್ಟಿಗರೊಬ್ಬರು ಅಖ್ತರ್ಗೆ ಪ್ರಶ್ನೆಯನ್ನು ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಅಖ್ತರ್ ಅಸಂಬದ್ಧ ಹೇಳಿಕೆ ನೀಡಿದರೆ ಜಾಗ್ರತೆ ಎಂದು ಎಚ್ಚರಿಸಿದ್ದರು.
ಭಾರತದ ಎದುರು ಪಾಕಿಸ್ತಾನ ಗೆಲ್ಲಲಿಲ್ಲ ಎಂಬ ಮಾತ್ರಕ್ಕೆ ಈ ಕೀಳುಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇನ್ನು ಮಂದೆ ನೀಡಿದರೆ ಅಥವಾ ಇದಕ್ಕೆ ಸಂಬಂಧಿಸಿ ಮೀಮ್ಸ್ಗಳನ್ನು ಹರಿ ಬಿಟ್ಟರೆ ಹುಷಾರ್ ಎಂದು ಎಚ್ಚರಿಸಿದ್ದರು.
ವಿಶ್ವಕಪ್ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿ-ಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!. ಇದೀಗ ಎಂಟನೇ ಮುಖಾಮುಖಿಯಲ್ಲಿಯೂ ಅದರಲ್ಲೂ 7 ವರ್ಷಗಳ ಬಳಿಕ ತವರಿನಲ್ಲಿ ಮತ್ತೊಮ್ಮೆ ಸೋಲಿನ ಪಂಚ್ ನೀಡಲು ಭಾರತ ಸಜ್ಜಾಗಿದೆ.