Site icon Vistara News

Shoaib Akhtar : ಎಲ್ಲಿದ್ದಳು ಇಲ್ಲಿ ತನಕ; ಅಖ್ತರ್ ಪುತ್ರಿಯ ಚಿತ್ರ ನೋಡಿದ ನೆಟ್ಟಿಗರ ಅಚ್ಚರಿ!

shoaib Akthar

#image_title

ಕರಾಚಿ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಅವರು ಐಲೀನ್ ಶೇಖ್ ಎಂಬ ಹುಡುಗಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ. ರಾವಲ್ಪಿಂಡಿ ಎಕ್ಸ್​ಪ್ರೆಸ್​ ಖ್ಯಾತಿಯ ಅಖ್ತರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಪೋಸ್ಟ್​ ಮಾಡಿದ್ದು “ನನ್ನ ಮಗಳೊಂದಿಗೆ ಚಿಲ್ ಮೋಡ್” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಅದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ಇಷ್ಟು ದೊಡ್ಡ ಮಗಳು ನಿಮ್ಮದೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇಲ್ಲಿ ತನಕ ಎಲ್ಲಿದ್ದಳು ಎಂಬುದಾಗಿಯೂ ಕೇಳಿದ್ದಾರೆ.

ಶೋಯೆಬ್ ಅಖ್ತರ್ ಜುಲೈ 23, 2014ರಂದು ರುಬಾಬ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ಅಲ್ಲದೆ, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎನ್ನಲಾಗಿದೆ. ಆದರೆ, ಅಖ್ತರ್​ ಪೋಸ್ಟ್​ ಮಾಡಿರುವ ಫೋಟೊದಲ್ಲಿ ಹದಿ ಹರೆಯದ ಹುಡುಗಿಯಿದ್ದಾಳೆ. 2014ರಲ್ಲಿ ಮದುವೆಯಾಗಿರುವ ಅವರಿಗೆ ಅಷ್ಟೊಂದು ದೊಡ್ಡ ಮಗಳು ಹೇಗೆ ಹುಟ್ಟಿದಳು ಎಂಬುದೇ ನೆಟ್ಟಿಗರ ಪ್ರಶ್ನೆಯಾಗಿದೆ. ಇದು ನಿಮ್ಮದೇ ಮಗಳೇ ಅಥವಾ ಅಣ್ಣ, ತಮ್ಮಂದಿರ ಮಕ್ಕಳೇ ಎಂಬುದಾಗಿ ನೆಟ್ಟಿಗರು ಈ ವೇಳೆ ಪ್ರಸಿದ್ದಾರೆ.

ಶೋಯೆಬ್​ ಅಖ್ತರ್ ಅವರ ಮೊದಲ ಮಗ ಮೊಹಮ್ಮದ್ ಮಿಕೈಲ್​ ಅಲಿ 2016ರ ನವೆಂಬರ್ 7 ರಂದು ಜನಿಸಿದ್ದರೆ, ಎರಡನೇ ಮಗ ಜುಲೈ 14, 2019ರಂದು ಹುಟ್ಟಿದ್ದಾನೆ. ಇಲ್ಲಿಯವರೆಗೆ, ಶೋಯೆಬ್ ತಮಗೊಬ್ಬಳು ಮಗಳಿದ್ದಾಳೆ ಎಂದು ಎಲ್ಲಿಯೂ ಹೇಳಿಲ್ಲ. ಆದ್ದರಿಂದ, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿರುವ ಹುಡುಗಿ ಅಖ್ತರ್ ಅವರ ಜೈವಿಕ ಮಗಳು ಹೌದೋ ಅಲ್ಲವೋ ಎಂದು ಅಭಿಮಾನಿಗಳು ಆಶ್ಚರ್ಯಪಟ್ಟರು.

ಪಾಕಿಸ್ತಾನ ಪರ 163 ಏಕದಿನ ಪಂದ್ಯಗಳನ್ನಾಡಿರುವ ಶೋಯೆಬ್ ಅಖ್ತರ್ 24.97ರ ಸರಾಸರಿಯಲ್ಲಿ 247 ವಿಕೆಟ್ ಕಬಳಿಸಿದ್ದಾರೆ. ಅವರು 46 ಟೆಸ್ಟ್ ಪಂದ್ಯಗಳಲ್ಲಿ 25.69 ಸರಾಸರಿಯಲ್ಲಿ 178 ವಿಕೆಟ್​​ಗಳನ್ನು ಪಡೆದಿದ್ದಾರೆ. ಇದರಲ್ಲಿ 12 ಬಾರಿ ಐದು ವಿಕೆಟ್ ಸಾಧನೆಗಳು ಸೇರಿಕೊಂಡಿವೆ.

Exit mobile version