ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ನಟಿ ಸನಾ ಜಾವೇದ್ (Sana Javed) ಅವರೊಂದಿಗಿನ ವಿವಾಹವಾಗಿದ್ದಾರೆ. ಅದಕ್ಕಿಂತ ಮೊದಲು ಅವರು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನ ಘೋಷಿಸಿದ್ದರು. ಅವರ ಮದುವೆಯ ಸುದ್ದಿ ಪಾಕಿಸ್ತಾನ ಮತ್ತು ಭಾರತದಲ್ಲಿ ಚರ್ಚೆಗೆ ಕಾರಣವಾಯಿತು. ಈ ವಿಷಯದ ಬಗ್ಗೆ ಜನರು ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಶೋಯೆಬ್ ಮಲಿಕ್ ತಮ್ಮ ಹೊಸ ಪತ್ನಿಯೊಂದಿಗಿನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ತಕ್ಷಣ ವಿಚ್ಛೇದನದ ಸುದ್ದಿಯನ್ನು ಸಾನಿಯಾ ಮಿರ್ಜಾ ಕುಟುಂಬ ಪ್ರಕಟಿಸಿತ್ತು. ಸನಾ ಮದುವೆ ನಂತರ ಇದೀಗ ತಮ್ಮ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಆ ಚಿತ್ರಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಸನಾ ಜಾವೇದ್ ಅವರ ಪೋಸ್ಟ್ ಬಟ್ಟೆ ಬ್ರಾಂಡ್ ಒಂದರ ಜಾಹೀರಾತಾಗಿದೆ. ಆದರೆ ಸಾಮಾಜಿಕ ಜಾಲ ಬಳಕೆದಾರರು ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರಿಗೆ ಸಂಬಂಧಿಸಿದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶೋಯೆಬ್ ಮತ್ತು ಸಾನಿಯಾ ಜೀವನ ಹಾಳು ಮಾಡಿದವಳು ಎಂದೆಲ್ಲ ಬೈದಿದ್ದಾರೆ. ಕೆಲವರು ಮೊದಲ ಪತಿಯ ಜತೆಗಿದ್ದ ವೇಳೆಯೂ ಶೋಯೆಬ್ ಜತೆಗೆ ಸುತ್ತಾಡಿದ್ದನ್ನು ಕೆದಕಿ ಹೀಯಾಳಿಸಿದ್ದಾರೆ.
ಬರೇ ಮೋಸ; ಸಾನಿಯಾ ಕಣ್ತಪ್ಪಿಸಿ ಸನಾ ಜತೆ ಸುತ್ತಾಡುತ್ತಿದ್ದ ಶೋಯೆಬ್ ಮಲಿಕ್!
ಶೋಯೆಬ್ ಮಲಿಕ್ (Shoaib Malik) ಟಿವಿ ನಟಿ ಮತ್ತು ರೂಪದರ್ಶಿ ಸನಾ ಜಾವೇದ್ ಅವರನ್ನು ಮದುವೆಯಾಗಿ ಒಂದು ವಾರವಾಗಿದೆ. ಸಾನಿಯಾ ಮಿರ್ಜಾ ಡೈವೋರ್ಸ್ ತೆಗೆದುಕೊಂಡು ಆರಾಮವಾಗಿದ್ದಾರೆ. ಆದರೆ, ಸಾನಿಯಾ ಜತೆ ಇರುವಾಗಲೂ ಶೋಯೆಬ್ ಸಿಕ್ಕಾಪಟ್ಟೆ ಕಳ್ಳಾಟ ಆಡುತ್ತಿದ್ದ ಹಾಗೂ ಕಣ್ತಪ್ಪಿಸಿ ಸನಾ ಜತೆ ಸುತ್ತಾಡುತ್ತಿದ್ದ ಎಂಬುವ ಸುದ್ದಿ ಬಹಿರಂಗಗೊಂಡಿದೆ.
ಸಾನಿಯಾ ಮಿರ್ಜಾ ಜತಗೆ ಮದುವೆ ಸಂಬಂಧ ಇದ್ದರೂ ಮಲಿಕ್ ಮತ್ತು ಸನಾ ಕಳೆದ ಮೂರು ವರ್ಷಗಳಿಂದ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಸುದ್ದಿ ಚಾನೆಲ್ ಸಮಾ ಟಿವಿಯ ಪಾಡ್ಕಾಸ್ಟ್ ಇತ್ತೀಚೆಗೆ ಹೇಳಿಕೊಂಡಿದೆ. ಮಲಿಕ್ ಅವರನ್ನು ಮದುವೆಯಾದಾಗ ಸನಾ ತನ್ನ ಮಾಜಿ ಪತಿ ಉಮೈರ್ ಜಸ್ವಾಲ್ ಅವರಿಂದ ವಿಚ್ಛೇದನ ಪಡೆದು ಕೇವಲ ಮೂರು ತಿಂಗಳು ಆಗಿತ್ತು. ಆದಾಗ್ಯೂ ಅವರ ನಡುವಿನ ಕಳ್ಳಾಟ ಮೊದಲೇ ನಡಯುತ್ತಿತ್ತು ಎಂದು ಹೇಳಲಾಗಿದೆ.
ಜತೆಗೇ ಇರಬೇಕಿತ್ತು ಸನಾ
- ಚಾನೆಲ್ಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಮಲಿಕ್ ಅವರನ್ನು ಆಹ್ವಾನಿಸಿದಾಗಲೆಲ್ಲಾ, ಸನಾ ಅವರನ್ನು ಸಹ ಕರೆಯಬೇಕು ಎಂಬ ಷರತ್ತಿನ ಮೇಲೆ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದರು ಎಂದು ಪಾಡ್ಕಾಸ್ಟ್ ಹೇಳಿದೆ. ಅವರು ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪಾಡ್ಕಾಸ್ಟ್ ನಿರ್ಮಾಪಕರು ಹೇಳಿದ್ದಾರೆ.
- ಇದನ್ನೂ ಓದಿ : Shoaib Malik: ಮ್ಯಾಚ್ ಫಿಕ್ಸಿಂಗ್ ಮಾಡಿದರೇ ಶೋಯೆಬ್ ಮಲಿಕ್?; ತಂಡದ ಮಾಲೀಕನ ಸ್ಪಷ್ಟನೆ ಏನು?
ಸನಾ ಮಾಜಿ ಪತಿ ಉಮೈರ್ಗೆ ಈ ಬಗ್ಗೆ ತಿಳಿದಿರಲಿಲ್ಲ. ಆದರೆ ಸಾನಿಯಾ ಮಿರ್ಜಾ ಮತ್ತು ಅವರ ಕುಟುಂಬ ಮತ್ತು ಮಲಿಕ್ ಅವರ ಕುಟುಂಬವು ಕಳೆದ ವರ್ಷ ಈ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು ಎಂದು ಹೇಳಲಾಗಿದೆ.
ಪರಿಸ್ಥಿತಿಯನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ ಮಲಿಕ್ ಯಾರ ಮಾತನ್ನೂ ಕೇಳಲಿಲ್ಲ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಮಲಿಕ್ ಮತ್ತು ಸಾನಿಯಾ ಈಗ ಬೇರ್ಪಟ್ಟಿದ್ದಾರೆ ಎಂಬುದು ಶೊಯೆಬ್ ಅವರು ಸನಾ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡ ನಂತರವೇ ಬೆಳಕಿಗೆ ಬಂದಿದೆ.