Site icon Vistara News

ಸುಮಿತ್ ನಾಗಲ್, ರೈಬಾಕಿನಾಗೆ ಆಘಾತಕಾರಿ ಸೋಲು; ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟ ಬೋಪಣ್ಣ ಜೋಡಿ

elena rybakina australian open 2024

ಮೆಲ್ಬೊರ್ನ್​: ಆಸ್ಟ್ರೇಲಿಯನ್ ಓಪನ್ ಟೆನಿಸ್​ ಟೂರ್ನಿಯಲ್ಲಿ(Australian Open 2024) 11 ವರ್ಷಗಳ ಬಳಿಕ ದ್ವಿತೀಯ ಸುತ್ತು ಪ್ರವೇಶಿಸಿದ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದ ಸುಮಿತ್ ನಾಗಲ್(Sumit Nagal) 2ನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ನಗಾಲ್​ ಚೀನಾದ 18 ವರ್ಷದ ಆಟಗಾರ ಜುಂಚೆಂಗ್ ಶಾಂಗ್ ವಿರುದ್ಧ 6-2, 3-6, 5-7, 4-6 ಸೆಟ್‌ಗಳಿಂದ ಸೋತು ನಿರಾಸೆ ಮೂಡಿಸಿದ್ದಾರೆ. ಮೂರು ಅರ್ಹತಾ ಪಂದ್ಯಗಳಲ್ಲಿ ಮತ್ತು ಮೊದಲ ಸುತ್ತಿನಲ್ಲಿ ಒಂದೇ ಒಂದು ಸೆಟ್​ ಸೋಲು ಕಾಣದ ನಗಾಲ್ ದ್ವಿತೀಯ ಸುತ್ತಿನಲ್ಲಿ ಈ ಪ್ರದರ್ಶನವನ್ನು ತೋರ್ಪಡಿಸುವಲ್ಲಿ ವಿಫಲರಾದರು.

ಮೊದಲ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ನಂ. 27 ಅಲೆಕ್ಸಾಂಡರ್ ಬುಬ್ಲಿಕ್(Alexander Bublik) ಅವರನ್ನು ನಗಾಲ್​ 6-4, 6-2, 7-6 ರ ನೇರ ಸೆಟ್​ಗಳಿಂದ ಮಣಿಸಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದರು. ಅವರ ಈ ಪ್ರದರ್ಶನ ಕಂಡಾಗ ಕನಿಷ್ಠ ಕ್ವಾರ್ಟರ್​ ಫೈನಲ್​ ಪ್ರವೇಶ ಕಾಣುವು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ.

ಗೆಲುವು ಸಾಧಿಸಿದ ಬೋಪಣ್ಣ–ಎಬ್ಡೆನ್‌ ಜೋಡಿ 


ಪುರುಷರ ಡಬಲ್ಸ್​ನಲ್ಲಿ ಭಾರತದ ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್‌(Matthew Ebden) ಜೋಡಿ ಮೊದಲ ಸುತ್ತಿನಲ್ಲಿ ಗದ್ದು ದ್ವಿತೀಯ ಸುತ್ತಿಗ ಲಗ್ಗೆಯಿಟ್ಟಿದೆ. ಜಿದ್ದಾಜಿದ್ದಿನ ಪೈಪೋಟಿಯಿಂದ ನಡೆದ ಈ ಪಂದ್ಯದಲ್ಲಿ ಬೋಪಣ್ಣ–ಎಬ್ಡೆನ್‌ ಜೋಡಿ ಜೇಮ್ಸ್ ಡಕ್ವರ್ತ್ ಮತ್ತು ಮಾರ್ಕ್ ಪೋಲ್ಮನ್ಸ್ ವಿರುದ್ಧ 7-6 (5), 4-6, 7-6 (10-2) ಸೂಪರ್​ ಟ್ರೈ ಬ್ರೇಕರ್​ ಮೂಲಕ ಗೆಲುವು ತಮ್ಮದಾಗಿಸಿಕೊಂಡರು.


ಎಲೆನಾ ರೈಬಾಕಿನಾಗೆ ಆಘಾತಕಾರಿ ಸೋಲು


ಆಸ್ಟ್ರೇಲಿಯಾ ಓಪನ್​ನ ಗುರುವಾರದ ಮಹಿಳಾ ಸಿಂಗಲ್ಸ್​ನಲ್ಲಿ ಅಚ್ಚರಿಯ ಫಲಿತಾಂಶವೊಂದು ದಾಖಲಾಗಿದೆ. ಶ್ರೇಯಾಂಕ ರಹಿತ ರಷ್ಯಾದ ಅನ್ನಾ ಬ್ಲಿಂಕೋವಾ ಅವರು ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲಿ ಸಿಂಗಲ್ಸ್ ಪಂದ್ಯವೊಂದರಲ್ಲಿ ಸುದೀರ್ಘ ಟೈ ಬ್ರೇಕ್‌ನ ನಂತರ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಎಲೆನಾ ರೈಬಾಕಿನಾ ಅವರನ್ನು 6-4, 4-6, 7-6(20) ಮಣಿಸಿದ್ದಾರೆ.

ಬ್ಲಿಂಕೋವಾ ಅವು ಅಂತಿಮ ಸೆಟನ್ನು ಟ್ರೈ ಬ್ರೇಕರ್​ ಮೂಲಕ 22-20 ಅಂತರದಿಂದ ಗೆದ್ದರು. ಈ ಹೋರಾಟ 31 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆಯಿತು. ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಪ್ರಕಾರ, ಇದು 38 ಪಾಯಿಂಟ್‌ಗಳ ಹಿಂದಿನ ಸುದೀರ್ಘ ಟೈ-ಬ್ರೇಕ್ ಅನ್ನು ಮೀರಿಸಿದೆ.

Exit mobile version