Site icon Vistara News

Hardik Pandya-MS Dhoni: ಶೋಲೆ ಸಿನಿಮಾದ ಜೈ-ವೀರು ರೀತಿ ಪೋಸ್ ಕೊಟ್ಟ ಪಾಂಡ್ಯ-ಧೋನಿ ಫೋಟೊ ವೈರಲ್

Hardik Pandya posts

ರಾಂಚಿ: ಟೀಮ್​ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯ ಶುಕ್ರವಾರ ರಾಂಚಿಯಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳ ಆಟಗಾರರು ರಾಂಚಿಗೆ ತಲುಪಿದ್ದಾರೆ. ಇದೇ ವೇಳೆ ಭಾರತ ಟಿ20 ತಂಡದ ನಾಯಕ ಹಾರ್ದಿಕ್​ ಪಾಂಡ್ಯ(‘Sholay 2 coming soon’) ಅವರು ಎಂ.ಎಸ್​. ಧೋನಿ ಮನೆಗೆ ಭೇಟಿ ನೀಡಿ(Hardik Pandya- MS Dhoni), ಶೋಲೆ ಸಿನಿಮಾದ ಜೈ-ವೀರು ರೀತಿಯ ಫೋಟೊಗೆ ಪೋಸ್ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Photo).

ರಾಂಚಿಯಲ್ಲಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಮನೆಗೆ ಭೇಟಿ ನೀಡಿದ ಹಾರ್ದಿಕ್​ ಪಾಂಡ್ಯ ಅವರು ಧೋನಿ ಜತೆ ವಿಂಟೇಜ್​ ಕಾರು ಮತ್ತು ಬಲೆಟ್‌ನಲ್ಲಿ ಜತೆಯಾಗಿ ಕೂತಿರುವ ಫೋಟೊವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ | IND VS NZ: ಮೈದಾನದಲ್ಲೇ ಶಾರ್ದೂಲ್​ ಠಾಕೂರ್​ಗೆ ಕ್ಲಾಸ್​ ತೆಗೆದುಕೊಂಡ ರೋಹಿತ್​; ವಿಡಿಯೊ ವೈರಲ್​

ಬಾಲಿ​ವುಡ್​ನ ಶೋಲೆ(‘Sholay 2 coming soon’) ಸಿನಿಮಾದ ಅಪ್ರತಿಮ ಜೋಡಿಯಾದ ಜೈ ಮತ್ತು ವೀರು ಅವರ ರೀತಿಯಲ್ಲೇ ಧೋನಿ ಮತ್ತು ಪಾಂಡ್ಯ ಕೂಡ ಫೋಟೊಗೆ ಪೋಸ್ ನೀಡಿದ್ದಾರೆ. ಇದಕ್ಕೆ ‘ಶೋಲೆ-2 ಕಮಿಂಗ್​ ಸೂನ್’​ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ. ಶೋಲೆ ಸಿನಿಮಾದಲ್ಲಿ ಅಮಿತಾ ಬಚ್ಚನ್ ಮತ್ತು ಧರ್ಮೇಂದ್ರ ಅವರು ಜೈ ಮತ್ತು ವೀರು ಸ್ನೇಹಿತರ ಪಾತ್ರ ನಿರ್ವಹಿಸಿದ್ದರು. ಇದು ಭಾರೀ ಜನಪ್ರಿಯವಾಗಿತ್ತು. ಇದೀಗ ಪಾಂಡ್ಯ ಮತ್ತು ಧೋನಿ ಬುಲೆಟ್​ ಬೈಕ್​ನಲ್ಲಿ ಕೂತು ಇದೇ ರೀತಿ ಫೋಟೊಗೆ ಫೋಸ್​ ನೀಡಿದ್ದಾರೆ.

ಇದನ್ನೂ ಓದಿ | MS Dhoni | ಐಪಿಎಲ್​ಗೆ ಭರ್ಜರಿ ಅಭ್ಯಾಸ ಆರಂಭಿಸಿದ ಧೋನಿ; ವಿಡಿಯೊ ವೈರಲ್​

Exit mobile version