ಮುಂಬಯಿ: ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಇಶಾನ್ ಕಿಶನ್(Ishan Kishan-Shreyas Iyer) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಅವರನ್ನು ತಂಡದಿಂದ ಕಿತ್ತು ಹಾಕಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಬಿಸಿಸಿಐ ಮಾತು ಕೇಳದೆ ಅಶಿಸ್ತು ತೋರಿದ ಕಾರಣದಿಂದ ಉಭಯ ಆಟಗಾರರನ್ನು ಈ ಸರಣಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲೇ ಶ್ರೇಯಸ್ ಅಯ್ಯರ್ ಮುಂಬೈ ರಣಜಿ ತಂಡ ಸೇರಿದ್ದಾರೆ.
ಉಭಯ ಆಟಗಾರರು ಶಿಸ್ತು ಉಲ್ಲಂಘಿಸಿದ್ದಕ್ಕೆ ಬಿಸಿಸಿಐ ಇವರನ್ನು ತಂಡದಿಂದಲೇ ಕೈ ಬಿಡುವ ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಶಾನ್ ಕಿಶನ್ ಮಾನಸಿಕ ಆಯಾಸದ ಕಾರಣ ನೀಡಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ಅಂತಿಮ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಬಳಿಕ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ MS Dhoni: ಐಪಿಎಲ್ಗೆ ಅಭ್ಯಾಸ ಆರಂಭಿಸಿದ ಧೋನಿ; ವಿಡಿಯೊ ವೈರಲ್
ಶ್ರೇಯಸ್ ಅಯ್ಯರ್ ಅವರು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡ ಕಾರಣದಿಂದ ಅವರಿಗೆ ದೇಶೀ ಕ್ರಿಕೆಟ್ ಟೂರ್ನಿ ರಣಜಿ ಆಡುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಅಯ್ಯರ್ ಒಪ್ಪಿರಲಿಲ್ಲ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗು ಉಭಯ ಆಟಗಾರರನ್ನು ಕೂಡ ಬೇಕಂತಲೇ ಅಫಘಾನಿಸ್ತಾನ ಸರಣಿಯಿಂದ ಕೈಬಿಡಲಾಗಿತ್ತು. ತಪ್ಪಿನ ಅರಿವನ್ನು ಮನಗಂಡ ಅಯ್ಯರ್ ಇದೀಗ ಮುಂಬೈ ರಣಜಿ ತಂಡ ಸೇರಿದ್ದಾರೆ. ಇಶಾನ್ ಕಿಶನ್ ಕೂಡ ಅಯ್ಯರ್ ಹಾದಿಯೇ ಹಿಡಿಯುವ ಸಾಧ್ಯತೆ ಇದೆ. ಅಯ್ಯರ್ ಜನವರಿ 12 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದಾರೆ.
29 ವರ್ಷದ ಶ್ರೇಯಸ್ ಅಯ್ಯರ್ ಮುಂಬಯಿ ಪರ 2018ರಲ್ಲಿ ಕೊನೆಯ ಸಲ ರಣಜಿ ಪಂದ್ಯವಾಡಿದ್ದರು. ಶುಕ್ರವಾರದಿಂದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ “ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್’ನಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ಕಣಕ್ಕಿಳಿಯಲಿದ್ದಾರೆ.
ಮುಂಬಯಿ ತಂಡ
ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಜಾಯ್ ಬಿಷ್ಟಾ, ಭೂಪೆನ್ ಲಾಲ್ವಾನಿ, ಅಮೋಘ ಭಟ್ಕಳ್, ಸುವೇದ್ ಪಾರ್ಕರ್, ಪ್ರಸಾದ್ ಪವಾರ್, ಹಾರ್ದಿಕ್ ತಮೋರೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಥರ್ವ ಅಂಕೋಲೆಕರ್, ಮೋಹಿತ್ ಅವಸ್ಥಿ, ಧವಳ್ ಕುಲಕರ್ಣಿ, ರಾಯ್‌ಸ್ಟನ್ ಡಾಯಸ್, ಸಿಲ್ವೆಸ್ಟರ್ ಡಿ ಸೋಜ.
What do you all make of this power-packed T20I squad set to face Afghanistan? 😎#TeamIndia | #INDvAFG | @IDFCFIRSTBank pic.twitter.com/pY2cUPdpHy
— BCCI (@BCCI) January 7, 2024
ಅಫಘಾನಿಸ್ತಾನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.