Site icon Vistara News

Shreyas Iyer : ಸುಂದರ ಹುಡುಗಿಗೆ ಟಿಶರ್ಟ್​ ಕೊಟ್ಟ ಶ್ರೇಯಸ್ ಅಯ್ಯರ್​​

Shreyas Iyer

ಬೆಂಗಳೂರು : ಭಾರತದ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇತ್ತೀಚೆಗೆ ಮುಂಬೈ ಮತ್ತು ಆಂಧ್ರಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ಸುಂದರ ಅಭಿಮಾನಿಯೊಬ್ಬಳಿಗೆ ಸಹಿ ಹಾಕಿದ ಟಿಶರ್ಟ್​ ಕೊಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅವರ ಕ್ರಿಕೆಟ್​​ನ ಕೌಶಲದ ಜತೆಗೆ ಅವರ ಸ್ಟೈಲಿಶ್ ಮತ್ತು ಕ್ಲಾಸಿ ನೋಟಕ್ಕಾಗಿ ಹೆಚ್ಚಿನ ಜನರು ಇಷ್ಟಪಡುತ್ತಾರೆ. ಅಯ್ಯರ್ ಅವರ ನೃತ್ಯ ಕೌಶಲ್ಯಗಳು, ಅವರ ಫ್ಯಾಷನ್ ಪ್ರಜ್ಞೆಯೊಂದಿಗೆ, ದೇಶಾದ್ಯಂತದ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಯನ್ನು ಪಡೆದಿದೆ.

ಬ್ಯಾಟ್ಸ್ಮನ್ ಇತ್ತೀಚೆಗೆ ಆಂಧ್ರಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ಮುಂಬೈನಲ್ಲಿ ಅಭಿಮಾನಿಯೊಬ್ಬಳು ಭೇಟಿಯಾಗಿದ್ದರು. ಬ್ಯಾಟರ್ ಈ ಅಭಿಮಾನಿಗೆ ಪ್ರಶಂಸೆಗೆ ಪ್ರತಿಯಾಗಿ ಸಹಿ ಮಾಡಿದ ಭಾರತ ತಂಡದ ಜೆರ್ಸಿಯನ್ನು ಬಹುಮಾನವಾಗಿ ನೀಡಿದರು. ಅದೃಷ್ಟಶಾಲಿ ಅಭಿಮಾನಿಗೆ ಇದೊಂದು ಕನಸು ನನಸಾಗಿದೆ. ಶ್ರೇಯಸ್ ಅಯ್ಯರ್ ಅವರಂತಹ ಆಟಗಾರನಿಂದ ಸಹಿ ಮಾಡಿದ ಭಾರತೀಯ ಜರ್ಸಿಯನ್ನು ಸ್ವೀಕರಿಸುವುದು ಬಹುಶಃ ಕನಸಿನ ಸಂಗತಿಯಾಗಿದೆ.

ಇದನ್ನೂ ಓದಿ : Rohit Sharma : ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ರೋಹಿತ್ ಶರ್ಮಾ

ಹೆಚ್ಚಿದ ಸ್ಪರ್ಧೆ

ವೃತ್ತಿಪರ ರಂಗದಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಸಮಯ ಹೊಂದಿಲ್ಲ. ಪೂರ್ಣ ಸಮಯದ ಬ್ಯಾಟರ್​ಗೆ ತಂಡದಲ್ಲಿ ಅವಕಾಶವೇ ಸಿಗುತ್ತಿಲ್ಲ. ಅವರನ್ನು ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟಿ 20 ಸರಣಿಯಿಂದ ಹೊರಗಿಡಲಾಯಿತು. ಶ್ರೇಯಸ್ ಅಯ್ಯರ್ ಕ್ರಿಕೆಟ್ ಮಂಡಳಿಯಿಂದ ಒಂದು ರೀತಿಯ ಶಿಸ್ತು ಕ್ರಮವನ್ನು ಎದುರಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿ ಮೂಲಕ ಆ ಊಹಾಪೋಹಗಳನ್ನು ತಳ್ಳಿಹಾಕಿದರು.

ಧೋನಿಗೆ ಸಿಕ್ಕಿತು ರಾಮ ಮಂದಿರ ಉದ್ಘಾಟನೆಯ ಆಹ್ವಾನ

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ (Ram Mandir) ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸಲು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಆಹ್ವಾನ ದೊರಕಿದೆ. ಜನವರಿ 22ರಂದು ನಡೆಯಲಿರುವ ಈ ಉನ್ನತ ಮಟ್ಟದ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ರೀಡೆ, ಬಾಲಿವುಡ್ ಮತ್ತು ರಾಜಕೀಯದ ಹಲವಾರು ಪ್ರಮುಖ ಭಾರತೀಯ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂತೆಯೇ ಧೋನಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

ಭಾರತದ ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಆಹ್ವಾನ ಸಿಕ್ಕಿತ್ತು. ಅಂತೆಯೇ ಧೋನಿ ಜನವರಿ 15ರಂದು ಆಹ್ವಾನ ಸ್ವೀಕರಿಸಿದ್ದಾರೆ. ಎಂಎಸ್ ಧೋನಿ ಅವರೊಂದಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೊಂದಿಗೆ ಕಾಣಿಸಿಕೊಂಡರು.

ಎಂಎಸ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಋತುವಿನ ಮೂಲಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಭಾರತದ ಮಾಜಿ ವಿಕೆಟ್ ಕೀಪರ್​ ಬ್ಯಾಟರ್​ ಕಳೆದ ವರ್ಷ ಮೇ ತಿಂಗಳಲ್ಲಿ ಅಹಮದಾಬಾದ್​ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2023 ರ ಪಂದ್ಯಾವಳಿಯ ಫೈನಲ್​ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

Exit mobile version