Site icon Vistara News

IPL 2024: ಈ ಬಾರಿಯೂ ಕೆಕೆಆರ್​ಗೆ ಕೈಕೊಡಲಿದ್ದಾರೆ​ ಅಯ್ಯರ್; ಮತ್ತೆ ಕಾಣಿಸಿಕೊಂಡ ​ಬೆನ್ನು ನೋವು

Shreyas Iyer

ಮುಂಬಯಿ: ಪದೇಪದೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗುತ್ತಿರುವ ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್(Shreyas Iyer)​ ಅವರು ಈ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ರಣಜಿ ಫೈನಲ್​ ಆಡುತ್ತಿರುವ ಅವರು ಮತ್ತೆ ಬೆನ್ನು ನೋವಿನ(Shreyas Iyer back injury) ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವರ್ಷವೂ ಕೂಡ ಅಯ್ಯರ್​ ಅವರು ಬೆನ್ನು ನೋಚಿನ ಸಮಸ್ಯೆಯಿಂದಾಗಿ ಸಂಪೂರ್ಣವಾಗಿ ಐಪಿಎಲ್​ ಟೂರ್ನಿಯಿಂದ ಹೊರಗುಳಿದಿದ್ದರು. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಕೆಕೆಆರ್​ ತಂಡವನ್ನು ನಿತೇಶ್​ ರಾಣಾ(Nitish Rana) ಮುನ್ನಡೆಸಿದ್ದರು. ಕಳೆದ ಬಾರಿ ಆಡದಿದ್ದರೂ ಕೂಡ ಅಯ್ಯರ್​ ಅವರನ್ನು ಕೆಕೆಆರ್​ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿರಲಿಲ್ಲ. ಇದೀಗ ಈ ಬಾರಿಯೂ ಅವರು ಆಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ. ಒಂದೊಮ್ಮೆ ಅವರು ಈ ಬಾರಿಯೂ ತಂಡದ ಪರ ಆಡದಿದ್ದರೆ ಮುಂದಿನ ಆವೃತ್ತಿಗೆ ಅವರನ್ನು ತಂಡದಿಂದ ಕೈ ಬಿಡುವುದು ಖಚಿತ. ಅಲ್ಲದೆ ಅಯ್ಯರ್​ ಹಿಂದಿನ ಬ್ಯಾಟಿಂಗ್​ ಫಾರ್ಮ್​ ಕೂಡ ಕಳೆದುಕೊಂಡಿದ್ದಾರೆ.

2023 ರಲ್ಲಿ ಅಯ್ಯರ್​ ಅವರು ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸರಿ ಸುಮಾರು 6 ತಿಂಗಳಿನಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಅವರು ಏಷ್ಯಾಕಪ್​ ಟೂರ್ನಿಯಲ್ಲಿ ಕಮ್​ಬ್ಯಾಕ್​ ಮಾಡಿದ್ದರು. ಜತೆಗೆ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಆಡಿದ್ದರು. ಒಂದೆರಡು ಪಂದ್ಯಗಳಲ್ಲಿ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಸಂಪೂರ್ಣ ವ್ಯಾಟಿಂಗ್​ ವೈಫಲ್ಯ ಕಂಡಿದ್ದರು.

ಇದನ್ನೂ ಓದಿ IPL 2024: ಐಪಿಎಲ್ ಚರಿತ್ರೆಯ ಬಹುದೊಡ್ಡ 5 ವಿವಾದಗಳು ಯಾವುದು?

ಬ್ಯಾಟಿಂಗ್​ ಫಾರ್ಮ್ ಕಂಡುಕೊಳ್ಳಲು ರಣಜಿ ಆಡುವಂತೆ ಕೋಚ್​ ಮತ್ತು ಆಯ್ಕೆ ಸಮಿತಿ ಸಲಹೆ ನೀಡಿದ್ದರೂ ಇದನ್ನು ಆರಂಭದಲ್ಲಿ ಅಯ್ಯರ್​ ಕಡೆಗಣಿ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೇ ಕಾರಣಕ್ಕೆ ಅವರನ್ನು ಕೇಂದ್ರಿಯ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿತ್ತು. ಈ ಎಲ್ಲ ವಿದ್ಯಾಮನ ಸಂಭವಿಸಿದ ಬಳಿಕ ಅವರು ರಣಜಿ ಆಡಲು ಮುಂದಾಗಿದ್ದರು. ಪ್ರಸ್ತುತ ನಡೆಯುತ್ತಿರುವ ವಿದರ್ಭ ಎದುರಿನ ಫೈನಲ್ ಪಂದ್ಯದಲ್ಲಿ ಮುಂಬೈ ಪರ ದ್ವಿತೀಯ ಇನಿಂಗ್ಸ್​ನಲ್ಲಿ 95 ರನ್​ ಬಾರಿಸಿದ್ದರು. ಇದೇ ವೇಳೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದಾರೆ.

ಬುಧವಾರದ ಆಟದಲ್ಲಿ ಮುಂಬೈ ಪರ ಅಯ್ಯರ್​ ಫೀಲ್ಡಿಂಗ್​ ನಡೆಸಲು ಮೈದಾನಕ್ಕೆ ಇಳಿಯಲಿಲ್ಲ. ಇದನ್ನು ನೋಡುವಾಗ ಅವರು ಐಪಿಎಲ್​ನ ಆರಂಭಿಕ ಹಂತದ ಪಂದ್ಯಗಳಿಗೆ ಅಲಭ್ಯರಾಗುವಂತೆ ಕಾಣುತ್ತಿದೆ. ಐಪಿಎಲ್​ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಮಾರ್ಚ್​ 22ರಿಂದ ಟೂರ್ನಿಗೆ ಚಾಲನೆ ಸಿಗಲಿದೆ. ಕೆಕೆಆರ್​ ಮಾರ್ಚ್ 23 ರಂದು ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Exit mobile version