Site icon Vistara News

Rahul Dravid: ಅಯ್ಯರ್​,ಇಶಾನ್​ ಅಶಿಸ್ತು ವಿಚಾರದಲ್ಲಿ ಸ್ಪಷ್ಟನೆ ನೀಡಿದ ಕೋಚ್​​ ದ್ರಾವಿಡ್

Rahul Dravid sports a beanie at his press conference

ಮೊಹಾಲಿ: ಬಿಸಿಸಿಐ ಮಾತು ಕೇಳದೆ ಅಶಿಸ್ತು ತೋರಿದ ಕಾರಣದಿಂದ ಇಶಾನ್ ಕಿಶನ್(Ishan Kishan-Shreyas Iyer) ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಕೈಬಿಡಲಾಗಿದೆ ಎಂಬ ಸುದ್ದಿ ಎಲ್ಲಡೆ ಬಾರಿ ಸುದ್ದು ಮಾಡಿತ್ತು. ಇದೇ ವಿಚಾರವಾಗಿ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಅಫಫಾನಿಸ್ತಾನ ಎದುರಿನ ಸರಣಿ ಆರಂಭಕ್ಕೂ ಮುನ್ನ ಗುರುವಾರ ಮೊಹಾಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ದ್ರಾವಿಡ್, ಮೊದಲ ಟಿ20 ಪಂದ್ಯಕ್ಕೆ ತಂಡದ ಸಿದ್ಧತೆ ಮತ್ತು ಆಟಗಾರರ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು. ಇದೇ ವೇಳೆ ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ ವಿಚಾರದಲ್ಲಿ ಹರಿದಾಡುತ್ತಿರುವ ಅಶಿಸ್ತು ಶಿಕ್ಷೆಯ ಬಗ್ಗೆಯೂ ಸ್ಪಷ್ಟನೆ ನೀಡಿ, ಉಭಯ ಆಟಗಾರರು ಯಾವುದೇ ಅಶಿಸ್ತು ತೋರಿಲ್ಲ, ಅವರ ವಿರುದ್ಧ ಬಿಸಿಸಿಐ ಯಾವುದೇ ಕ್ರಮ ಕೂಡ ಕೈಗೊಂಡಿಲ್ಲ. ಇದು ಸತ್ಯಕ್ಕೆ ದೂರವಾದ ಸುದ್ದಿ. ಸುಳ್ಳು ಸುದ್ದಿ ಬಗ್ಗೆ ಯಾರು ಕಿವಿಗೊಡಬೇಡಿ ಮತ್ತು ನಂಬಬೇಡಿ ಎಂದು ಹೇಳಿದ್ದಾರೆ.

ಇಶಾನ್​ ಕಿಶನ್​ ಅವರು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್​ ಸರಣಿಯ ವೇಳೆಯೆ ವಿಶ್ರಾಂತಿ ಬಯಸಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಜತೆಗೆ ಅವರು ಅಫಘಾನಿಸ್ತಾನ ಸರಣಿಗೂ ಲಭ್ಯರಿಲ್ಲ ಎಂದು ಮೊದಲೇ ಖಚಿತಪಡಿಸಿದ್ದರು. ಹೀಗಾಗಿ ಅವರು ಈ ಸರಣಿಯ ಭಾಗವಾಗಿಲ್ಲ. ಇನ್ನು ಅಯ್ಯರ್​ ವಿಚಾರಕ್ಕೆ ಬಂದರೆ ತಂಡದಲ್ಲಿ ಈಗಾಗಲೇ ಹಲವು ಯುವ ಬ್ಯಾಟರ್​ಗಳಿದ್ದಾರೆ. ಜತೆಗೆ ಎಲ್ಲರೂ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅಯ್ಯರ್​ ಕೆಲ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿಲ್ಲ ಇದೇ ಕಾರಣದಿಂದ ಅವರು ಆಫ್ಘನ್​ ಸರಣಿಗ ಆಯ್ಕೆಯಾಗಿಲ್ಲ ಎಂದು ಹೇಳುವ ಮೂಲಕ ಅಯ್ಯರ್​ ಮತ್ತು ಇಶಾನ್ ವಿಚಾರದಲ್ಲಿ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ದ್ರಾವಿಡ್ ತೆರೆ ಎಳೆದಿದ್ದಾರೆ.

ಇದನ್ನೂ ಓದಿ Virat Kohli: ಮೊದಲ ಟಿ20 ಪಂದ್ಯಕ್ಕೆ ಕೊಹ್ಲಿ ಅಲಭ್ಯ; ಖಚಿತಪಡಿಸಿದ ಕೋಚ್​


ಇದೇ ವೇಳೆ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೆ ತಂಡವನ್ನು ಸಿದ್ಧಪಡಿಸುವ ಕಾರ್ಯ ಆರಂಭವಾಗಿದ್ದು ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ದ್ರಾವಿಡ್​ ಎಲ್ಲ ಆಟಗಾರರಿಗೂ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಅಫಘಾನಿಸ್ತಾನ ಟಿ20 ಸರಣಿಯಲ್ಲಿ ಅವಕಾಶ ಸಿಗದ ಅಯ್ಯರ್​ ಮುಂಬೈ ರಣಜಿ ತಂಡ ಸೇರಿದ್ದಾರೆ. ಶುಕ್ರವಾರದಿಂದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ “ಶರದ್‌ ಪವಾರ್‌ ಕ್ರಿಕೆಟ್‌ ಅಕಾಡೆಮಿ ಗ್ರೌಂಡ್‌’ನಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಯ್ಯರ್​ ಕಣಕ್ಕಿಳಿಯಲಿದ್ದಾರೆ.

Exit mobile version