Site icon Vistara News

IND vs AUS: ಆಸೀಸ್​ ವಿರುದ್ಧದ ಅಂತಿಮ ಪಂದ್ಯಕ್ಕೆ ಶುಭಮನ್​ ಗಿಲ್,ಶಾರ್ದೂಲ್ ಅಲಭ್ಯ

shubman gill

ಬೆಂಗಳೂರು: ಆಡಿದ ಪ್ರತಿ ಪಂದ್ಯದಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆದು ಮುನ್ನುಗ್ಗುತ್ತಿರುವ ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಮತ್ತು ಆಲ್​ರೌಂಡರ್​ ಶಾರ್ದೂಲ್​ ಠಾಕೂರ್(Shardul Thakur)​ ಅವರಿಗೆ, ಆಸೀಸ್​ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ(IND vs AUS) ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಭಾರತ ತಂಡ ಸರಣಿಯನ್ನು ವಶಪಡಿಸಿಕೊಂಡಿರುವ ಕಾರಣ ಬುಧವಾರ ನಡೆಯುವ ಪಂದ್ಯ ಅಷ್ಟಾಗಿ ಮಹತ್ವ ಪಡೆದಿಲ್ಲ. ವಿಶ್ವಕಪ್​ಗೆ(ODI world cup) ಇನ್ನೊಂದು ವಾರ ಇರುವ ಕಾರಣ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಭಾನುವಾರ ಇಂದೋರ್​ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಶುಭಮನ್​ ಗಿಲ್​ ಅವರು ಶತಕ ಬಾರಿಸುವ ಮೂಲಕ ಹಲವು ದಾಖಲೆ ಬರೆದಿದ್ದರು. ವಿಶ್ವಕಪ್​ನಲ್ಲಿಯೂ ಅವರ ಈ ಪ್ರಚಂಡ ಬ್ಯಾಟಿಂಗ್​ ಮುಂದುವರಿದರೆ ಭಾರತ ಕಪ್​ ಗೆಲ್ಲುವುದು ಖಚಿತ. ಸತತ ಸರಣಿಯನ್ನು ಆಡಿ ಬಳಲಿರುವ ಕಾರಣ ಅವರಿಗೆ ಬಿಸಿಸಿಐ ಆಸೀಸ್​ ವಿರುದ್ಧದ ಅಂತಿಮ ಪಂದ್ಯಕ್ಕೆ ವಿಶ್ರಾಂತಿ ನೀಡಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್ ತನ್ನ ವರದಿಯಲ್ಲಿ ತಿಳಿಸಿದೆ.

ರೋಹಿತ್​-ವಿರಾಟ್​ ಆಗಮನ

ವಿಶ್ವಕಪ್​ ಟೂರ್ನಿಯ ಹಿನ್ನಲೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ತಂಡದ ಖಾಯಂ ನಾಯಕ ರೋಹಿತ್​ ಶರ್ಮ ಮತ್ತು ಅನುಭವಿ ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಹಾಗೂ ಉಪನಾಯಕ ಹಾರ್ದಿಕ್​ ಪಾಂಡ್ಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಗಾಯಕ್ವಾಡ್​, ಸೂರ್ಯಕುಮಾರ್, ಆರ್​ ಅಶ್ವಿನ್​ ಅಂತಿಮ ಪಂದ್ಯದಿಂದ ಹೊರಗುಳಿಯುವ ಸಾ​ಧ್ಯತೆ ಇದೆ.

ಇದನ್ನೂ ಓದಿ IND vs AUS: ಸೂರ್ಯಕುಮಾರ್ ತೂಫಾನ್‌ ಬ್ಯಾಟಿಂಗ್​ಗೆ ವಿರಾಟ್​ ಕೊಹ್ಲಿ ದಾಖಲೆ ಉಡೀಸ್​​

ಆಲ್​ ರೌಂಡರ್​ ಶಾರ್ದೂಲ್​ ಠಾಕೂರ್​ ಅವರಿಗೂ ಅಂತಿಮ ಏಕದಿನ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಎಂಸದು ವರದಿಯಾಗಿದೆ. ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ಅವರು ಏಷ್ಯಾಕಪ್​ ಸೇರಿ ಆಸೀಸ್​ ವಿರುದ್ಧದ ಎರಡು ಪಂದ್ಯಗಳಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಬೌಲಿಂಗ್​, ಬ್ಯಾಟಿಂಗ್ ಜತೆಗೆ ಫೀಲ್ಡಿಂಗ್​ನಲ್ಲಿಯೂ ತೀರಾ ಕಳಪೆ ಮಟ್ಟದ ಪ್ರದರ್ಶನ ತೋರಿದ್ದರು. ಹೀಗಾಗಿ ವಿಶ್ವಕಪ್​ ತಂಡದ ಆಡುವ ಬಳಗದಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ ಎನ್ನುವಂತಿದೆ.

3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆಲುವು

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ ತವರಿನಲ್ಲಿ ಏಕದಿನ ಸರಣಿ ಗೆದ್ದದ್ದು 2020ರಲ್ಲಿ. ಅದು ಮೂರು ಪಂದ್ಯಗಳ ಸರಣಿಯಾಗಿತ್ತು. ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು. ಇದೀಗ 3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆದ್ದ ಸಾಧನೆ ಮಾಡಿದೆ. ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದ್ದು ಅಂತಿಮ ಪಂದ್ಯ ಬುಧವಾರ ರಾಜ್​ಕೋಟ್​ನಲ್ಲಿ ನಡೆಯಲಿದೆ. ಇದನ್ನೂ ಗೆದ್ದರೆ ಕ್ಲೀನ್​ಸ್ವೀಪ್​ ಸಾಧನೆ ಮಾಡಲಿದೆ.

ಸಚಿನ್​,ಕೊಹ್ಲಿ ಜತೆ ಎಲೈಟ್​ ಪಟ್ಟಿಗೆ ಸೇರಿದ ಗಿಲ್

ಶುಭಮನ್​ ಗಿಲ್(Shubman Gill)​ ಅವರು ಈ ಶತಕ ಬಾರಿಸುವ ಕ್ಯಾಲೆಂಡರ್​ ವರ್ಷವೊಂದರಲ್ಲಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಆಟಗಾರರಾದ ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿ ಅವರ ಜತೆ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು. ಕ್ಯಾಲೆಂಡರ್​ ವರ್ಷವೊಂದರಲ್ಲಿ ಅತಿ ಹೆಚ್ಚು 5 ಶತಕ ಬಾರಿಸಿ ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ ಕೊಹ್ಲಿ ಒಟ್ಟು (2012, 2017, 2018, 2019) ನಾಲ್ಕು ಬಾರಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್​ (1996, 1998)​ ಅವರು 2 ಬಾರಿ, ಭಾರತ ತಂಡದ ನಾಯಕ ರೋಹಿತ್​ ಶರ್ಮ(2017, 2018, 2019) ಅವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

Exit mobile version