Site icon Vistara News

BCCI Awards: ಗಿಲ್​ಗೆ ವರ್ಷದ ಕ್ರಿಕೆಟಿಗ,ರವಿಶಾಸ್ತ್ರಿಗೆ ಜೀವಮಾನ ಸಾಧನೆ ಪ್ರಶಸ್ತಿ

shubman gill-Ravi Shastri

ನವದೆಹಲಿ: ಭಾರತದ ಮಾಜಿ ಆಲ್‌ರೌಂಡರ್ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ(Ravi Shastri) ಅವರಿಗೆ ಬಿಸಿಸಿಐ(BCCI) ಜೀವಮಾನ ಸಾಧನೆ ಪ್ರಶಸ್ತಿಯನ್ನು(BCCI Awards) ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಜತೆಗೆ ಯುವ ಆಟಗಾರ ಶುಭಮನ್ ಗಿಲ್(Shubman Gill) ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶುಭಮನ್​ ಗಿಲ್​ ಕೇವಲ ಒಂದು ವರ್ಷದಲ್ಲಿ ಏಕದಿನ ಕ್ರಿಕೆಟ್​ನಲ್ಲಿ 2000 ರನ್‌ಗಳ ಗಡಿಯನ್ನು ವೇಗವಾಗಿ ದಾಟಿದ ಮತ್ತು ಈ ಸ್ವರೂಪದಲ್ಲಿ ಐದು ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಪರಿಗಣಿಸಿ ಬಿಸಿಸಿಐ ಗಿಲ್​ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಲು ನಿರ್ಧರಿಸಿದೆ.

2019ರ ಬಳಿಕ ಮೊದಲ ಬಾರಿಗೆ ಬಿಸಿಸಿಐ ಈ ಪ್ರಶಸ್ತಿಗಳನ್ನು ನೀಡಿತ್ತಿದೆ. ಮಂಗಳವಾರ ಹೈದರಾಬಾದ್​ನಲ್ಲಿ ಈ ಪ್ರಶಸ್ತಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಭಾರತ ಮತ್ತು ಇಂಗ್ಲೆಂಡ್​ ಆಟಗಾರರು ಗುರುವಾರದಿಂದ ಆರಂಭಗೊಳ್ಳಲಿರುವ ಟೆಸ್ಟ್​ ಪಂದ್ಯವನ್ನಾಡಲು ಹೈದರಾಬಾದ್​ನಲ್ಲಿದೆ. ಹೀಗಾಗಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

61 ವರ್ಷದ ಶಾಸ್ತ್ರಿ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಿವೃತ್ತಿಯ ನಂತರ ಕಾಮೆಂಟ್ರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಭಾರತ ರಾಷ್ಟ್ರೀಯ ತಂಡಕ್ಕಾಗಿ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದಾರೆ. ಮೊದಲು 2014 ರಿಂದ 2016 ರವರೆಗೆ ತಂಡದ ನಿರ್ದೇಶಕರಾಗಿ ಬಳಿಕ 2021ರ ಟಿ20 ವಿಶ್ವಕಪ್ ತನಕ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಕೋಚಿಂಗ್​ ಅವಧಿಯಲ್ಲೇ ಭಾರತ 2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿತ್ತು.

2019ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಶುಭಮನ್​ ಗಿಲ್​ ಅವರು ಭಾರತ ಪರ ಇದುವರೆಗೆ 44 ಏಕದಿನ ಪಂದ್ಯಗಳನ್ನಾಡಿ 2271* ರನ್​ ಬಾರಿಸಿದ್ದಾರೆ. 6 ಶತಕ ಮತ್ತು 13 ಅರ್ಧಶತಕ ಹಾಹೂ ಒಂದು ದ್ವಿಶತಕ ಕೂಡ ಬಾರಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 20 ಪಂದ್ಯ ಆಡಿ 1040* ರನ್​ ಕಲೆ ಹಾಕಿದ್ದಾರೆ. 2 ಶತಕ ಮತ್ತು 4 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 14 ಪಂದ್ಯಾವಳಿ 335* ರನ್​ ಬಾರಿಸಿದ್ದಾರೆ.

Exit mobile version