Site icon Vistara News

Shubman Gill: ಪಾಕ್​ ನಾಯಕ ಬಾಬರ್ ಅಜಂ ವಿಶ್ವ ದಾಖಲೆ ಪುಡಿಗಟ್ಟಿದ ಶುಭಮನ್​ ಗಿಲ್​

Indian cricketer Shubman Gill

ಬಾರ್ಬಡಾಸ್​: ವೆಸ್ಟ್​ ಇಂಡೀಸ್​ ವಿರುದ್ಧದ ದ್ವಿತೀಯ ಏಕದಿನ(West Indies vs India, 2nd ODI) ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ಗಳ ಸೋಲು ಕಂಡರೂ ಶುಭಮನ್​ ಗಿಲ್(Shubman Gill)​ ಅವರು ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರ ವಿಶ್ವದಾಖಲೆಯೊಂದನ್ನು(Shubman Gill World Record) ಪುಡಿಗಟ್ಟಿದ್ದಾರೆ.

ಬ್ರಿಡ್ಜ್ ಟೌನ್​ನ ಕೆನ್ನಿಂಗ್ಸ್ಟನ್ ಓವಲ್​ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 181 ರನ್​ಗೆ ಸರ್ವಪತನ ಕಂಡಿತು. ಜವಾಬಿತ್ತ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್ ಕಳೆದುಕೊಂಡು 182 ರನ್​ ಬಾರಿಸಿ ಗೆಲುವು ದಾಖಲಿಸಿತು. ಜತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಪರ ಶುಭಮನ್​ ಗಿಲ್​ ಅವರು 34 ರನ್​ ಗಳಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್​ನಲ್ಲಿ ಪಾಕ್​ ತಂಡದ ನಾಯಕ ಬಾಬರ್​ ಅಜಂ ನಿರ್ಮಿಸಿದ್ದ ವಿಶ್ವ ದಾಖಲೆಯೊಂದನ್ನು ಮುರಿದರು. ಅತಿ ಕಡಿಮೆ ಇನಿಂಗ್ಸ್​ನಲ್ಲಿ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಗಿಲ್​ ಪಾತ್ರರಾಗಿದ್ದಾರೆ. 26 ಇನಿಂಗ್ಸ್​ನಲ್ಲಿ ಗಿಲ್​ 1352* ರನ್​ ಬಾರಿಸಿದರೆ, ಬಾಬರ್​ ಅವರು 26 ಇನಿಂಗ್ಸ್​ನಲ್ಲಿ 1322 ರನ್​ ಬಾರಿಸಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಗಿಲ್​ ಇದನ್ನು ಮುರಿದಿದ್ದಾರೆ.

ಇದನ್ನೂ ಓದಿ IND vs WI: ಭಾರತಕ್ಕೆ 6 ವಿಕೆಟ್​ ಸೋಲು; ಸರಣಿಯಲ್ಲಿ ಹಿಡಿತ ಸಾಧಿಸಿದ ವಿಂಡೀಸ್​

ಈಗಾಗಲೇ ಶುಭಮನ್​ ಗಿಲ್​ ಅವರು 26 ಪಂದ್ಯಗಳನ್ನು ಆಡಿ 4 ಶತಕ 1 ದ್ವಿಶತಕ ಮತ್ತು 5 ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಸಾಧನೆಯೊಂದಿಗೆ ಭಾರತದ ಭವಿಷ್ಯದ ವಿರಾಟ್​ ಕೊಹ್ಲಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿಯೂ ಗಿಲ್​ ಅವರು ಅತ್ಯಧಿಕ ಮೊತ್ತ ಪರಿಸಿದ ಆಟಗಾರನಾಗಿ ಮೂಡಿಬಂದಿದ್ದರು. 23 ವರ್ಷದ ಗಿಲ್​ ಅಕ್ಟೋಬರ್​ 5 ರಿಂದ ಆರಂಭವಾಗುವ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಸೋಲು ಕಂಡ ಭಾರತ

ವಿಂಡೀಸ್​ ವಿರುದ್ಧ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಇಶಾನ್ ಕಿಶನ್ (55) ಮತ್ತು ಶುಭಮನ್ ಗಿಲ್(34) ಸೇರಿಕೊಂಡು ಮೊದಲ ವಿಕೆಟ್​ಗೆ 90 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಉತ್ತಮ ಸ್ಥಿತಿಯಲ್ಲಿದ್ದ ಭಾರತ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ದಿಢೀರ್​ ಕುಸಿತ ಕಂಡಿತು. ಸಂಜು ಸ್ಯಾಮ್ಸನ್​ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 9 ರನ್​ಗೆ ಆಟ ಮುಗಿಸಿದರು. ಇದರ ಬೆನ್ನಗೆ ಅಕ್ಷರ್ ಪಟೇಲ್ 1, ನಾಯಕ ಹಾರ್ದಿಕ್ ಪಾಂಡ್ಯ 7 ರನ್ ಗಳಿಗೆ ನಿರ್ಗಮಿಸಿ ಒಂದಂಕಿ ದಾಟಲು ವಿಫಲವಾದ ಕಾರಣ ಪಂದ್ಯದಲ್ಲಿ ಸೋಲು ಕಂಡರು.

Exit mobile version