ಇಂದೋರ್: ಟೀಮ್ ಇಂಡಿಯಾದ ನ್ಯೂ ಬ್ಯಾಟಿಂಗ್ ಸೆನ್ಸೇಷನಲ್ ಶುಭಮನ್ ಗಿಲ್ ಆಡಿದ ಪ್ರತಿ ಪಂದ್ಯದಲ್ಲಿಯೂ ದಾಖಲೆಗಳನ್ನು ನಿರ್ಮಿಸುತ್ತ ಮುನ್ನುಗುತ್ತಿದ್ದಾರೆ. ಇದೀಗ ಕಿವೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತನ್ನದೇ ದೇಶದ ಕ್ರಿಕೆಟಿಗ ಶಿಖರ್ ಧವನ್ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.
ಇಂದೋರ್ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್(112) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದರು. ಇದೇ ವೇಳೆ ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಕಡಿಮೆ ಇನಿಂಗ್ಸ್ನಲ್ಲಿ 4 ಶತಕ ಬಾರಿಸಿದ ವಿಶ್ವದ ನಾಲ್ಕನೇ ಮತ್ತು ಭಾರತದ ಮೊದಲ ಆಟಗಾರನಾಗಿ ಮೂಡಿಬಂದರು.
ಭಾರತ ಪರ ಎಡಗೈ ಆಟಗಾರ ಶಿಖರ್ ಧವನ್ ಈ ಹಿಂದೆ ಕೇವಲ 24 ಇನಿಂಗ್ಸ್ಗಳಲ್ಲಿ 4 ಏಕದಿನ ಶತಕ ಸಿಡಿಸಿ ಭಾರತದ ಪರ ವೇಗಿವಾಗಿ ಅತಿ ಹೆಚ್ಚು ಶತಕ ಸಿಡಿಸಿದ್ದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಇದೀಗ ಗಿಲ್ 21 ಇನಿಂಗ್ಸ್ ಮೂಲಕ 4 ಶತಕ ಬಾರಿಸಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಾಧನೆ ಮಾಡಿದ ವಿಶ್ವದ ಆಟಗಾರರ ಯಾದಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಮೊದಲ ಸ್ಥಾನದಲ್ಲಿದ್ದಾರೆ. ಇಮಾಮ್ ಉಲ್ ಹಕ್ ಕೇವಲ 9 ಇನಿಂಗ್ಸ್ನಲ್ಲಿ 4 ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಕಾಣಿಸಿಕೊಂಡಿದ್ದಾರೆ. ಡಿ ಕಾಕ್ 16 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಗಿಲ್ 4ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ | IND VS NZ: ಏಕದಿನ ಸರಣಿಯಲ್ಲಿ ನೂತನ ದಾಖಲೆ ಬರೆದ ಶುಭಮನ್ ಗಿಲ್