Site icon Vistara News

Sara Ali Khan | ಬಾಲಿವುಡ್‌ ನಟಿ ಸಾರಾ ಜತೆ ಡೇಟಿಂಗ್ ; ಶುಬ್ಮನ್‌ ಗಿಲ್ ಕೊಟ್ಟ ಉತ್ತರ ಹೀಗಿದೆ

sara ali khan

ಮುಂಬಯಿ : ಭಾರತ ತಂಡದ ಆರಂಭಿಕ ಬ್ಯಾಟರ್‌ ಶುಬ್ಮನ್‌ ಗಿಲ್‌ ಹಾಗೂ ಬಾಲಿವುಡ್‌ ತಾರೆ ಸಾರಾ ಅಲಿ ಖಾನ್‌ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಸುಂದರ ಕ್ರಿಕೆಟಿಗ ಹಾಗೂ ಸುಂದರಿ ಸಾರಾ ನಡುವೆ ಏನೋ ನಡೀತಿದೆ ಎಂಬುದು ಚರ್ಚೆಯ ವಿಷಯ. ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಹಾಗೂ ಸ್ವತಃ ಶುಬ್ಮನ್‌ ಗಿಲ್‌ ಕೂಡ ಅದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿಲ್ಲ. ಹೌದು ಮತ್ತು ಅಲ್ಲ ಎಂದು ಉತ್ತರ ನೀಡುವ ಮೂಲಕ ಜನರ ಕೌತುಕ ಹೆಚ್ಚಿಸುತ್ತಿದ್ದಾರೆ.

ದಿಲ್‌ ದಿಯಾ ಗಲ್ಲಾನ್‌ ಎಂಬ ಪಂಜಾಬ್‌ನ ಟಾಕ್‌ ಶೋ ಒಂದರಲ್ಲಿ ಶುಬ್ಮನ್‌ ಗಿಲ್‌ ಇತ್ತೀಚೆಗೆ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಶೋ ಹೋಸ್ಟ್‌, ನಿಮ್ಮ ಪ್ರಕಾರ ಅತ್ಯಂತ ಫಿಟ್‌ ಆಗಿರುವ ಬಾಲಿವುಡ್‌ ನಟಿ ಯಾರು ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಶುಬ್ಮನ್ ಗಿಲ್‌ ಅವರು ಸಾರಾ ಅಲಿಖಾನ್‌ ಎಂದು ಉತ್ತರ ನೀಡುತ್ತಾರೆ. ಈ ವೇಳೆ ಅವರಿಗೆ ನೀವು ಅವರ ಜತೆ ಡೇಟಿಂಗ್ ನಡೆಸುತ್ತಿದ್ದೀರಾ ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಶುಬ್ಮನ್‌ ಗಿಲ್, “ಇರಬಹುದು ಮತ್ತು ಇಲ್ಲ’ ಎಂದು ಉತ್ತರ ಕೊಡುತ್ತಾರೆ. ಆಗ ಸತ್ಯವನ್ನೇ ಹೇಳಿ ಎಂದು ಶೋ ನಡೆಸುವವರು ಪಟ್ಟು ಹಿಡಿಯುತ್ತಾರೆ. ಅದಕ್ಕೆ ಶುಬ್ಮನ್‌ ಗಿಲ್‌ Sara da sara sach bol diya. May be, maybe not.” ಎಂದು ಉತ್ತರ ಕೊಡುತ್ತಾರೆ.

ಸಾರಾ ಅಲಿ ಖಾನ್‌ ಹಾಗೂ ಶುಬ್ಮನ್‌ ಗಿಲ್‌ ಮುಂಬಯಿಯ ಬಾಸ್ಟಿನ್ ಹೋಟೆಲ್‌ನಲ್ಲಿ ಜತೆಗಿರುವುದನ್ನು ಕಂಡ ಕೆಲವರು ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಬಳಿಕ ಆ ಸುದ್ದಿ ವೈರಲ್‌ ಅಗಿತ್ತು. ಅದೇ ರೀತಿ ಅವರಿಬ್ಬರು ವಿಮಾನವೊಂದರಲ್ಲಿ ಜತೆಯಾಗಿ ಪ್ರಯಾಣಿಸುತ್ತಿರುವ ವಿಡಿಯೊಗಳು ಕೂಡ ಹರಿದಾಡಿದ್ದವು.

ಇದನ್ನೂ ಓದಿ | Shubman Gill | ಮತ್ತೆ ಜತೆಯಾಗಿ ಕಾಣಿಸಿಕೊಂಡರೇ ಸಾರಾ, ಶುಬ್ಮನ್‌ ಗಿಲ್‌? ನೆಟ್ಟಿಗರಿಂದ ಸಿಕ್ಕಾಪಟ್ಟೆ ಚರ್ಚೆ

Exit mobile version