Site icon Vistara News

Shubman Gill: ಶತಕದ ಶ್ರೇಯವನ್ನು ಶ್ರೇಯಸ್​ ಅಯ್ಯರ್​ಗೆ ಅರ್ಪಿಸಿದ ಗಿಲ್​; ಕಾರಣವೇನು?

Shubman Gill sweeps a full toss

ವಿಶಾಖಪಟ್ಟಣಂ: ಹಲವು ಪಂದ್ಯಗಳ ಬಳಿಕ ಟೆಸ್ಟ್​ನಲ್ಲಿ ಶತಕ ಬಾರಿಸಿದ ಶುಭಮನ್​ ಗಿಲ್(Shubman Gill)​ ಅವರು ಈ ಶತಕದ ಶ್ರೇಯವನ್ನು ಸಹ ಆಟಗಾರ ಶ್ರೇಯಸ್ ಅಯ್ಯರ್​ಗೆ(Shreyas Iyer) ಅರ್ಪಿಸಿದ್ದಾರೆ. ಕಳೆದ 11 ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ವೈಫಲ್ಯ ಕಂಡ ಬಳಿಕ ಗಿಲ್​ ಬಾರಿಸಿದ ಶತಕ ಇದಾಗಿತ್ತು.

ಇಂಗ್ಲೆಂಡ್(India vs England 2nd Test)​ ವಿರುದ್ಧ ಇಂದು ನಡೆದ ಮೂರನೇ ದಿನದಾಟದಲ್ಲಿ 4 ರನ್​ ಗಳಿಸಿದ್ದ ವೇಳೆ ಟಾಮ್​ ಹಾರ್ಟ್ಲಿ ಎಸೆತದಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಅಂಪೈರ್​ ಕೂಡ ಔಟ್​ ನೀಡಿದರು. ಆದರೆ, ನಾನ್​ ಸ್ಟ್ರೈಕ್​ನಲ್ಲಿದ್ದ ಶ್ರೇಯಸ್​ ಅವರು ಗಿಲ್​ಗೆ ರಿವ್ಯೂ ಪಡೆಯುವಂತೆ ಒತ್ತಾಯಿಸಿದರು. ಅಯ್ಯರ್​ ಅವರ ಸೂಚನೆಯಂತೆ ಗಿಲ್​ ರಿವ್ಯೂ ಪಡೆದರು. ಈ ವೇಳೆ ಚೆಂಡು ಮೊದಲು ಬ್ಯಾಟ್​ಗೆ ಬಡಿದು ಆ ಬಳಿಕ ಪ್ಯಾಡ್​ಗೆ ಬಡಿದಿರುವುದು ಕಂಡುಬಂತು. ಅಂಪೈರ್​ ತಮ್ಮ ಮನವಿಯನ್ನು ಹಿಂಪಡೆದು ನಾಟ್ ಔಟ್​ ತೀರ್ಪು ನೀಡಿದರು. ಜೀವಾದಾನ ಪಡೆದ ಗಿಲ್​ ಆ ಬಳಿಕ ತಾಳ್ಮೆಯು ಆಟವಾಡುವ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು. ಹೀಗಾಗಿ ಈ ಶತಕವನ್ನು ಅಯ್ಯರ್​ಗೆ ಅರ್ಪಿಸಿದರು.

ಪಂದ್ಯದ ಬಳಿಕ ಮಾತನಾಡಿದ ಗಿಲ್​ ಅವರು, ಈ ಶತಕವನ್ನು ನಾನು ಅಯ್ಯರ್​ಗೆ ಅರ್ಪಿಸುತ್ತೇನೆ. ಏಕೆಂದರೆ ಅವರು ರಿವ್ಯೂ ಪಡೆಯುವಂತೆ ಒತ್ತಾಯಿಸದಿದ್ದರೆ ಈ ಶತಕ ಸಾಧ್ಯವಾಗುತ್ತಿರಲಿಲ್ಲ. ಬ್ಯಾಟ್​ಗೆ ಚೆಂಡು ಬಡಿದಿರುವುದು ನನಗೆ ಅರಿವಿಗೆ ಬಾರದ ಕಾರಣ ನಾನು ನಿರಾಸೆಯಲ್ಲಿ ಪೆವಿಲಿಯನ್​ ಕಡೆಗೆ ತೆರಳಲು ಸಜ್ಜಾಗಿದ್ದೆ. ಈ ವೇಳೆ ಅಯ್ಯರ್​ ಒತ್ತಾಯ ಮಾಡಿ ರಿವ್ಯೂ ಪಡೆಯುವಂತೆ ಹೇಳಿದರು. ಇದರಿಂದ ನಾನು ಸೇಫ್​ ಆದೆ. ಈ ಎಲ್ಲ ಕ್ರೆಡಿಟ್​ ಅವರಿಗೆ ಸಲ್ಲಬೇಕು ಎಂದು ಗಿಲ್​ ಹೇಳಿದರು.

ಇದನ್ನೂ ಓದಿ IND vs ENG 2nd Test: ತಿರುಗೇಟು ನೀಡುತ್ತಿರುವ ಇಂಗ್ಲೆಂಡ್​; ಗೆಲುವಿಗೆ ಬೇಕು 332 ರನ್​

147 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 104 ರನ್​ ಬಾರಿಸಿದರು. ಗಿಲ್​ ಅವರ ಈ ಶತಕದ ಆಟದ ನೆರವಿನಿಂದ ಭಾರತ ದ್ವಿತೀಯ ಇನಿಂಗ್ಸ್​ನಲ್ಲಿ ಉತ್ತಮ ರನ್​ ಗಳಿಸಲು ಸಾಧ್ಯವಾಯಿತು. ಶುಭಮನ್​ ಗಿಲ್​ ಶತಕಕ್ಕೆ ಮಾಜಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(Sachin Tendulkar) ಅವರು ಟ್ವೀಟ್​ ಮೂಲಕ ಮೆಚ್ಚು ಸೂಚಿಸಿದ್ದಾರೆ. ಗಿಲ್​ ಅವರ ಶತಕದ ಫೋಟೊ ಹಂಚಿಕೊಂಡು, “ಶುಭಮನ್ ಗಿಲ್ ಅವರ ಈ ಇನ್ನಿಂಗ್ಸ್ ಕೌಶಲ್ಯದಿಂದ ತುಂಬಿತ್ತು! ಉತ್ತಮ ಸಮಯ. ಶತತಕ್ಕೆ ಅಭಿನಂದನೆಗಳು!” ಎಂದು ಸಚಿನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಶುಭಮನ್​ ಗಿಲ್​ ಆಡಿದ್ದ 11 ಇನಿಂಗ್ಸ್​ನಲ್ಲಿ 13, 8, 6, 10, 29*, 2, 26, 36, 10, 23, 0. ರನ್​ ಬಾರಿಸಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಇದೀಗ ಮತ್ತೆ ತಮ್ಮ ಹಳೆಯ ಬ್ಯಾಟಿಂಗ್ ಲಯಕ್ಕೆ ಮರಳುವಲ್ಲಿ ಯಶಸ್ಸು ಕಂಡಿದ್ದಾರೆ. ​

Exit mobile version