Site icon Vistara News

Shubman Gill: ಗಿಲ್​ ಶತಕಕ್ಕೆ ಸಚಿನ್​ ಸೇರಿ ಹಲವು ದಿಗ್ಗಜರ ದಾಖಲೆ ಪತನ

Shubman Gill got to a hundred off 92 balls

ಇಂದೋರ್​: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಭವಿಷ್ಯದ ಕೊಹ್ಲಿ ಎಂದೇ ಕರೆಯಲ್ಪಡುವ ಶುಭಮನ್​ ಗಿಲ್(Shubman Gill)​ ಅವರು ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಜತೆಗೆ ಹಲವು ಕ್ರಿಕೆಟ್​ ದಿಗ್ಗಜರ ದಾಖಲೆಯನ್ನು ಮುರಿದಿದ್ದಾರೆ.

ಇಂದೋರ್​ನ ಹೋಲ್ಕರ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸೀಸ್​ ಬೌಲರ್​ಗಳ ಬೆವರಿಳಿಸಿದ ಶುಭಮನ್​ ಗಿಲ್​ 97 ಎಸೆತ ಎದುರಿಸಿ 6 ಬೌಂಡರಿ​ ಮತ್ತು 4 ಸಿಕ್ಸರ್​ ನೆರವಿನಿಂದ 104 ರನ್​ ಬಾರಿಸಿ ಮಿಂಚಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 6ನೇ ಶತಕ ಪೂರ್ತಿಗೊಳಿಸಿದರು.

ಸಚಿನ್​,ಕೊಹ್ಲಿ ಜತೆ ಎಲೈಟ್​ ಪಟ್ಟಿಗೆ ಸೇರಿದ ಗಿಲ್

ಶುಭಮನ್​ ಗಿಲ್​ ಅವರು ಈ ಶತಕ ಬಾರಿಸುವ ಕ್ಯಾಲೆಂಡರ್​ ವರ್ಷವೊಂದರಲ್ಲಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಆಟಗಾರರಾದ ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿ ಅವರ ಜತೆ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು. ಕ್ಯಾಲೆಂಡರ್​ ವರ್ಷವೊಂದರಲ್ಲಿ ಅತಿ ಹೆಚ್ಚು 5 ಶತಕ ಬಾರಿಸಿ ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ ಕೊಹ್ಲಿ ಒಟ್ಟು (2012, 2017, 2018, 2019) ನಾಲ್ಕು ಬಾರಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್​ (1996, 1998)​ ಅವರು 2 ಬಾರಿ, ಭಾರತ ತಂಡದ ನಾಯಕ ರೋಹಿತ್​ ಶರ್ಮ(2017, 2018, 2019) ಅವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

ಧವನ್​ ದಾಖಲೆ ಮುರಿದ ಗಿಲ್

ಭಾರತ ತಂಡದ ಪರ ಅತಿ ಕಡಿಮೆ ಇನಿಂಗ್ಸ್​ನಲ್ಲಿ 6 ಶತಕವನ್ನು ಪೂರ್ತಿಗೊಳಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಶುಭಮನ್​ ಗಿಲ್​ ಭಾಜನರಾದರು. ಇದಕ್ಕೂ ಮುನ್ನ ಈ ದಾಖಲೆ ಶಿಖರ್​ ಧವನ್​ ಹೆಸರಿನಲ್ಲಿತ್ತು. ಧವನ್​ 46 ಇನಿಂಗ್ಸ್​ನಲ್ಲಿ ಈ ಮೈಲುಗಲ್ಲು ತಲುಪಿದ್ದರು. ಆದರೆ ಈಗ ಗಿಲ್​ 35 ಇನಿಂಗ್ಸ್​ನಲ್ಲಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ. 25 ವರ್ಷಗಳ ಒಳಗಡೆ ಕ್ಯಾಲೆಂಡರ್​ ವರ್ಷವೊಂದರಲ್ಲಿ 5ಕ್ಕಿಂತ ಹೆಚ್ಚು ಶತಕ ಬಾರಿಸಿದ ಭಾರತದ ಮೂರನೇ ಮತ್ತು ವಿಶ್ವದ 5ನೇ ಆಟಗಾರ ಎನಿಸಿಕೊಂಡರು.

ಇದನ್ನೂ ಓದಿ Shubman Gill: ಪಾಕ್​ ನಾಯಕ ಬಾಬರ್ ಅಜಂ ವಿಶ್ವ ದಾಖಲೆ ಪುಡಿಗಟ್ಟಿದ ಶುಭಮನ್​ ಗಿಲ್​

35 ಇನಿಂಗ್ಸ್​ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಶುಭ್​ಮನ್ ಗಿಲ್ ತಮ್ಮದಾಗಿಸಿಕೊಂಡರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಹಾಶಿಮ್ ಆಮ್ಲ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಹಾಶಿಮ್ ಆಮ್ಲ ಹೆಸರಿನಲ್ಲಿತ್ತು. ಮೊದಲ 35 ಏಕದಿನ ಇನಿಂಗ್ಸ್​ಗಳಲ್ಲಿ ಆಮ್ಲ 1844 ರನ್​ ಬಾರಿಸಿ ದಾಖಲೆ ನಿರ್ಮಿಸಿದ್ದರು. ಆದರೆ ಈಗ ಗಿಲ್​ 35 ಏಕದಿನ ಇನಿಂಗ್ಸ್​ಗಳಲ್ಲಿ 1900+ ರನ್ ಕಲೆಹಾಕುವ ಮೂಲಕ ಆಮ್ಲ ದಾಖಲೆಯನ್ನು ಮುರಿದರು.

Exit mobile version