ಕೊಲೊಂಬೊ : ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ (Shubhman Gill) ಏಕದಿನ ಕ್ರಿಕೆಟ್ನಲ್ಲಿ 5ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಪ್ರಸಕ್ತ ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಗಿಲ್ ಅದ್ಭುತ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ 49ಕ್ಕೂ ಹೆಚ್ಚು ಸರಾಸರಿಯಲ್ಲಿ 1500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಲಿ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಒಡಿಐ ಕ್ರಿಕೆಟ್ನಲ್ಲಿ 1000 ರನ್ಗಳ ಗಡಿಯನ್ನು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಿಲ್ ಈ ವರ್ಷ ಕೇವಲ 17 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಏಕದಿನ ಪಂದ್ಯದಲ್ಲಿ ಅವರ ಅತ್ಯಧಿಕ ಸ್ಕೋರ್ 208 ರನ್ ಆಗಿದ್ದು, ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2023ರ ಜನವರಿ 18ರಂದು ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.
FIFTY for Shubman! 👏🏻
— Star Sports (@StarSportsIndia) September 15, 2023
A towering six brings up back to back fifties for @ShubmanGill as he continues to lead #TeamIndia's charge in a critical run-chase! 💪🏻
Tune-in to #AsiaCupOnStar, LIVE NOW on Star Sports Network#INDvBAN #Cricket pic.twitter.com/kjqDqCgrpL
ಏಷ್ಯಾ ಕಪ್ 2023 ರಲ್ಲಿ, ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ಹೊಂದಿರಲಿಲ್ಲ. ಆದರೆ ಸೂಪರ್ 4 ಹಂತದಲ್ಲಿ ನೇಪಾಳ ಮತ್ತು ನಂತರ ಪಾಕಿಸ್ತಾನ ವಿರುದ್ಧ ಸತತವಾಗಿ ಅರ್ಧಶತಕಗಳನ್ನು ಬಾರಿಸಿ ಪುಟಿದೆದ್ದಿದ್ದರು. ಅವರು ಶ್ರೀಲಂಕಾ ವಿರುದ್ಧ ವೈಫಲ್ಯವನ್ನು ಕಂಡರು. ಆದರೆ ಬಾಂಗ್ಲಾದೇಶದ ವಿರುದ್ಧ ಉತ್ತಮ ಶತಕದೊಂದಿಗೆ ಮುನ್ನೆಲೆಗೆ ಬಂದರು.
ಗಿಲ್ ಆಸರೆ
266 ರನ್ಗಳ ಗುರಿ ಬೆನ್ನಟ್ಟುತ್ತಿದ್ದ ಭಾರತ ತಂಡವು ಭಾರತವು ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ತಿಲಕ್ ವರ್ಮಾ ಅವರನ್ನು ಕಳೆದುಕೊಂಡಿತು ಮತ್ತು 24 ವರ್ಷದ ಆಟಗಾರ ಶಾಂತವಾಗಿ ಆಡುತ್ತಲೇ ಇದ್ದರು. ಅವರು ಇನ್ನೊಂದು ತುದಿಯಲ್ಲಿ ಪಾಲುದಾರರನ್ನು ಕಳೆದುಕೊಳ್ಳುತ್ತಿದ್ದಾಗ, ಗಿಲ್ ಆಟವನ್ನು ನಿಧಾನವಾಗಿ ಮುಂದುವರಿಸಿದರು. ಮೆಹಿದಿ ಹಸನ್ ವಿರುದ್ಧ ಒಂದೆರಡು ಸಿಕ್ಸರ್ಗಳನ್ನು ಹೊಡೆಯುವ ಮೂಲಕ ಮೂಲಕ ವೇಗವನ್ನು ಹೆಚ್ಚಿಸಲು ಪ್ರಾರಂಭಿಸಿದರು.
ಇದನ್ನೂ ಓದಿ: Ravindra Jadeja : ಕಪಿಲ್ ದೇವ್ ಬಳಿಕ ಈ ದಾಖಲೆ ಮಾಡಿದ್ದು ರವೀಂದ್ರ ಜಡೇಜಾ ಮಾತ್ರ; ಏನದು ಸಾಧನೆ?
ನಂತರ ಗಿಲ್ 37 ನೇ ಓವರ್ನಲ್ಲಿ 1000 ರನ್ಗಳ ಗಡಿ ದಾಟಿದರು. ಈ ವರ್ಷ ಆಡಿದ 17 ಏಕದಿನ ಪಂದ್ಯಗಳಲ್ಲಿ, ಗಿಲ್ ಈಗ 71ಕ್ಕಿಂತ ಹೆಚ್ಚಿನ ಸರಾಸರಿ ಮತ್ತು 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ 1000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಗಿಲ್ 117 ಎಸೆತಗಳಲ್ಲಿ ಶತಕವನ್ನು ತಲುಪಿದ್ದರು. ಗಿಲ್ ಅವರ ಇನ್ನಿಂಗ್ಸ್ ಆರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ ಗಳನ್ನು ಒಳಗೊಂಡಿತ್ತು. ಆದರೆ, 121 ರನ್ಗಳನ್ನು ಬಾರಿಸಿ ಅವರು ಔಟಾದರು.