ಹೈದರಾಬಾದ್: ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಪ್ರವಾಸ ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ್ದಾರೆ. ಏಕ ಕ್ರಿಕೆಟ್ನಲ್ಲಿ ಅವರದ್ದು ಚೊಚ್ಚಲ ದ್ವಿಶತಕ. ಈ ಸಾಧನೆಯೊಂದಿಗೆ ಅವರು ಭಾರತ ತಂಡದ ಪರ ದ್ವಿ ಶತಕ ಬಾರಿಸಿದ ಐದನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಭಾರತ ತಂಡದ ಪರ ಏಕ ದಿನ ಕ್ರಿಕೆಟ್ನಲ್ಲಿ ಮೊದಲ ಶತಕ ಬಾರಿಸಿದವರು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 200 ರನ್ ಬಾರಿಸಿದ್ದಾರೆ. 20111ರಲ್ಲಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ದ್ವಿತಕ ಬಾರಿಸಿದರು. ಅವರು ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಮೂರನೆಯವರು ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮ. ಅವರ ಖಾತೆಯಲ್ಲಿ ಒಟ್ಟು ಮೂರು ದ್ವಿ ಶತಕಗಳಿವೆ. 2014ರಲ್ಲಿ ಅವರು ಲಂಕ ತಂಡದ ವಿರುದ್ಧ 266 ರನ್ ಬಾರಿಸಿದ್ದಾರೆ. ಅದಕ್ಕಿಂತ ಮೊದಲು 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಬಾರಿಸಿದ್ದರೆ, 2017ರಲ್ಲಿ ಶ್ರೀಲಂಕಾ ವಿರುದ್ಧವೇ ಅಜೇಯ 208 ರನ್ ಬಾರಿಸಿದ್ದರು.
ನಾಲ್ಕನೇ ಸ್ಥಾನ ಪಡೆದವರು ವಿಕೆಟ್ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್. ಕಳೆದ ತಿಂಗಳು ಭಾರತ ತಂಡ ಬಾಂಗ್ಲಾದೇಶ ಪ್ರವೇಶ ಹೋಗಿದ್ದ ವೇಳೆ 131 ಎಸೆತಗಳಲ್ಲಿ 210 ರನ್ ಬಾರಿಸಿದ್ದರು. ಇವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಆಟಗಾರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ. ಶುಬ್ಮನ್ ಗಿಲ್ ಐದನೇ ಸ್ಥಾನದಲ್ಲಿದ್ದಾರೆ. ಶುಬ್ಮನ್ ಗಿಲ್ 145 ಎಸೆತಗಳಲ್ಲಿ ದ್ವಿ ಶತಕ ಬಾರಿಸಿದ್ದಾರೆ. ಕೊನೆಯಲ್ಲಿ ಸತತ ಮೂರು ಸಿಕ್ಸರ್ ಬಾರಿಸುವ ಮೂಲಕ ದ್ವಿ ಶತಕದ ಗಡಿ ದಾಟಿದ್ದಾರೆ.
ಇದನ್ನೂ ಓದಿ | Ishan Kishan | ಅತಿ ವೇಗದಲ್ಲಿ ದ್ವಿಶತಕ ಬಾರಿಸಿ ದಾಖಲೆ ಬರೆದ ಇಶಾನ್ ಕಿಶನ್ ಯಾರು? ಸಾಧನೆಗಳೇನು?