Site icon Vistara News

ICC Ranking : ಏಕ ದಿನ ಶ್ರೇಯಾಂಕ ಪಟ್ಟಿಯಲ್ಲಿ ಶುಭ್​ಮನ್​ ಗಿಲ್​ಗೆ ಭರ್ಜರಿ ಬಡ್ತಿ

Shubhman Gill

ಮುಂಬಯಿ: ಪುರುಷರ ಏಕದಿನ ಬ್ಯಾಟರ್​ಗಳ ರ್ಯಾಂಕಿಂಗ್​ನಲ್ಲಿ (ICC Ranking) ಟೀಮ್ ಇಂಡಿಯಾದ ಇಬ್ಬರು ಬ್ಯಾಟರ್​ಗಳು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಪಾಕಿಸ್ತಾನದ ಸ್ಟಾರ್ ಬ್ಯಾಟರ್​​ ಬಾಬರ್ ಅಜಮ್ ಏಕದಿನ ಬ್ಯಾಟರ್​​ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಹೊಂದಿದ್ದರೂ, ಭಾರತದ ಏಸ್ ಬ್ಯಾಟರ್​​ ಶುಭ್​​ಮನ್​ ಗಿಲ್ ಈಗ ಶ್ರೇಯಾಂಕದಲ್ಲಿ 3 ನೇ ಸ್ಥಾನಕ್ಕೆ ಏರಿದ್ದಾರೆ.

ಏಷ್ಯಾ ಕಪ್ 2023ರ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಗಿಲ್ ಅವರ ಅದ್ಭುತ ಶತಕದ ನಂತರ ಅವರು 62 ಎಸೆತಗಳಲ್ಲಿ 67* ರನ್ ಗಳಿಸಿದರು. ಇದರಿಂದಾಗಿ ಭಾರತ ತಂಡಕ್ಕೆ 10 ವಿಕೆಟ್​ಗಳ ಸುಲಭ ಗೆಲುವಿಗೆ ಕಾರಣವಾಯಿತು. ಇಶಾನ್ ಕಿಶನ್ ಪಾಕಿಸ್ತಾನ ವಿರುದ್ಧದ 3 ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಶ್ರೇಯಾಂಕದಲ್ಲಿ ಅಗ್ರ 25 ರೊಳಗೆ ಪ್ರವೇಶಿಸಿದರು. 81 ಎಸೆತಗಳಲ್ಲಿ 82 ರನ್ ಗಳಿಸಿದ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ಭಾರತ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಸಹಾಯ ಮಾಡಿತು. ಈ ಶತಕದಿಂದಾಗಿ ಶ್ರೇಯಾಂಕದಲ್ಲಿ 24ನೇ ಸ್ಥಾನಕ್ಕೆ ಅವರನ್ನು ಏರಿಸಿತು.

ಇದನ್ನೂ ಓದಿ : ಭಾರತ್ ಎಂದು ಹೆಸರು ಬದಲಿಸಲು ಸೂಚಿಸಿದ್ದೇ ಮೊಹಮ್ಮದ್​ ಶಮಿ ಪತ್ನಿ; ವರ್ಷಗಳ ಹಿಂದೆ ಮೋದಿಗೆ ಟ್ವೀಟ್

ಕೌಂಟಿ ಕಡೆಗೆ ಹೊರಟ ಚಹಲ್​

ಕ್ರಿಕೆಟಿಗರಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಪ್ರಮುಖ ತಾಣವೇ ಕೌಂಟಿ ಕ್ರಿಕೆಟ್. ಈ ಹಿಂದೆಯೂ ಭಾರತದ ಹಲವಾರು ಕ್ರಿಕೆಟಿಗರು ಭಾರತ ತಂಡದಲ್ಲಿ ಅವಕಾಶ ನಷ್ಟವಾದಾಗ ಕೌಂಟಿ ದಾರಿ ಹಿಡಿದಿದ್ದರು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಈ ಪಟ್ಟಿಯಲ್ಲಿನ ಇತ್ತೀಚಿನ ಹೆಸರು ಯಜ್ವೇಂದ್ರ ಚಹಲ್​ (Yuzvendra Chahal). ಇದೀಗ ಏಷ್ಯಾ ಕಪ್ ಹಾಗೂ ವಿಶ್ವ ಕಪ್​ನಲ್ಲಿ (Worlc Dup 2023) ಅವಕಾಶ ಪಡೆಯದ ಯಜ್ವೇಂದ್ರ ಚಹಲ್​ ಅವರು ಕೌಂಟಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಗಳ ಪ್ರಕಾರ, ಯಜುವೇಂದ್ರ ಚಹಲ್ ಕೌಂಟಿ ಕ್ರಿಕೆಟ್​​ನಲ್ಲಿ ಕೆಂಟ್ ಪರ ಆಡಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡಲಿದೆ. ಚಹಲ್ ಅವರ ಒಟ್ಟು 4 ದಿನಗಳ ಪಂದ್ಯಗಳನ್ನು ಆಡಲಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ಬಿಸಿಸಿಐ ಅವರಿಗೆ ಎನ್ಒಸಿ ನೀಡಿದೆ. ಅವರು ಭಾರತ ತಂಡಕ್ಕೆ ಅಗತ್ಯವಿದ್ದರೆ, ಚಹಲ್ ತಕ್ಷಣವೇ ರಾಷ್ಟ್ರೀಯ ತಂಡವನ್ನು ಸೇರುತ್ತಾರೆ ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.

ಅವಕಾಶ ವಂಚಿತ

ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಸುಮಾರು ಒಂದು ವರ್ಷ ಹೊರಕ್ಕಿದ್ದ ಚಹಲ್​ 2023ರಲ್ಲಿ ಮರು ಅವಕಾಶ ಪಡೆದರು. ಆದರೆ ಅದು ಮುಂದುವರಿಯಲಿಲ್ಲ. ಯಾಕೆಂದರೆ ಅವರು ಸಿಕ್ಕ ಅವಕಾಶ ಅವರಿಗೆ ಪೂರಕವಾಗಿ ಇರಲಿಲ್ಲ. ಚಹಲ್ ಬಿಸಿಸಿಐ ಆಯ್ಕೆ ಸಮಿತಿಯನ್ನು ಮೆಚ್ಚಿಸಲು ಸಿಕ್ಕ ಅವಕಾಶವನ್ನು ವ್ಯರ್ಥ ಮಾಡಿದರು. ಒಂದು ತಿಂಗಳ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಚಹಲ್, ಕೆರಿಬಿಯನ್ ಬ್ಯಾಟರ್​​ಗಳ ಅಬ್ಬರಕ್ಕೆ ಒಳಗಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ವೆಸ್ಟ್ ಇಂಡೀಸ್ ಪ್ರವಾಸವು ಚಹಲ್​ ಪಾಲಿಗೆ ದುಃಸ್ವಲ್ಪ ಎನಿಸಿತು. 33 ವರ್ಷದ ಅವರು 2023 ರಲ್ಲಿ ಭಾರತಕ್ಕಾಗಿ ಕೇವಲ 2 ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ಆ ಮೂಲಕವೇ ಆಯ್ಕೆದಾರರು ಅವರನ್ನು ದೂರವಿರಿಸಲು ನಿರ್ಧರಿಸಿದ್ದಾರೆ ಎಂಬುದು ಬಹಿರಂಗವಾಯಿತು. ಮರಳುವ ಬಗ್ಗೆ ಸ್ವಲ್ಪ ಭರವಸೆಗಳಿದ್ದರೂ, ಸೆಪ್ಟೆಂಬರ್ 5 ರಂದು ಭಾರತವು ವಿಶ್ವಕಪ್ ತಂಡವನ್ನು ಘೋಷಿಸಿದಾಗ ಅದು ಸುಳ್ಳಾಯಿತು.

Exit mobile version