ಢಾಕಾ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 188 ರನ್ಗಳ ಬೃಹತ್ ಜಯ ಕಂಡಿದೆ. ಈ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಡಿಸೆಂಬರ್ 22ರಂದು ಆರಂಭವಾಗಲಿರುವ ಎರಡನೇ ಹಣಾಹಣಿಗೆ ಸಜ್ಜಾಗುತ್ತಿದೆ. ಏತನ್ಮಧ್ಯೆ, ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಬ್ಮನ್ ಗಿಲ್ಗೆ ಬೇಸರದ ಸುದ್ದಿಯೊಂದು ಬಂದಿದೆ. ಅವರನ್ನು ಮುಂದಿನ ಪಂದ್ಯಕ್ಕೆ ತಂಡದಿಂದ ಹೊರಕ್ಕೆ ಇಡುವ ಸಾಧ್ಯತೆಗಳಿವೆ.
ಮೊದಲ ಪಂದ್ಯದ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಂಗಾಮಿ ನಾಯಕ ಕೆ. ಎಲ್ ರಾಹುಲ್. ಕಾಯಂ ನಾಯಕ ರೋಹಿತ್ ಶರ್ಮ ಅವರು ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ ಎಂಬ ಮಾಹಿತಿ ಕೊಟ್ಟಿದ್ದಾರೆ. ಒಂದು ವೇಳೆ ಅವರು ಸಂಪೂರ್ಣ ಫಿಚ್ ಎನಿಸಿಕೊಂಡರೆ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಇಂಥದ್ದೊಂದು ಅವಕಾಶ ಇದ್ದರೆ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಶುಬ್ಮನ್ ಗಿಲ್ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.
ರೋಹಿತ್ ಶರ್ಮ ಅವರ ಸಮಸ್ಯೆ ಗಂಭೀರ ಪ್ರಮಾಣದ್ದೇನೂ ಅಲ್ಲ. ಮುಂಬಯಿಯಲ್ಲಿ ತಪಾಸಣೆ ನಡೆಸಿದ ವೈದ್ಯರು ಅಟ ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಅವರು ಅಭ್ಯಾಸ ಆರಂಭಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವರು ಗುಣಮುಖರಾದರೆ ನೇರವಾಗಿ ಎರಡನೇ ಪಂದ್ಯವನ್ನು ನಡೆಯಲಿರುವ ಮೀರ್ಪುರಕ್ಕೆ ತೆರಳಲಿದ್ದಾರೆ. ಹಾಗಾದರೆ ಶುಬ್ಮನ್ ಗಿಲ್ ಬೆಂಚು ಕಾಯಬೇಕಾಗುತ್ತದೆ.
ಶುಬ್ಮನ್ ಗಿಲ್ ಮೊದಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ (110) ಗೆಲುವಿನ ಶತಕ ಬಾರಿಸಿದ್ದರು. ಹೀಗಾಗಿ ಅವರನ್ನು ತಂಡದಿಂದ ಹೊರಕ್ಕೆ ಇರಿಸಿದರೆ ವಿರೋಧಗಳು ವ್ಯಕ್ತಗೊಳ್ಳಬಹುದು.
ಇದನ್ನೂ ಓದಿ | ICC ODI RANKING | ಏಕಾಏಕಿ 45 ಸ್ಥಾನ ಬಡ್ತಿ ಪಡೆದುಕೊಂಡ ಶುಬ್ಮನ್ ಗಿಲ್