ಜೈಪುರ: ಗುಜರಾತ್ ಟೈಟಾನ್ಸ್(Gujarat Titans) ತಂಡದ ಸ್ಟಾರ್ ಆಟಗಾರ ಶುಭಮನ್ ಗಿಲ್(Shubman Gill) ಅವರು ಐಪಿಎಲ್ನಲ್ಲಿ(IPL 2024) 3 ಸಾವಿರ ರನ್ ಗಳಿಸಿದ ಮೊದಲ ಅತಿ ಕಿರಿಯ ಆಟಗಾರ ಎಂದ ದಾಖಲೆ ಬರೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. ರಾಜಸ್ಥಾನ್ ರಾಯಲ್ಸ್(Rajasthan Royals) ಎದುರಿನ ಪಂದ್ಯದಲ್ಲಿ ಗಿಲ್ ಈ ದಾಖಲೆ ಬರೆದರು. ಕೊಹ್ಲಿ 26 ವರ್ಷದಲ್ಲಿ ಈ ಸಾಧನೆ ಮಾಡಿದರೆ, ಗಿಲ್ ಕೇವಲ 24 ವರ್ಷದಲ್ಲಿ ಈ ದಾಖಲೆಯನ್ನು ಮೀರಿ ನಿಂತರು.
Shubman Gill
— Dinda Academy (@academy_dinda) April 10, 2024
CEO | Academy of Asthetic Shots pic.twitter.com/GqJKF5KHdE
ಜೈಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ತಂಡ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಅವರ ವಿಸ್ಫೋಟಕ ಬ್ಯಾಟಿಂಗ್ ಹಾಗೂ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 196 ರನ್ ಬಾರಿಸಿದೆ. ಈ ಬೃಹತ್ ಮೊತ್ತವನ್ನು ಬೆನ್ನಟ್ಟುವ ವೇಳೆ ಗಿಲ್ ಅವರು 27 ರನ್ ಗಳಿಸುತ್ತಿದ್ದಂತೆ ಐಪಿಎಲ್ನಲ್ಲಿ 3 ಸಾವಿರ ರನ್ಗಳ ಗಡಿ ದಾಟಿದರು. ಇದೇ ವೇಳೆ ಅತಿ ಕಡಿಮೆ ಇನಿಂಗ್ಸ್ನಲ್ಲಿ ಈ ದಾಖಲೆ ಬರೆದ 4ನೇ ಆಟಗಾರ ಎನಿಸಿಕೊಂಡರು. 75 ಇನಿಂಗ್ಸ್ನಿಂದ ಈ ದಾಖಲೆ ಬರೆದ ಕ್ರಿಸ್ ಗೇಲ್ಗೆ ಅಗ್ರಸ್ಥಾನ. ಗಿಲ್ 94 ಇನಿಂಗ್ಸ್ನಿಂದ ಈ ದಾಖಲೆ ಬರೆದರು.
ಇದನ್ನೂ ಓದಿ IPL 2024: ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಪರಾಗ್; ವಿಡಿಯೊ ವೈರಲ್
ಅತಿ ಕಿರಿಯನಾಗಿ ಐಪಿಎಲ್ನಲ್ಲಿ 3 ಸಾವಿರ ರನ್ ಗಳಿಸಿದ ಆಟಗಾರರು
ಶುಭಮನ್ ಗಿಲ್- 24 ವರ್ಷ 215 ದಿನ
ವಿರಾಟ್ ಕೊಹ್ಲಿ-26 ವರ್ಷ 186 ದಿನ
ಸಂಜು ಸ್ಯಾಮ್ಸನ್-26 ವರ್ಷ 320 ದಿನ
ಸುರೇಶ್ ರೈನಾ-27 ವರ್ಷ 161 ದಿನ
ರೋಹಿತ್ ಶರ್ಮ-27 ವರ್ಷ 343 ದಿನ
Youngest at time of 3000 IPL runs:
— CricketGully (@thecricketgully) April 10, 2024
(Cricbuzz)
24y 215 – Shubhman Gill*
26y 186d – Virat Kohli
26y 320d – Sanju Samson
27y 161d – Suresh Raina
27y 343d – Rohit Sharma
📷 BCCI pic.twitter.com/0N0b2k44AN
ಅತಿ ಕಡಿಮೆ ಇನಿಂಗ್ಸ್ನಲ್ಲಿ 3 ಸಾವಿರ ರನ್ ಬಾರಿಸಿ ಆಟಗಾರರು
ಕ್ರಿಸ್ ಗೇಲ್-75 ಇನಿಂಗ್ಸ್
ಕೆಎಲ್ ರಾಹುಲ್-80 ಇನಿಂಗ್ಸ್
ಜಾಸ್ ಬಟ್ಲರ್-85 ಇನಿಂಗ್ಸ್
ಶುಭಮನ್ ಗಿಲ್-94 ಇನಿಂಗ್ಸ್
ಡೇವಿಡ್ ವಾರ್ನರ್-94 ಇನಿಂಗ್ಸ್
ಫಾಫ್ ಡು ಪ್ಲೆಸಿಸ್- 94 ಇನಿಂಗ್ಸ್
ತಾಳ್ಮೆ ಕಳೆದುಕೊಂಡ ಗಿಲ್
ಇದೇ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ವೈಡ್ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡು ಅಂಪೈರ್ ಜತೆ ವಾಗ್ವಾದ ಕೂಡ ನಡೆಸಿದ ಪಸಂಗ ನಡೆಯಿತು. ಮೋಹಿತ್ ಶರ್ಮ ಅವರು ಎಸೆತ ಓವರ್ನಲ್ಲಿ ಅಂಪೈರ್ ವೈಡ್ ನೀಡಿದರು. ಈ ವೇಳೆ ಗಿಲ್ ರಿವ್ಯೂ ಪಡೆದರು. ಸಮಯ ಮುಗಿದಿದೆ ಎಂದು ಅಂಪೈರ್ ಇದನ್ನು ಮಾನ್ಯ ಮಾನ್ಯ ಮಾಡಲಿಲ್ಲ. ಅಸಲಿಗೆ ಗಿಲ್ ನಿಗದಿತ ಸಮಯದಲ್ಲೇ ರಿವ್ಯೂ ಪಡೆದಿದ್ದರು. ಆದರೆ ಇದನ್ನು ಸರಿಯಾಗಿ ಅಂಪೈರ್ ಗಮನಿಸದ ಕಾರಣ ಗೊಂದಲ ಉಂಟಾಯಿತು. ಈ ಸಿಟ್ಟಿನಿಂದ ಗಿಲ್ ಅಂಪೈರ್ ಬಳಿ ಕೊಂಚ ಗರಂ ಆಗಿಯೇ ವರ್ತಿಸಿದರು.