ಚೆನ್ನೈ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಕಾರಣ ಶುಭಮನ್ ಗಿಲ್(Shubman Gill) ಅವರು ಆಸ್ಟ್ರೇಲಿಯಾ(IND vs AUS) ವಿರುದ್ಧದ ಪಂದ್ಯದಿಂದ ಹೊರಗುಳಿದರು. ಅವರ ಬದಲು ಎಡಗೈ ಆಟಗಾರ ಇಶಾನ್ ಕಿಶನ್ಗೆ(Ishan Kishan) ಅವಕಾಶ ನೀಡಲಾಯಿತು. ಆದರೆ ಗಿಲ್ ಸಂಪೂರ್ಣ ಚೇತರಿಕೆ ಕಾಣಲು ಇನ್ನೂ ಕನಿಷ್ಠ 10 ದಿನಗಳ ಸಮಯ ಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾದರೆ ಗಿಲ್ ಮುಂದಿನ ಅಫಘಾನಿಸ್ತಾನ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.
ಶುಕ್ರವಾರ ಸಂಜೆ ಗಿಲ್ ಆರೋಗ್ಯದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ರಾಹುಲ್ ದ್ರಾವಿಡ್, ಶುಭಮನ್ ಗಿಲ್ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ಆತಂಕವಿಲ್ಲ. ಅವರಲ್ಲಿ ಡೆಂಗ್ಯೂವಿನ ಪ್ರಾಥಮಿಕ ಲಕ್ಷಣಗಳು ಮಾತ್ರ ಕಂಡುಬಂದಿದೆ. ಆದರೆ ಅವರನ್ನು ತಂಡದಿಂದ ಹೊರಗಿಡಲಾಗಿಲ್ಲ ಎಂದಿದ್ದರು. ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಅವರು ಗಿಲ್ ಬಗ್ಗೆ ಮಶತನಾಡಿ “ಎಲ್ಲರೂ ಶೇ.100ರಷ್ಟು ಫಿಟ್ ಆಗಿದ್ದಾರೆ, ಆದರೆ ಗಿಲ್ ಫಿಟ್ ಆಗಿಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ ಅವರ ಮೇಲೆ ಪ್ರತಿದಿನವೂ ನಿಗಾ ಇಡುತ್ತಿದೆ. ಶೀಘ್ರದಲ್ಲೇ ಚೇತರಿಕೆ ಕಾಣಲಿದ್ದಾರೆ ಎನ್ನುವ ವಿಶ್ವಾವಿದೆ ಎಂದರು.
ಬಿಸಿಸಿಐ ಮೂಲಗಳ ಪ್ರಕಾರ ಗಿಲ್ ಅವರು ಸಂಪೂರ್ಣ ಗುಣಮುಖರಾಗಲು ಇನ್ನೂ 10 ದಿನಗಳ ಕಾಲಾವಶಾ ಬೇಕು ಎನ್ನಲಾಗಿದೆ. ಜ್ವರ ಕಮ್ಮಿಯಾದರೂ ವೀಕ್ನೆಸ್ ಇದ್ದೇ ಇರುತ್ತದೆ. 50 ಓವರ್ಗಳ ಆಟವಾದ್ದರಿಂದ ಇದು ಅಸಾಧ್ಯ. ಒಂದೊಮ್ಮ ಅವರನ್ನು ಆಡಿಸಿದರೆ ಅಸೌಕ್ಯ ಮತ್ತೆ ಕಾಡಿದರೂ ಕಷ್ಟ ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಗಿಲ್ ಇನ್ನೂ 2 ಪಂದ್ಯ ಆಡುವುದು ಅನುಮಾನವಾಗಿದೆ.
ಇದನ್ನೂ ಓದಿ IND vs AUS: ವಿಶ್ವ ದಾಖಲೆ ನಿರ್ಮಿಸಲು ಸಜ್ಜಾದ ಹಿಟ್ ಮ್ಯಾನ್ ರೋಹಿತ್ ಶರ್ಮ
ಪ್ರತಿಭಾನ್ವಿತ ಆಟಗಾರ
ಗಿಲ್ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ದ್ವಿಶತಕ ಗಳಿಸುವ ಜತಗೆ ಈಗಾಗಕಲೇ ಅತಿ ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಮತ್ತು ಶತಕ ದಾಖಲಿಸಿ ಮಿಂಚುತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಅವರು ಮುಂದಿನ ಸರಣಿಯಲ್ಲಿ ಮತ್ತೆ ಪ್ರಚಂಡ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದರು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್ನಲ್ಲಿ 890 ರನ್ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ತಿಂಗಳು ಮುಕ್ತಾಯ ಕಂಡ ಏಷ್ಯಾ ಕಪ್ನಲ್ಲಿ 302 ರನ್ ಬಾರಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಕೆಲವು ಇನಿಂಗ್ಸ್ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.
ಇಂದಿನ ಪಂದ್ಯಕ್ಕೆ ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ,ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಆ್ಯಡಂ ಜಾಂಪ, ಮಿಚೆಲ್ ಸ್ಟಾರ್ಕ್.