Site icon Vistara News

Shubman Gill: ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡ ಶುಭಮನ್ ಗಿಲ್

Shubman Gill was unable to capitalise on a solid start

ಹೈದರಾಬಾದ್​: ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕಳೆದ ವರ್ಷ ರನ್‌ ಮಳೆಯೇ ಸುರಿಸಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್ ಗಿಲ್(Shubman Gill) ಟೆಸ್ಟ್​ ಕ್ರಿಕೆಟ್​ನಲ್ಲಿ ಫಾರ್ಮ್​ ಕಳೆದುಕೊಂಡಂತಿದೆ. ಇದಕ್ಕೆ ಅವರು ಆಡಿದ ಕಳೆದ 10 ಇನಿಂಗ್ಸ್​ಗಳ ಅಂಕಿ ಅಂಶವೇ ಸಾಕ್ಷಿ.

ಆರಂಭಿಕನಾಗಿ ಆಡುತ್ತಿದ್ದ ಶುಭಮನ್​ ಗಿಲ್ ಇತ್ತೀಚೆಗೆ ಟೆಸ್ಟ್​ನಲ್ಲಿ ಮೂರನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ 10 ಇನಿಂಗ್ಸ್​ನಲ್ಲಿ ಅವರಿಂದ ಒಂದೇ ಒಂದು ಅರ್ಧಶತಕ ಕೂಡ ಬಾರಿಸಲು ಸಾಧ್ಯವಾಗಿಲ್ಲ. ಈ ಕಳಪೆ ಫಾರ್ಮ್ ಹೀಗೆ ಮುಂದುವರಿದರೆ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಬಾಗಿಲು ಬಂದ್​ ಆಗುವ ಸಾಧ್ಯತೆಯೂ ಅಧಿಕವಾಗಿದೆ. ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನ(India vs England 1st Test) ಮೊದಲ ಇನಿಂಗ್ಸ್​ನಲ್ಲಿ ಗಿಲ್​ 23 ರನ್​ ಬಾರಿಸಿ ಮತ್ತೆ ಬ್ಯಾಟಿಂಗ್​ ವೈಫಲ್ಯ ಕಂಡರು.


ಕಳೆದ 10 ಟೆಸ್ಟ್‌ ಇನಿಂಗ್ಸ್‌ನಲ್ಲಿ ಗಿಲ್​ ಗಳಿಸಿದ ಮೊತ್ತ


13
8
6
10
29*
2
26
36
10
23

ಇದನ್ನೂ ಓದಿ IPL 2024: ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ; ಪಾಂಡ್ಯ ಮುಂಬೈ ಪಾಲು!

ಹಿನ್ನಡೆಯಾಯಿತೇ ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆ?


ಶುಭಮನ್​ ಗಿಲ್​ ಅವರು ಆರಂಭಿಕ ಬ್ಯಾಟರ್​ ಆಗಿದ್ದಾರೆ. ಟೆಸ್ಟ್​ನಲ್ಲಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಇದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎನ್ನಬಹುದು. ಏಕೆಂದರೆ ಅವರು ಆರಂಭಿಕನಾಗಿ ಆಡಿದ ಟೆಸ್ಟ್​ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಾರೆ. ಒಟ್ಟಾರೆ ಅವರಿಗೆ ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆ ಕುತ್ತು ತಂದಿದೆ.

ಶುಕ್ರವಾರ 119 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡ ಸದ್ಯ ನಾಲ್ಕು ವಿಕೆಟ್‌ ಕಳೆದುಕೊಂಡು ಬ್ಯಾಟಿಂಗ್​ ನಡೆಸುತ್ತದೆ. ಕನ್ನಡಿಗ ಕೆ.ಎಲ್​ ರಾಹುಲ್​ ಅರ್ಧಶತಕ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. 76 ರನ್​ ಗಳಿಸಿ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದ ಯಶಸ್ವಿ ಜೈಸ್ವಾಲ್ ದ್ವಿತೀಯ ದಿನದಾಟದಲ್ಲಿ 4 ರನ್​ ಬಾರಿಸುವಷ್ಟರಲ್ಲಿ ವಿಕೆಟ್​ ಕಳೆದುಕೊಂಡರು. 80 ರನ್​​ಗೆ ಆಟ ಮುಗಿಸಿ ಶತಕ ಬಾರಿಸುವ ಅವಕಾಶ ಕಳೆದುಕೊಂಡರು.​

Exit mobile version