ನವ ದೆಹಲಿ : ಯುವ ಬ್ಯಾಟರ್ ಶುಬ್ಮನ್ ಗಿಲ್ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ ೮೨ ರನ್ ಬಾರಿಸಿದ್ದರು. ಅಂತೆಯೇ ಎರಡನೇ ಪಂದ್ಯದಲ್ಲೂ ೩೩ ರನ್ ಬಾರಿಸಿಗೆ ಗೆಲುವಿಗೆ ತಮ್ಮ ಕೊಡುಗೆ ಕೊಟ್ಟಿದ್ದರು. ಅದಕ್ಕಿಂತ ಹಿಂದಿನ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಉತ್ತಮ ಸಾಧನೆ ತೋರಿದ್ದರು. ಹೀಗಾಗಿ ಅವರನ್ನ ಭಾರತ ತಂಡದ (Team India) ನಾಯಕರಾಗಿ ಆಯ್ಕೆ ಮಾಡಲು ಮುಂದಾಗಿದೆ ಬಿಸಿಸಿಐ. ಆದರೆ ಹಿರಿಯರ ತಂಡವಲ್ಲ. ಭಾರತ ಎ ತಂಡ.
ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸ ಮಾಡಲಿದೆ. ಟೆಸ್ಟ್ ಸರಣಿಗೆ ಮೊದಲ ಭಾರತ ಎ ತಂಡ ಪ್ರವಾಸಿ ಬಳಗದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಯುವ ಆಟಗಾರರನ್ನು ಒಳಗೊಂಡಿರುವ ಆ ತಂಡಕ್ಕೆ ಶುಬ್ಮನ್ ಗಿಲ್ ನಾಯಕನ ಜವಾಬ್ದಾರಿ ನೀಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಇದರಲ್ಲಿ ನಾಲ್ಕು ದಿನಗಳು ಅಭ್ಯಾಸ ಪಂದ್ಯ ಹಾಗೂ ಏಕದಿನ ಅಭ್ಯಾಸ ಪಂದ್ಯಗಳು ಸೇರಿಕೊಂಡಿವೆ. ನಾಲ್ಕು ದಿನಗಳ ಅಭ್ಯಾಸ ಪಂದ್ಯ ಸೆಪ್ಟೆಂಬರ್ ೧ರಿಂದ೪, ೮-೧೧, ೧೫-೧೮ರವರೆಗೆ ನಡೆಯಲಿದ್ದು, ಇದಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ. ಅಂತೆಯೇ ಸೆಪ್ಟೆಂಬರ್ ೨೨, ೨೫ ಹಾಗೂ ೨೭ರಂದು ಏಕದಿನ ಅಭ್ಯಾಸ ನಡೆಯಲಿದ್ದು, ಈ ಹಣಾಹಣಿಗಳು ಚೆನ್ನೈನಲ್ಲಿ ನಡೆಯಲಿವೆ.
ಬಿಸಿಸಿಐ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದೆರೆ ಆ ತಂಡದಲ್ಲಿ ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಕೆ. ಎಸ್ ಭರರತ್, ಮೊಹಮ್ಮದ್ ಸಿರಾಜ್ ಸೇರಿದಂತೆ ಪ್ರತಿಭಾವಂತ ಆಟಗಾರರೂ ಅವಕಾಶ ಪಡೆಯಲಿದ್ದಾರೆ. ರಣಜಿ ಪಂದಯದಲ್ಲಿ ಮುಂಬಯಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್, ಶಮ್ಸ್ ಮುಲಾನಿ, ಮಧ್ಯಪ್ರದೇಶದ ಯಶ್ ದುಬೆ, ಶುಭಂ ಶರ್ಮಾ, ರಜತ್ ಪಾಟೀದಾರ್ ಕೂಡ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ.
ಸಂಭಾವ್ಯ ತಂಡಗಳು
ನಾಲ್ಕು ದಿನಗಳ ಅಭ್ಯಾಸ ಪಂದ್ಯಕ್ಕೆ : ಶುಬ್ಮನ್ ಗಿಲ್ (ನಾಯಕ), ಯಶ್ ದುಬೆ, ಹನುಮ ವಿಹಾರಿ, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆ. ಎಸ್ ಭರತ್, ಶಮ್ಸ್ ಮುಲಾನಿ, ಜಲಜ್ ಸಕ್ಸೇನಾ, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶುಭಂ ಶರ್ಮ, ಅಕ್ಷಯ್ ವಾಡ್ಕರ್, ಶಹಬಾಜ್ ಅಹಮದ್, ಮಣಿಶಂಕರ್ ಮುರಸಿಂಗ್.
ಏಕದಿನ ತಂಡ : ಶುಬ್ಮನ್ ಗಿಲ್ (ನಾಯಕ), ಪೃಥ್ವಿ ಶಾ, ರುತುರಾಜ್ ಗಾಯಕ್ವಾಡ್, ಹನುಮ ವಿಹಾರಿ, ಇಶಾನ್ ಕಿಶನ್, ರಿಶಿ ಧವನ್, ವಾಷಿಂಗ್ಟನ್ ಸುಂದರ್, ಪ್ರವೀಣ್ ದುಬೆ, ಮಯಾಂಕ್ ಮಾರ್ಕಂಡೆ, ಪ್ರುಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಕೆ.ಎಸ್ ಭರತ್, ವೆಂಕಟೇಶ್ ಅಯ್ಯರ್, ಪುಲ್ಕಿತ್ ನಾರಂಗ್, ರಾಹುಲ್ ಚಾಹರ್, ಯಸ್ ದಯಾಲ್.
ಇದನ್ನೂ ಓದಿ | IND vs ZIM ODI | ಧವನ್- ಗಿಲ್ ಜೋಡಿಯ ಕಮಾಲ್, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ