Site icon Vistara News

ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿ ಭಾರತೀಯರದ್ದೇ ಪ್ರಾಬಲ್ಯ

ICC men's ODI cricketer of the year

ದುಬೈ: ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ(ICC ODI Cricketer of the Year) ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಹೆಸರನ್ನು ಪ್ರಕಟಿಸಿದ್ದು ಈ ಪಟ್ಟಿಯಲ್ಲಿ ಭಾರತದ ತಂಡದ ಆಟಗಾರರೇ ಪ್ರಾಬಲ್ಯ ಮೆರೆದಿದ್ದಾರೆ. ನಾಲ್ವರು ಆಟಗಾರ ಪೈಕಿ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ನಾಮನಿರ್ದೇಶನಗೊಂಡ ಆಟಗಾರರೆಂದರೆ ವಿರಾಟ್ ಕೊಹ್ಲಿ(Virat Kohli), ಶುಭ್​ಮನ್ ಗಿಲ್(Shubman Gill), ಮೊಹಮ್ಮದ್ ಶಮಿ(Mohammed Shami) ಮತ್ತು ನ್ಯೂಜಿಲ್ಯಾಂಡ್​ನ ಡೇರಿಯಲ್ ಮಿಚೆಲ್(Daryl Mitchell). ಮೂವರು ಭಾರತೀಯರ ಪೈಕಿ ಓರ್ವ ಭಾರತೀಯ ಆಟಗಾರ ಈ ಪ್ರಶಸ್ತಿ ಪಡೆಯುವುದರಲ್ಲಿ ಅನುಮಾನವ ಇಲ್ಲ.

ಕೊಹ್ಲಿ ಸಾಧನೆ

ವಿರಾಟ್ ಕೊಹ್ಲಿ 2023 ರಲ್ಲಿ ಒಟ್ಟು 27 ಏಕದಿನ ಪಂದ್ಯಗಳನ್ನಾಡಿ 1,377 ರನ್ ಬಾರಿಸಿದ್ದರು. ಜತೆಗೆ ಒಂದು ವಿಕೆಟ್ ಕೂಡ ಪಡೆದಿದ್ದರು. 12 ಕ್ಯಾಚ್‌ ಸಾಧನೆಯೂ ಸೇರಿದೆ. ಕದಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೊಹ್ಲಿ 11 ಇನ್ನಿಂಗ್ಸ್‌ಗಳಲ್ಲಿ 765 ರನ್‌ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಏಕದಿನ ಕ್ರಿಕೆಟ್​ನಲ್ಲಿ ಸಚಿನ್​ ಅವರ ಸಾರ್ವಕಾಲಿಕ 49 ಶತಕದ ದಾಖಲೆ ಮುರಿದು 50 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೂ ಕೊಹ್ಲಿ ಪಾತ್ರರಾಗಿದ್ದರು.

ಮೊಹಮ್ಮದ್​ ಶಮಿ

ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ಪ್ರದರ್ಶನ ತೋರಿದ್ದ ಟೀಮ್​ ಇಂಡಿಯಾದ ಅನುಭವಿ ಬೌಲರ್​ ಮೊಹಮ್ಮದ್​ ಶಮಿ 2023ರಲ್ಲಿ ಒಟ್ಟು 19 ಪಂದ್ಯಗಳನ್ನು ಆಡಿ 43 ವಿಕೆಟ್​, 36 ರನ್​ ಮತ್ತು 3 ಕ್ಯಾಚ್​ ಹಿಡಿದ ಸಾಧನೆ ಮಾಡಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​

ಇದನ್ನೂ ಓದಿ IND vs SA 2nd Test: ಪಂದ್ಯ ಗೆದ್ದು ನೂತನ ದಾಖಲೆ ಬರೆದ ಭಾರತ ತಂಡ

ಶುಭಮನ್​ ಗಿಲ್​

ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್ ಗಿಲ್ 2023ರಲ್ಲಿ 29 ಏಕದಿನ ಪಂದ್ಯಗಳನ್ನಾಡಿ 63.36 ಸರಾಸರಿಯಲ್ಲಿ 1584 ರನ್ ಬಾರಿಸಿದ್ದಾರೆ. 24 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ. ಒಟ್ಟು ಐದು ಶತಕ ಮತ್ತು ಒಂದು ದ್ವಿಶತಕ ಕೂಡ ಬಾರಿಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಶುಭ್​ಮನ್ ಗಿಲ್ ಒಟ್ಟು 354 ರನ್ ಬಾರಿಸಿದ್ದರು.


ಡೇರಿಯಲ್ ಮಿಚೆಲ್​


ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಸ್ಟಾರ್​ ಆಟಗಾರ ಡೇರಿಯಲ್ ಮಿಚೆಲ್​ ಕಳೆದ ವರ್ಷ 26 ಏಕದಿನ ಪಂದ್ಯ ಆಡಿ 1204 ರನ್ ಬಾರಿಸಿದ್ದರೆ ಜತೆಗೆ 9 ವಿಕೆಟ್ ಮತ್ತು 22 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಲೀಗ್​ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಒಟ್ಟಾರೆ ಅವರು ಆಡಿದ 10 ಪಂದ್ಯಗಳಿಂದ 552 ರನ್​ ಬಾರಿಸಿದ್ದರು.

Exit mobile version