ಬೆಂಗಳೂರು: ಶುಬ್ಮನ್ ಗಿಲ್ ತಮ್ಮ ಸಹ ಆಟಗಾರ ಮೊಹಮ್ಮದ್ ಸಿರಾಜ್ ಮತ್ತು ಇಂಗ್ಲೆಂಡ್ ಆರಂಭಿಕ ಆಟಗಾರ ಡೇವಿಡ್ ಮಲಾನ್ ಅವರನ್ನು ಸೋಲಿಸಿ ವರ್ಷದಲ್ಲಿ ಎರಡನೇ ಬಾರಿಗೆ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಭಾರತದ ಏಷ್ಯಾ ಕಪ್ ವಿಜಯ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲುವಿನಲ್ಲಿ ಅವರ ಸಾಧನೆಗಳಿಗಾಗಿ ಗಿಲ್ ಅವರನ್ನು ಸೆಪ್ಟೆಂಬರ್ 2023 ರಲ್ಲಿ ತಿಂಗಳ ಆಟಗಾರ ಎಂದು ಘೋಷಿಸಲಾಗಿದೆ.
ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶುಬ್ಮನ್ ಗಿಲ್ ಪಾತ್ರರಾಗಿದ್ದಾರೆ. 2023 ರ ಜನವರಿಯಲ್ಲಿ ಶುಬ್ಮನ್ ಅವರಿಗೆ ಈ ಗೌರವವನ್ನು ನೀಡಲಾಗಿತ್ತು. ಈ ವೇಳೆ ಅವರು ಏಕದಿನ ಕ್ರಿಕೆಟ್ನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದ್ದರು.
Indian Men's cricketers to win ICC player of the month award:
— Johns. (@CricCrazyJohns) October 13, 2023
1) Rishabh Pant
2) Ravichandran Ashwin
3) Bhuvneshwar Kumar
4) Shreyas Iyer
5) Virat Kohli
6) Shubman Gill
7) Shubman Gill
– Shubman Gill becomes the first Indian to win the award twice…..!!!! pic.twitter.com/jCx9jWVdx4
ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಭಾರತದ ವಿಶ್ವಕಪ್ ಅಭಿಯಾನದ ಮೊದಲ ಎರಡು ಪಂದ್ಯಗಳನ್ನು ಶುಭಮನ್ ಗಿಲ್ ಆಡಿಲ್ಲ. ಅವರು 2023ರಲ್ಲಿ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ 1230 ರನ್ ಬಾರಿಸಿದ್ದಾರೆ. 5 ಶತಕಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಏತನ್ಮಧ್ಯೆ, ಶ್ರೀಲಂಕಾದ ಮಹಿಳಾ ಕ್ರಿಕೆಟರ್ ಚಾಮರಿ ಅಟ್ಟಪಟ್ಟು ಕಳೆದ ತಿಂಗಳು ಟಿ 20 ಐ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಧನೆಗಳ ಹಿನ್ನೆಲೆಯಲ್ಲಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ
ಶುಭ್ಮನ್ ಗಿಲ್ ಏಕೆ?
ಸೆಪ್ಟೆಂಬರ್ ತಿಂಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ 24 ವರ್ಷದ ಆಟಗಾರ ರನ್ಗಳ ಮಹಾಪೂರವೇ ಹರಿಸಿದ್ದರು. ಏಷ್ಯಾ ಕಪ್ನಲ್ಲಿ ನೇಪಾಳ ಮತ್ತು ಪಾಕಿಸ್ತಾನ ವಿರುದ್ಧ ಅರ್ಧಶತಕಗಳನ್ನು ಬಾರಿಸಿದ್ದರು. ಸೂಪರ್ ಸಿಕ್ಸ್ ಹಂತದಲ್ಲಿ ಕೊಲಂಬೊದಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿದ್ದರು. ಫೈನಲ್ ಪಂದ್ಯದಲ್ಲಿ ಲಂಕಾ ನೀಡಿದ್ದ 51 ರನ್ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಅವರು ಶ್ರಮ ವಹಿಸಿದ್ದರು.
ಏಷ್ಯಾ ಕಪ್ ಮುಕ್ತಾಯದ ನಂತರ ಗಿಲ್ ಆಸ್ಟ್ರೇಲಿಯಾ ವಿರುದ್ಧದ ನಂತರದ ಸರಣಿಯಲ್ಲಿ ಮತ್ತೊಮ್ಮೆ ಮಿಂಚಿದ್ದರು. ಮೊಹಾಲಿಯಲ್ಲಿ 74 ರನ್ ಮತ್ತು ಇಂದೋರ್ನಲ್ಲಿ 104 ರನ್ ಗಳಿಸಿದರು. ಕ್ಯಾಲೆಂಡರ್ ತಿಂಗಳಲ್ಲಿ ಅವರು 80 ಸರಾಸರಿಯಲ್ಲಿ 480 ರನ್ ಗಳಿಸಿದ್ದರು. 99.37 ಸ್ಟ್ರೈಕ್ ರೇಟ್ ಹೊಂದಿದ್ದರು.
ಈ ಸುದ್ದಿಗಳನ್ನೂ ಓದಿ
Cricket in LA28 : ಇದು ಅಧಿಕೃತ ಮಾಹಿತಿ; ಅಮೆರಿಕ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತು ಸ್ಕ್ವಾಷ್ ಫಿಕ್ಸ್
IND vs PAK: ಯಾರಿಗೆ ನೆರವು ನೀಡಲಿದೆ ಮೋದಿ ಸ್ಟೇಡಿಯಂ ಪಿಚ್? ಸಂಭಾವ್ಯ ತಂಡ ಹೀಗಿದೆ
ನಾನು ಕ್ಯಾನ್ಸರ್ ಇದ್ದೂ ಆಡಿದೆ, ನಿನ್ನದೇನು? ಶುಭಮನ್ ಗಿಲ್‌ಗೆ ಧೈರ್ಯ ತುಂಬಿದ ಯುವರಾಜ್!
ಐಸಿಸಿ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ಗಿಲ್, ಈ ಪ್ರಶಸ್ತಿಯು ಭಾರತಕ್ಕಾಗಿ ಮುಂಬರುವ ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಸೆಪ್ಟೆಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನನಗೆ ಸಂತೋಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತು ತಂಡದ ಉದ್ದೇಶಕ್ಕಾಗಿ ಕೊಡುಗೆ ನೀಡುವುದು ದೊಡ್ಡ ಗೌರವವಾಗಿದೆ. ಈ ಪ್ರಶಸ್ತಿಯು ಶ್ರೇಷ್ಠತೆಯನ್ನು ಮುಂದುವರಿಸಲು ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡಲು ನನ್ನನ್ನು ಮತ್ತಷ್ಟು ಪ್ರೇರೇಪಿಸುತ್ತದೆ”ಎಂದು ಶುಬ್ಮನ್ ಗಿಲ್ ಐಸಿಸಿ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಏಷ್ಯಾ ಕಪ್ 2023 ಅನ್ನು ಗೆಲ್ಲುವ ಅದೃಷ್ಟವನ್ನು ಹೊಂದಿದ್ದ ನಾನು ತಂಡಕ್ಕೆ ಉಪಯುಕ್ತ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಎಲ್ಲಾ ಸಹ ಆಟಗಾರರು, ಕುಟುಂಬ ಮತ್ತು ತರಬೇತುದಾರರಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅಹಮದಾಬಾದ್ನಲ್ಲಿ ಗಿಲ್
ಡೆಂಗ್ಯೂನಿಂದ ಚೇತರಿಸಿಕೊಂಡಿರುವ ಗಿಲ್ ಅಹಮದಾಬಾದ್ಗೆ ಹಾರಿದ್ದಾರೆ. ಅಲ್ಲಿ ಅಕ್ಟೋಬರ್ 14 ರಂದು ನಡೆಯಲಿರುವ ವಿಶ್ವಕಪ್ 2023 ರ ದೊಡ್ಡ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ. ಗಿಲ್ ಗುರುವಾರ ನೆಟ್ಸ್ನಲ್ಲಿ ಅಭ್ಯಾಸ ಮಾಡಿದ್ದಾರೆ. ಅವರು ಶನಿವಾರದ ದೊಡ್ಡ ಪಂದ್ಯವನ್ನು ಆಡುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.