Site icon Vistara News

WTC Final 2023 : ಅಂಪೈರ್​ ನಿರ್ಧಾರ ಪ್ರಶ್ನಿಸಿದ್ರೆ ಸುಮ್ನೆ ಬಿಡ್ತಾರಾ? ಶುಭ್​ಮನ್​ ಗಿಲ್​ಗೆ ಸಂಬಳಕ್ಕಿಂತ ಜಾಸ್ತಿ ಫೈನ್​!

Shubhman Gill

#image_title

ಲಂಡನ್​: ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ನಡುವೆ ಶುಭ್​ಮನ್​ ಗಿಲ್​ ಅವರಿಗೆ ಥರ್ಡ್ ಅಂಪೈರ್​ ನೀಡಿದ ಔಟ್​ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಕ್ಯಾಮೆರಾನ್ ಗ್ರೀನ್ ಹಿಡಿದ ಕ್ಯಾಚ್ ನ್ಯಾಯಯುತವಲ್ಲ ಎಂದು ಭಾರತ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹಿರಿಯ ಕ್ರಿಕೆಟಿಗರೂ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರೆಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಅಧಿಕಾರವಿದೆ. ಆದರೆ, ಆಟಗಾರರಿಗೆ ಈ ರೀತಿ ಕಂಡಕಂಡಲ್ಲಿ ಟೀಕೆ ಮಾಡುವ ಅಧಿಕಾರ ಇಲ್ಲ. ಮಾಡಿದರೆ ಐಸಿಸಿ ನಿಯಮದ ಪ್ರಕಾರ ತಪ್ಪು. ಆದರೆ, ಈ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳದ ಶುಭ್​ಮನ್​ ಗಿಲ್​ ಅಂಪೈರ್​ ತೀರ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ಆ ತಪ್ಪಿಗಾಗಿ ಅವರು ಇದೀಗ ಶೇಕಡಾ 115ರಷ್ಟು ದಂಡ ಕಟ್ಟಬೇಕಾಗಿದೆ.

ಅಂತಾರಾಷ್ಟ್ರೀಯ ಪಂದ್ಯದ ವೇಳೆ ನಡೆದ ಘಟನೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಪ್ರತಿಕ್ರಿಯೆಯ ನಿಯಮ 2.7 ಉಲ್ಲಂಘಿಸಿದ್ದಕ್ಕಾಗಿ ಶುಭ್​​ಮನ್​ ಗಿಲ್​ಗೆ ದಂಡ ವಿಧಿಸಲಾಗಿದೆ. ಪಂದ್ಯದ ನಾಲ್ಕನೇ ಇನಿಂಗ್ಸ್ ವೇಳೆ ಭಾರತ ತಂಡ 444 ರನ್​​ಗಳ ಚೇಸಿಂಗ್ ಮಾಡುತ್ತಿದ್ದ ವೇಳೆ ಶುಭ್​ಮನ್​ ಗಿಲ್​ ಅವರು ಬಾರಿಸಿದ ಚೆಂಡನ್ನು ಫೀಲ್ಡರ್​ ಕ್ಯಾಮೆರಾನ್​ ಗ್ರೀನ್​​ ಅವರು ಹಿಡಿದಿದ್ದರು. ಚೆಂಡು ನೆಲಕ್ಕೆ ತಲುಗಿದಂತೆ ಕಂಡ ಹೊರತಾಗಿಯೂ ಮೂರನೇ ಅಂಪೈರ್​ ಚೆಂಡಿನ ಕೆಳಗೆ ಬೆರಳುಗಳಿದ್ದವು ಎಂಬ ಅಂಶದ ಮೇಲೆ ಔಟ್​ ನೀಡಿದ್ದರು.

ಅಂಪೈರ್ ತೀರ್ಪಿನಿಂದ ನಿರಾಶೆಗೊಂಡ ಭಾರತದ ಆರಂಭಿಕ ಆಟಗಾರ ಟ್ವಿಟರ್​ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು. ಗಿಲ್​ ವರ್ತನೆ ಐಸಿಸಿಯ ಪಂದ್ಯದ ನಿಯಮಗಳ ಆರ್ಟಿಕಲ್ 2.7 ಉಲ್ಲಂಘನೆಯಾಗಿರುವ ಕಾರಣ 15% ಪಂದ್ಯದ ಶುಲ್ಕದ ಜೊತೆಗೆ, ಭಾರತದ ಆರಂಭಿಕ ಆಟಗಾರನಿಗೆ 100% ಪಂದ್ಯದ ಶುಲ್ಕವನ್ನು ಸಹ ವಿಧಿಸಿತು.

ಭಾರತ ತಂಡದ ಎಲ್ಲ ಆಟಗಾರರಿಗೂ ಶೇಕಡಾ 100 ದಂಡ

ದಂಡ ವಿಧಿಸಿದೆ. ಹೀಗಾಗಿ ಸೋಲಿನ ಸುಳಿಗೆ ಬೇಸರದಲ್ಲಿದ್ದ ಭಾರತ ತಂಡದ ಆಟಗಾರರಿಗೆ ಮತ್ತೊಂದು ಆಘಾತ ಎದುರಾಗಿದೆ. ಇದೇ ವೇಳೆ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿರುವ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ತಂಡಕ್ಕೂ ಶೇಕಡಾ 80ರಷ್ಟು ದಂಡ ವಿಧಿಸಲಾಗಿದೆ.

ಟೀಮ್ ಇಂಡಿಯಾವು ನಿಗದಿತ ಓವರ್​​ಗಳು ಮುಕ್ತಾಯಗೊಳ್ಳಬೇಕಾದ ಅವಧಿಯ ವೇಳೆ ಐದು ಓವರ್​​ಗಳ ಕೊರತೆ ಎದುರಿಸಿದ್ದರು. ಹೀಗಾಗಿ ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ದಂಡ ವಿಧಿಸಿದ್ದಾರೆ. ಕನಿಷ್ಠ ಓವರ್ ರೇಟ್ ತಪ್ಪುಗಳಿಗೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ತಂಡದ ಪ್ರತಿ ಓವರ್​​ಗೆ ಪಂದ್ಯದ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಲಾಗುತ್ತದೆ. ಭಾರತ ತಂಡ ಐದು ಓವರ್​​ಗಳ ಕೊರತೆ ಎದುರಿಸಿದ್ದ ಕಾರಣ ಅಷ್ಟೂ ಶುಲ್ಕವನ್ನು ಕಟ್ಟಬೇಕಾಗಿದೆ.

ಇತ್ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ತಮ್ಮ ತಪ್ಪನ್ನು ಮ್ಯಾಚ್​ ರೆಫರಿ ಮುಂದೆ ಒಪ್ಪಿಕೊಂಡಿದ್ದಾರೆ. ನಿರ್ದೇನಗಳಿಗೂ ಅವರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : WTC Final 2023 : ನಮ್ಮ ತಂಡ ಚೆನ್ನಾಗಿದೆ, ಆಟಗಾರರು ಸರಿಯಿಲ್ಲ! ಮಾಜಿ ಆಟಗಾರನ ಮಾತಿನೇಟು

ಓವಲ್​ನಲ್ಲಿ ನಡೆದ ಪಂದ್ಯದ ಕೊನೇಯ ಇನಿಂಗ್ಸ್​ನಲ್ಲಿ ಭಾರತ ತಂಡಕ್ಕೆ 444 ರನ್​​ಗಳ ಗೆಲುವಿನ ಗುರಿ ಎದುರಾಗಿತ್ತು. ಆದರೆ ಭಾರತ 234 ರನ್​​ಗಳಿಗೆ ಆಲೌಟ್ ಆದ ಕಾರಣ ಆಸ್ಟ್ರೇಲಿಯಾ 209 ರನ್​​ಗಳಿಂದ ಗೆದ್ದು ಮೊದಲ ಡಬ್ಲ್ಯುಟಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್​ ಬಾರಿಸಿತ್ತು. ಹೆಡ್ 174 ಎಸೆತಗಳಲ್ಲಿ 163 ರನ್ ಗಳಿಸಿದರೆ, ಸ್ಮಿತ್ 268 ಎಸೆತಗಳಲ್ಲಿ 121 ರನ್ ಗಳಿಸಿದ್ದರು. ಅಜಿಂಕ್ಯ ರಹಾನೆ (89) ಮತ್ತು ಶಾರ್ದೂಲ್ ಠಾಕೂರ್ (51) ಅವರ ಅರ್ಧಶತಕದ ನೆರವಿನಿಂದ ಭಾರತ ಮೊದಲ ಇನಿಂಗ್ಸ್​ನಲ್ಲಿ 296 ರನ್ ಬಾರಿಸಿತ್ತು.

ಒಂದು ಹಂತದಲ್ಲಿ ಬೃಹತ್ ಗುರಿ ಬೆನ್ನಟ್ಟುವ ವಿಶ್ವಾಸ ಮೂಡಿಸಿದ್ದ ಭಾರತ, ಅಂತಿಮ ದಿನ ಕೇವಲ 55 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಈ ಪ್ರಶಸ್ತಿ ಮೂಲಕ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ವಿಶ್ವ ಕಪ್​ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಯಿತು.

Exit mobile version