Site icon Vistara News

Cricket Records: ವಿಲಿಯಮ್ಸ್ ದಾಖಲೆ ಮುರಿದ ಜಿಂಬಾಬ್ವೆ ಕ್ರಿಕೆಟಿಗ

ICC Cricket World Cup Qualifiers 2023

ಹರಾರೆ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾವಳಿಯಲ್ಲಿ(ICC Cricket World Cup Qualifiers 2023) ಜಿಂಬಾಬ್ವೆ ತಂಡದ ಆಲ್​​ರೌಂಡರ್ ಸಿಕಂದರ್ ರಾಜಾ (Sikandar Raza) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್​​ನಲ್ಲಿ ವೇಗದ ಶತಕ(Cricket Records) ಸಿಡಿಸಿದ ಆಟಗಾರ ಎಂಬ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ. ಈ ಮೂಲಕ ಮೂಲಕ ಸೀನ್ ವಿಲಿಯಮ್ಸ್ (Sean Williams) ಅವರ ಈ ದಾಖಲೆಯನ್ನು ಮುರಿದಿದ್ದಾರೆ.

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಕಂದರ್ ರಾಜಾ ಅವರು ಈ ಸಾಧನೆ ಮಾಡಿದರು. ಅವರ ಈ ಶತಕದ ಪರಾಕ್ರಮದಿಂದ ಜಿಂಬಾಬ್ವೆ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ನೆದರ್ಲೆಂಡ್ಸ್‌ 6 ವಿಕೆಟ್‌ ನಷ್ಟಕ್ಕೆ 315 ರನ್‌ ಪೇರಿಸಿತು. ಜಿಂಬಾಬ್ವೆ ಕೇವಲ 40.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 319 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಈ ಮೂಲಕ ಜಿಂಬಾಬ್ವೆ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಸದ್ಯ ‘ಎ’ ಗೂಪ್​ನಲ್ಲಿ ಅಗ್ರಸ್ಥಾನ ಪಡೆದಿದೆ.

ಚೇಸಿಂಗ್​ ವೇಳೆ ಸಿಡಿಲಬ್ಬರ ಬ್ಯಾಟಿಂಗ್​ ಪ್ರದರ್ಶಿಸಿದ ಸಿಕಂದರ್ ರಾಜಾ ಕೇವಲ 54 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ನೆರವಿನಿಂದ 102 ರನ್ ಚಚ್ಚಿದರು. ಬೌಲಿಂಗ್​ನಲ್ಲಿಯೂ ಮಿಂಚಿದ ಅವರು 4 ವಿಕೆಟ್​ ಕಿತ್ತು ಆಲ್​ರೌಂಡರ್ ಪ್ರದರ್ಶನ ತೋರಿದರು.

ಸಿಡಿಲಬ್ಬರದ ಶತಕ ಬಾರಿಸಿದ ವೇಳೆ ಅವರು ಜಿಂಬಾಬ್ವೆ ಪರ ಅತಿ ವೇಗದ ಶತಕ ಸಿಡಿಸಿಸ ದಾಖಲೆಯನ್ನು ಬರೆದಯರು. ನೇಪಾಳ ವಿರುದ್ಧದ ಪಂದ್ಯದಲ್ಲಿ ಸೀನ್ ವಿಲಿಯಮ್ಸ್ 70 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ದಾಖಲೆ ಬರೆದ 2 ದಿನಗಳ ಅಂತರದಲ್ಲಿ ಸಿಕಂದರ್​ ರಾಜಾ ಶತಕ ಬಾರಿಸಿ ದಾಖಲೆಯನ್ನು ಮುರಿದಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ ರಾಜಾ ಅವರು ಈ ಸಾಧನೆ ಮಾಡಿದ 21ನೇ ಆಟಗಾರನಾಗಿದ್ದಾರೆ.

ಇದನ್ನೂ ಓದಿ Richest Women Cricketers: “The Richest 8: Women Cricket’s Fortune Legends!”

ಅತಿ ವೇಗದ ಶತಕ ಯಾರ ಹೆಸರಿನಲ್ಲಿದೆ?

ಏಕದಿನ ಕ್ರಿಕೆಟ್​​ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ದಾಖಲೆ ದಕ್ಷಿಣ ಆಫ್ರಿಕಾ ತಂಡ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್(AB Devilliers) ಹೆಸರಿನಲ್ಲಿದೆ. ಅವರು ಕೇವಲ 31 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ. ಭಾರತ ಪರ ವಿರಾಟ್ ಕೊಹ್ಲಿ (Virat Kohli) 52 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

Exit mobile version